ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ: ತೇಜಸ್ವಿ ಅನುಪಸ್ಥಿತಿಯಲ್ಲಿ ಮಹಾಘಟಬಂದನ್ ಸೀಟು ಹಂಚಿಕೆ ಅಂತಿಮ

|
Google Oneindia Kannada News

ಪಾಟ್ನಾ, ಮಾರ್ಚ್ 22: ಲೋಕಸಭೆ ಚುನಾವಣೆಯಲ್ಲಿ ಮಹಾ ಮೈತ್ರಿಕೂಟ ಉಗಮ ಸ್ಥಾನವಾಗಿರುವ ಬಿಹಾರದಲ್ಲಿ ವಿಪಕ್ಷಗಳ ಮಹಾಘಟಬಂದನ್ ಇಂದು ಸೀಟು ಹಂಚಿಕೆಯನ್ನು ಅಂತಿಮಗೊಳಿಸಿವೆ.

ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾದಳ ಪಕ್ಷವು(ಆರ್​ಜೆಡಿ) 20 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಕಾಂಗ್ರೆಸ್ಸಿಗೆ 9 ಸ್ಥಾನಗಳನ್ನು ಬಿಟ್ಟುಕೊಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಲಾಗಿದೆ. ಈ ಸಂದರ್ಭದಲ್ಲಿ ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಉಪಸ್ಥಿತರಿರಲಿಲ್ಲ.

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ : ಕೆ.ಸಿ.ವೇಣುಗೋಪಾಲ್‌ಗೆ ಟಿಕೆಟ್ ಇಲ್ಲಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ : ಕೆ.ಸಿ.ವೇಣುಗೋಪಾಲ್‌ಗೆ ಟಿಕೆಟ್ ಇಲ್ಲ

ಬಿಹಾರದ ಮಹಾಘಟಬಂದನ್ ನಲ್ಲಿ ರಾಷ್ಟ್ರೀಯ ಜನತಾ ದಳ(ಆರ್ ಜೆಡಿ), ಶರದ್ ಯಾದವ್ ಅವರ ಲೋಕ್ ಜನತಾಂತ್ರಿಕ್ ದಳ (ಎಲ್ ಜೆಡಿ), ಜಿತನ್ ರಾಮ್ ಮಾಂಝಿ ಹಿಂದುಸ್ತಾನಿ ಅವಾಮ್ ಮೋರ್ಚಾ(ಎಚ್ಎಎಂ) ಹಾಗೂ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಸಮತಾ ಪಾರ್ಟಿ(ಆರ್ ಎಲ್ ಎಸ್ ಪಿ) ಸೇರಿವೆ.

Lok Sabha elections 2019: Grand alliance seals Bihar seat-sharing deal, RJD to contest on 20

ಆರ್​ಜೆಡಿಯ ರಾಷ್ಟ್ರೀಯ ವಕ್ತಾರ ಆರ್ ಜೆಡಿ ಮುಖಂಡ ಮನೋಜ್ ಝಾ ಮಾತನಾಡಿ, ಆರ್ ಜೆಡಿ 20, ಕಾಂಗ್ರೆಸ್ 9, ಎಚ್ಎಎಂ 3, ಆರ್ ಎಲ್ ಎಸ್ ಪಿ 5,ವಿಕಾಸ್ ಶೀಲ ಇನ್ಸಾನ್​ ಪಕ್ಷ(ವಿಐಪಿ) 3, ಸಿಪಿಐ-1 ನೀಡಲಾಗಿದೆ. ಲೋಕತಾಂತ್ರಿಕ ಪಕ್ಷದ ನಾಯಕರಾಗಿರುವ ಶರದ್​ ಯಾದವ್​ಅವರು ಆರ್​ಜೆಡಿ ಚಿಹ್ನೆ ಅಡಿಯಲ್ಲಿ ಸ್ಪರ್ಧೆ ಮಾಡಲಿದೆ. ಲೋಕಸಭಾ ಚುನಾವಣೆ ನಂತರ ತನ್ನ ಪಕ್ಷವನ್ನು ಆರ್​ಜೆಡಿಯೊಂದಿಗೆ ವಿಲೀನಗೊಳಿಸಲಿದ್ದಾರೆ ಎಂದು ಹೇಳಿದರು.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಹಿಂದೂಸ್ತಾನಿ ಅವಾಮ್​ ಮೋರ್ಚಾ(ಎಚ್​ಎಎಮ್​)ದ ಮುಖ್ಯಸ್ಥ ಜಿತನ್​ ರಾಮ್ ಮಾಂಜಿ ಅವರು ಗಯಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಎಚ್ಎಎಮ್ ನ ಉಪೇಂದ್ರ ಪ್ರಸಾದ್​ ಔರಂಗಬಾದ್​ನಿಂದ ಸ್ಪರ್ಧಿಸಲಿದ್ದಾರೆ. ಆರ್​ಜೆಡಿಯ ವಿಭಾ ದೇವಿ ನಾವಾಡದಿಂದ ಹಾಗೂ ಆರ್​ಎಲ್​ಎಸ್​ಪಿ ಪಕ್ಷದ ಭೂದೇವ್​ ಚೌದರಿಯವರು ಜಮುಯಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

English summary
Grand alliance sealed Bihar seat-sharing deal on Friday with Lalu Prasad Yadav's RJD to contest on 20 Seats, and Congress on 9 seats. RJD leader Tejashwi Yadav was not present during the announcement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X