ಲಾಲೂ ದೊಡ್ಡ ಮಗನಿಂದ 'ತೇಜ್ ಸೇನಾ' ಆನ್ ಲೈನ್ ವೇದಿಕೆ ಘೋಷಣೆ
ಲಾಲೂ ಪ್ರಸಾದ್ ಯಾದವ್ ರ ದೊಡ್ಡ ಮಗ ತೇಜ್ ಪ್ರತಾಪ್ ಯಾದವ್ ಅವರು, ಜೂನ್ ಇಪ್ಪತ್ತೆಂಟನೇ ತಾರೀಕು 'ತೇಜ್ ಸೇನಾ' ಎಂಬ ಆನ್ ಲೈನ್ ವೇದಿಕೆ ಆರಂಭಿಸುವುದಾಗಿ ಗುರುವಾರ ಘೋಷಣೆ ಮಾಡಿದ್ದಾರೆ. ಬದಲಾವಣೆ ಮಾಡುವವರಿಗಾಗಿ ಆನ್ ಲೈನ್ ವೇದಿಕೆ. ಬದಲಾವಣೆಗಾಗಿ ತೇಜ್ ಸೇನಾಗೆ ಸೇರ್ಪಡೆಯಾಗಿ ಎಂದು ಬಿಹಾರದ ಮಹುವಾ ಕ್ಷೇತ್ರದಿಂದ ಆರ್ ಜೆಡಿ ಶಾಸಕ ಕೂಡ ಆಗಿರುವ ತೇಜ್ ಪ್ರತಾಪ್ ಯಾದವ್ ಘೋಷಣೆ ಮಾಡಿದ್ದಾರೆ.
ಮಗನೇ, ಸಾಕು... ಮನೆಗೆ ವಾಪಸ್ ಬಾ! ರಾಬ್ಡಿ ದೇವಿ ಭಾವುಕ ಮನವಿ
ಬಿಹಾರದ ಪ್ರಮುಖ ವಿರೋಧ ಪಕ್ಷವೂ ಆಗಿರುವ ಆರ್ ಜೆಡಿಯು ಈಚೆಗೆ ಮುಕ್ತಾಯವಾದ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿತು. ಒಂದು ಸ್ಥಾನ ಕೂಡ ಜಯಿಸಲು ಸಾಧ್ಯವಾಗಿರಲಿಲ್ಲ. ಲಾಲೂ ಪ್ರಸಾದ್ ಯಾದವ್ ರ ಕಿರಿಯ ಮಗ ಹಾಗೂ ಲಾಲೂ ಉತ್ತರಾಧಿಕಾರಿ ಎಂದು ಬಿಂಬಿಸಲಾಗಿರುವ ತೇಜಸ್ವಿ ಯಾದವ್ ಚುನಾವಣೆಗಾಗಿ ಪಕ್ಷವನ್ನು ಮುನ್ನಡೆಸಿದ್ದರು.
ಆರ್ ಜೆಡಿಯಲ್ಲಿ ತನ್ನನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಆರೋಪಿಸಿದ ತೇಜ್ ಪ್ರತಾಪ್ ಹೊಸ ರಾಜಕೀಯ ಪಕ್ಷ ಶುರು ಮಾಡಿ, ಅದಕ್ಕೆ 'ಲಾಲೂ-ರಾಬ್ರಿ ಮೋರ್ಚಾ' ಎಂದು ಹೆಸರಿಟ್ಟು, ಅದರಿಂದ ತನ್ನ ಆಯ್ಕೆಯ ಅಭ್ಯರ್ಥಿಗಳನ್ನು ಲೋಕಸಭಾ ಚುನಾವಣೆಗೆ ಕಣಕ್ಕೆ ಇಳಿಸಿದ್ದರು.