ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕ ಸಮರ : ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಕಣಕ್ಕಿಳಿಯಲ್ಲ!

|
Google Oneindia Kannada News

ಪಾಟ್ನಾ, ಮಾರ್ಚ್ 11: ಬಿಹಾರದ ಹಾಜಿಪುರ ಲೋಕಸಭಾ ಕ್ಷೇತ್ರದಲ್ಲಿ ಒಂದು ಕಾಲದಲ್ಲಿ ಭಾರಿ ಅಂತರದಲ್ಲಿ ಗೆದ್ದು ಗಿನ್ನೀಸ್ ದಾಖಲೆ ಬರೆದಿದ್ದ ಪ್ರಮುಖ ರಾಜಕಾರಣಿ, ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಈ ಬಾರಿ ಲೋಕಸಭೆಗೆ ಸ್ಪರ್ಧಿಸುವುದು ಅನುಮಾನ ಎಂಬ ಸುದ್ದಿ ಬಂದಿದೆ.

ಪಾಸ್ವಾನ್ ಅವರು ರಾಜ್ಯಸಭಾ ಸದಸ್ಯರಾಗಿ ಸಂಸತ್ ಪ್ರವೇಶಿಸಲು ಬಯಸಿದ್ದಾರೆ ಎಂದು ಅವರ ಸೋದರ ಪಶುಪತಿ ಪಾರಸ್ ಹೇಳಿದ್ದಾರೆ.

Lok sabha Elections 2019: Ram Vilas Paswan wont contest

'ಇದು ಆತುರದ ನಿರ್ಧಾರವಲ್ಲ. ಪಾಸ್ವಾನ್ ಅವರ ಸ್ಪರ್ಧೆ ಕುರಿತು ಎರಡು ತಿಂಗಳ ಹಿಂದೆಯೇ ನಿರ್ಧಾರ ಕೈಗೊಳ್ಳಲಾಗಿತ್ತು. ಎನ್ಡಿಎ ಮೈತ್ರಿಕೂಟದ ಭಾಗವಾಗಿರುವ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷದ ನೆರವಿನಿಂದ ಬಿಹಾರದಲ್ಲಿ ಪ್ರಧಾನಿ ಮೋದಿ ಅವರಿಗೆ ಉತ್ತಮ ಫಲಿತಾಂಶ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಗೆ ಆಘಾತ ನೀಡಿದ ಉಪೇಂದ್ರ ಕುಶ್ವಾಹ ನಡೆಬಿಜೆಪಿಗೆ ಆಘಾತ ನೀಡಿದ ಉಪೇಂದ್ರ ಕುಶ್ವಾಹ ನಡೆ

72 ವರ್ಷ ವಯಸ್ಸಿನ ಪಾಸ್ವಾನ್ ಅವರು 1977ರಲ್ಲಿ ಹಾಜಿಪುರದಲ್ಲಿ 4.24 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ ಬಳಿಕ, ಹಿಂತಿರುಗಿ ನೋಡಿಲ್ಲ, ಮೂರು ದಶಕಗಳಿಂದ ಈ ಕ್ಷೇತ್ರದಲ್ಲಿ ಅವರದ್ದೇ ಪ್ರಾಬಲ್ಯ.

ಸೀಟು ಹಂಚಿಕೆ : ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (ಎಲ್ ಜೆಪಿ) ತನ್ನ ಸೀಟು ಹಂಚಿಕೆ ದಾಳವನ್ನು ಉರುಳಿಸಿತ್ತು. ಅಲ್ಲದೆ, ಒಂದು ರಾಜ್ಯಸಭೆ ಸ್ಥಾನಕ್ಕೂ ಬೇಡಿಕೆ ಇಟ್ಟಿತ್ತು. ಎಲ್ ಜೆಪಿಯ ಎಲ್ಲಾ ಬೇಡಿಕೆಗೆ ಬಿಜೆಪಿ ಅಸ್ತು ಎಂದಿತ್ತು.

ಹಾಜಿಪುರ: ಗಿನ್ನಿಸ್ ದಾಖಲೆ ಬರೆದ ಪಾಸ್ವಾನ್ ಸ್ವಕ್ಷೇತ್ರ ಹಾಜಿಪುರ: ಗಿನ್ನಿಸ್ ದಾಖಲೆ ಬರೆದ ಪಾಸ್ವಾನ್ ಸ್ವಕ್ಷೇತ್ರ

ಬಿಹಾರದ 40 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 17, ಜನತಾ ದಳ (ಯುನೈಟೆಡ್) 17, ಲೋಕ ಜನಶಕ್ತಿ ಪಾರ್ಟಿ 6 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.

English summary
Lok sabha Elections 2019: Minister Ram Vilas Paswan Won't Contest This National Polls, said his brother Pashupati Paras.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X