ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ಬಿಹಾರದಲ್ಲಿ ಮತದಾನಕ್ಕೆ ತೆರಳಲು ತಾತ್ಕಾಲಿಕ ಸೇತುವೆ!

|
Google Oneindia Kannada News

ಪಾಟ್ನಾ, ನವೆಂಬರ್.07: ಬಿಹಾರ 243 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರನೇ ಹಂತದಲ್ಲಿ 16 ಜಿಲ್ಲೆಗಳ 78 ಕ್ಷೇತ್ರಗಳಿಗೆ ಚುರುಕಿನ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆ ವೇಳೆಗೆ 34.82ರಷ್ಟು ಮತದಾನವಾಗಿದೆ. ಇದರ ನಡುವೆ ಬಿಹಾರದ ಒಂದು ಮತಗಟ್ಟೆಯು ಸಾಕಷ್ಟು ಗಮನ ಸೆಳೆದಿದೆ.

ದರ್ಬಾಂಗ ಮತಗಟ್ಟೆಯನ್ನು ತಲುಪುವುದಕ್ಕೆ ಮತದಾರರಿಗೆ ಒಂದು ಸೂಕ್ತ ಮಾರ್ಗವೇ ಇರಲಿಲ್ಲ. ಈ ಪರಿಸ್ಥಿತಿಯನ್ನು ಮನಗಂಡು ಸ್ಥಳೀಯರೇ ವಿನೂತನ ಪ್ರಯತ್ನ ಮಾಡಿದ್ದಾರೆ. ಮತದಾನ ಕೇಂದ್ರಕ್ಕೆ ತೆರಳಲು ತಾತ್ಕಾಲಿಕವಾಗಿ ಸೇತುವೆಯೊಂದನ್ನು ನಿರ್ಮಿಸಿಕೊಂಡಿದ್ದಾರೆ.

Karnataka By Elections 2020 Live Updates; ಆರ್.ಆರ್ ನಗರ ಶೇ.45.24, ಶಿರಾದಲ್ಲಿ ಶೇ.82.31 ರಷ್ಟು ಮತದಾನKarnataka By Elections 2020 Live Updates; ಆರ್.ಆರ್ ನಗರ ಶೇ.45.24, ಶಿರಾದಲ್ಲಿ ಶೇ.82.31 ರಷ್ಟು ಮತದಾನ

ದರ್ಬಾಂಗ ಮತಗಟ್ಟೆಗೆ ತೆರಳುವುದಕ್ಕಾಗಿ ಈ ಗ್ರಾಮದ ಜನರು ನದಿ ದಾಟುವುದು ಅನಿವಾರ್ಯವಾಗಿದೆ. ಹೀಗಾಗಿ ದನರು ಸುಲಭವಾಗಿ ಸಂಚರಿಸುವುದಕ್ಕೆ ಅನುಕೂಲವಾಗಲಿ ಎಂದು ನಾವೇ ಸೇರಿಕೊಂಡು ಒಂದು ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿದ್ದೇವೆ. ಇದೀಗ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾವಣೆ ಮಾಡುತ್ತಿದ್ದಾರೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

Locals Build A Temporary Bridge In Darbanga To Help Voters

ಸೇತುವೆ ದಾಟುವ ವಿಡಿಯೋ ವೈರಲ್:

ಬಿಹಾರದ ದರ್ಬಾಂಗದಲ್ಲಿ ಮತಗಟ್ಟೆಗೆ ತೆರಳುವುದಕ್ಕಾಗಿ ತಾತ್ಕಾಲಿಕ ಸೇತುವೆ ಮೇಲೆ ಮತದಾರರು ನಡೆದು ಹೋಗುತ್ತಿರುವ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಾಜ್ಯದ 243 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರನೇ ಹಾಗೂ ಅಂತಿಮ ಹಂತದಲ್ಲಿ 16 ಜಿಲ್ಲೆಗಳ 78 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಈ ಬಾರಿ 2.35 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಮೂರನೇ ಹಂತದ ಚುನಾವಣೆಯ ಕಣದಲ್ಲಿ 382 ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ 1204 ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಈ ಪೈಕಿ 1094 ಪುರುಷ ಅಭ್ಯರ್ಥಿಗಳಾಗಿದ್ದರೆ, 110 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 3ನೇ ಹಂತದಲ್ಲಿ ಒಟ್ಟು 2,35 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, ಈ ಪೈಕಿ 1.23 ಕೋಟಿ ಪುರುಷ ಹಾಗೂ 1.12ರಷ್ಟು ಮಹಿಳಾ ಮತದಾರರಿದ್ದಾರೆ.

English summary
Bihar Assembly Election 2020: Locals Build A Temporary Bridge In Darbanga To Help Voters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X