ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದಲ್ಲಿ ಮಾತ್ರ ಎನ್ಡಿಎ ಜೊತೆ ಜೆಡಿಯು ದೋಸ್ತಿ : ನಿತೀಶ್ ಕುಮಾರ್

|
Google Oneindia Kannada News

ಪಾಟ್ನಾ, ಜೂನ್ 09: ಲೋಕಸಭೆ ಚುನಾವಣೆ 2019ರಲ್ಲಿ ಭರ್ಜರಿ ಫಲಿತಾಂಶದೊಂದಿಗೆ ಮೋದಿ ನೇತೃತ್ವದ ಮೋದಿ ಸರ್ಕಾರ್ 2.0 ಸ್ಥಾಪನೆಯಾಗಿದೆ. ಆದರೆ, ಮಿತ್ರಪಕ್ಷ ಜೆಡಿಯು ಜೊತೆ ತಿಕ್ಕಾಟ ಮುಂದುವರೆದಿದೆ. ಮೋದಿ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಜೆಡಿಯುಗೆ ಪ್ರಾತಿನಿಧ್ಯ ಸಿಕ್ಕಿರಲಿಲ್ಲ. ಈ ಬಗ್ಗೆ ಜೆಡಿಯು ಯಾವ ನಡೆ ಇಡಲಿದೆ ಎಂಬ ಕುತೂಹಲ ಮನೆ ಮಾಡಿತ್ತು.

ಈ ನಡುವೆ ನಾಲ್ವರನ್ನು ಗೆಲ್ಲಿಸಿಕೊಟ್ಟಿದ್ದ ಎಲ್ ಜೆಪಿಯ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ಸಿಕ್ಕಿತ್ತು. ಇದೆಲ್ಲದರ ನಂತರದ ಬೆಳವಣಿಗೆ ರೂಪದಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ.

JD (U) to be part of NDA only in Bihar

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಿವಾಸದಲ್ಲಿ ಭಾನುವಾರದಂದು ನಡೆದ ತನ್ನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ, ಬಿಹಾರದಲ್ಲಿ ಮಾತ್ರ ಜೆಡಿಯು ಎನ್ಡಿಎ ಭಾಗವಾಗಿರಲಿದೆ.

ಕೇಂದ್ರದಲ್ಲಿ ಕೊಡಲು ಬಂದ 'ಒಂದಕ್ಕೆ' ಪ್ರತಿಯಾಗಿ 'ಒಂದನ್ನೇ' ಕೊಟ್ಟರೆ ನಿತೀಶ್? ಕೇಂದ್ರದಲ್ಲಿ ಕೊಡಲು ಬಂದ 'ಒಂದಕ್ಕೆ' ಪ್ರತಿಯಾಗಿ 'ಒಂದನ್ನೇ' ಕೊಟ್ಟರೆ ನಿತೀಶ್?

ಬಿಹಾರದ ಹೊರಗೆ ಜೆಡಿಯು ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ. ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ, ಜಾರ್ಖಂಡ್, ಹರ್ಯಾಣ ಜಮ್ಮು ಮತ್ತು ಕಾಶ್ಮೀರ ಹಾಗೂ ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಜೆಡಿಯು ಏಕಾಂಗಿ ಸ್ಪರ್ಧಿಸಲಿದೆ.

ಆದರೆ, 2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಯು ಮೈತ್ರಿ ಮುಂದುವರೆಯಲಿದೆ ಎಂದು ನಿತೀಶ್ ಹೇಳಿದ್ದಾರೆ.

ಮೋದಿ 2.0 ಸರ್ಕಾರದಲ್ಲಿ ಎರಡು ಸಚಿವ ಸ್ಥಾನಗಳನ್ನು ನೀಡುವಂತೆ ಜೆಡಿಯು ಬೇಡಿಕೆ ಇಟ್ಟಿತ್ತು. ಆದರೆ, ಮೋದಿ- ಶಾ ಅವರು ಒಂದು ಸ್ಥಾನವನ್ನು ನೀಡುವುದಾಗಿ ಹೇಳಿದ್ದರು. ಇದರಿಂದ ತೃಪ್ತರಾಗದ ನಿತೀಶ್, ಮೋದಿ ಸರ್ಕಾರದ ಭಾಗವಾಗದಿರಲು ನಿರ್ಧರಿಸಿದರು.

ಇದಾದ ಬಳಿಕ ಸಂಪುಟ ವಿಸ್ತರಣೆ ಮಾಡಿದ್ದ ನಿತೀಶ್, ಜೆಡಿಯುಗೆ 8 ಸ್ಥಾನ ಹಾಗೂ ಬಿಜೆಪಿಗೆ ಒಂದು ಸ್ಥಾನ ನೀಡಿದ್ದರು. ನಂತರ ಹಜ್ ಭವನದಲ್ಲಿ ಜೆಡಿಯುವಿನಿಂದ ಆಯೋಜನೆಗೊಂಡಿದ್ದ ಇಫ್ತಾರ್ ಕೂಟಕ್ಕೆ ಯಾವೊಬ್ಬ ಬಿಜೆಪಿ ನಾಯಕರು ಬಂದಿರಲಿಲ್ಲ. ಡಿಸಿಎಂ ಸುಶೀಲ್ ಮೋದಿ ಆಯೋಜನೆಯ ಇಫ್ತಾರ್ ಕೂಟದಲ್ಲಿ ಜೆಡಿಯು ನಾಯಕರು ಕಾಣಿಸಿಕೊಂಡಿರಲಿಲ್ಲ.

ಲೋಕಸಭೆ ಚುನಾವಣೆ 2019ರಲ್ಲಿ ಬಿಹಾರದಲ್ಲಿ ಜೆಡಿಯು 16 ಹಾಗೂ ಬಿಜೆಪಿ 17 ಸ್ಥಾನವನ್ನು ಗಳಿಸಿತ್ತು.

English summary
Amid friction between the two parties post Lok Sabha polls, the Janata Dal (United) on Sunday decided that it would not be part of the BJP-led NDA outside the state of Bihar, where the two parties have allied to form government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X