ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಂದೆಯನ್ನು ಕೂರಿಸಿ 1200 ಕಿ.ಮೀ ಸೈಕಲ್ ತುಳಿದ ಯುವತಿಗೆ ಇವಾಂಕಾ ಟ್ರಂಪ್ ಮೆಚ್ಚುಗೆ

|
Google Oneindia Kannada News

ಪಾಟ್ನಾ, ಮೇ 23: ಅಪ್ಪನನ್ನು ಕೂರಿಸಿಕೊಂಡು ಸುಮಾರು 1200 ಕಿ.ಮೀ ಸೈಕಲ್ ತುಳಿದಿರುವ ಯುವತಿ ಈಗ ಜಗತ್ತಿನಾದ್ಯಂತ ಖ್ಯಾತಿ ಪಡೆಯುತ್ತಿದ್ದಾಳೆ. ಕೊರೊನಾ ವೈರಸ್‌ ಲಾಕ್‌ಡೌನ್‌ನಿಂದ ದೆಹಲಿಯಲ್ಲಿ ಸಿಲುಕಿಕೊಂಡಿದ್ದ ಜ್ಯೋತಿ ಕುಮಾರಿ ಮತ್ತು ಆಕೆಯ ತಂದೆ ಬಿಹಾರದಲ್ಲಿರುವ ತಮ್ಮ ಸ್ವಗ್ರಾಮಕ್ಕೆ ಬರಲು ಏಳು ದಿನಗಳು ಸಮಯ ತೆಗೆದುಕೊಂಡಿದ್ದರು.

Recommended Video

ಅಮೇರಿಕಾದ ಶ್ವೇತ ಭವನದ ಎದುರು ಶಾಂತಿ ಸ್ತೋತ್ರ ಪಠಿಸಿದ ಅರ್ಚಕರು | USA | Oneindia Kannada

ರಾತ್ರಿ-ಹಗಲು ಸೈಕಲ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ಆ ಏಳು ದಿನಗಳ ಜರ್ನಿಯಲ್ಲಿ ಯಾವ ಸರ್ಕಾರವೂ, ಯಾವ ಜಿಲ್ಲಾಡಳಿತವೂ, ಯಾವ ಜನನಾಯಕರು ಈ ತಂದೆ-ಮಗಳ ಕಷ್ಟಕ್ಕೆ ಸ್ಪಂದಿಸಿಲಿಲ್ಲ.

ಅಪ್ಪನನ್ನು ಕೂರಿಸಿ 1200 ಕಿ.ಮಿ ಸೈಕಲ್ ತುಳಿದ ಯುವತಿಗೆ ಭರ್ಜರಿ ಆಫರ್ಅಪ್ಪನನ್ನು ಕೂರಿಸಿ 1200 ಕಿ.ಮಿ ಸೈಕಲ್ ತುಳಿದ ಯುವತಿಗೆ ಭರ್ಜರಿ ಆಫರ್

ಆದ್ರೀಗ, ಒಬ್ಬೊಬ್ಬರೆ ಜ್ಯೋತಿಯ ಸಾಧನೆಯನ್ನು ಕೊಂಡಾಡುತ್ತಿದ್ದಾರೆ. ಜ್ಯೋತಿ ವಿಚಾರದಲ್ಲಿ ಸಂತಸದ ಸುದ್ದಿ ಏನಪ್ಪಾ ಅಂದ್ರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಗಳು ಇವಾಂಕಾ ಟ್ರಂಪ್ ಈಕೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

ಇದೊಂದು ಸುಂದರ ಪ್ರೀತಿಯ ಸಾಧನೆ

ಇದೊಂದು ಸುಂದರ ಪ್ರೀತಿಯ ಸಾಧನೆ

ಅಪ್ಪನನ್ನು ಕೂರಿಸಿಕೊಂಡು 1200 ಕಿ.ಮೀ ಸೈಕಲ್‌ ತುಳಿದ ಯುವತಿಯ ಸ್ಟೋರಿ ಗಮನಿಸಿದರುವ ಇವಾಂಕಾ ಟ್ರಂಪ್, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆ ಸುದ್ದಿ ಪೋಸ್ಟ್ ಮಾಡಿ ''ಸುಂದರ ಪ್ರೀತಿ ಮತ್ತು ಸಹಿಷ್ಣುತೆಯ ಈ ಸಾಧನೆಯನ್ನು ಭಾರತೀಯ ಜನರು ಹಾಗೂ ಸೈಕ್ಲಿಂಗ್ ಫೆಡರೇಷನ್ ಸೆರೆಹಿಡಿದಿದೆ'' ಎಂದು ಟ್ವೀಟ್ ಮಾಡಿದ್ದಾರೆ. ಇವಾಂಕಾ ಪೋಸ್ಟ್ ಗೆ 73.1k ಲೈಕ್ಸ್ ಬಂದಿದೆ. 16.4k ರಿ-ಟ್ವೀಟ್ ಆಗಿದೆ. 6.8k ಜನರು ಕಾಮೆಂಟ್ ಮಾಡಿದ್ದಾರೆ.

1 ಲಕ್ಷ ನೀಡುವುದಾಗಿ ಘೋಷಿಸಿದ ಅಖಿಲೇಶ್

1 ಲಕ್ಷ ನೀಡುವುದಾಗಿ ಘೋಷಿಸಿದ ಅಖಿಲೇಶ್

ಈ ಯುವತಿಯ ಸಾಧನೆ ಗಮನಿಸಿದ್ದ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಆಕೆಗೆ ಒಂದು ಲಕ್ಷ ಹಣ ನೀಡುವುದಾಗಿ ಟ್ವಿಟ್ಟರ್‌ನಲ್ಲಿ ಹೇಳಿದ್ದರು. ''ಆ ಹುಡುಗಿ ಧೈರ್ಯಶಾಲಿ, ನಾವು ಮತ್ತು ದೇಶದ ಮಹಿಳೆಯವರು ಅವರೊಂದಿಗೆ ಇದ್ದೇವೆ. ಅವರ ಧೈರ್ಯಕ್ಕೆ ನಾನು ನಮಸ್ಕರಿಸುತ್ತೇನೆ. ನಾನು ಅವರಿಗೆ ಒಂದು ಲಕ್ಷ ರೂಪಾಯಿ ಕಳುಹಿಸಿಕೊಡುತ್ತೇನೆ'' ಎಂದು ಟ್ವೀಟ್ ಮಾಡಿದ್ದರು.

ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಆಫರ್

ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಆಫರ್

ಅಪ್ಪನನ್ನು ಕೂರಿಸಿಕೊಂಡು ಸುಮಾರು 1200 ಕಿ.ಮೀ ಸೈಕಲ್ ತುಳಿದಿರುವ ಯುವತಿಗೆ ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಆಫರ್ ನೀಡಿದೆ. ಜ್ಯೋತಿ ಸೈಕ್ಲಿಂಗ್ ಟ್ರಯಲ್ಸ್ ಪಾಸ್ ಮಾಡಿದರೆ, ದೆಹಲಿಯ ಇಂದಿರಾ ಗಾಂಧಿ ಇಂಡೋರ್ ಸ್ಟೇಡಿಯಂನಲ್ಲಿರುವ 'ಸ್ಟೇಟ್ ಆಫ್‌ ದ ಆರ್ಟ್ ನ್ಯಾಷನಲ್' ಸೈಕ್ಲಿಂಗ್ ಅಕಾಡೆಮಿಯಲ್ಲಿ ಅಭ್ಯಾಸಕ್ಕೆ ಆಯ್ಕೆಯಾಗಲಿದ್ದಾಳೆ ಎಂದು ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಮುಖ್ಯಸ್ಥ ಓಂಕಾರ್ ಸಿಂಗ್ ತಿಳಿಸಿದ್ದಾರೆ.

15 ವರ್ಷದ ಬಾಲಕಿ ಸಾಹಸ ಕಥೆ

15 ವರ್ಷದ ಬಾಲಕಿ ಸಾಹಸ ಕಥೆ

8ನೇ ತರಗತಿ ಓದುತ್ತಿರುವ 15 ವರ್ಷದ ಬಾಲಕಿ ಲಾಕ್‌ಡೌನ್‌ ಕಾರಣದಿಂದ ದೆಹಲಿಯಲ್ಲಿ ಸಿಲುಕಿಕೊಂಡಿದ್ದ ತಂದೆಯ ಜೊತೆ ಬಿಹಾರ್‌ದ ದರ್ಬಂಗನಲ್ಲಿರುವ ತಮ್ಮ ಸ್ಥಳೀಯ ಸ್ಥಳಕ್ಕೆ ಸೈಕಲ್‌ನಲ್ಲೆ ಪ್ರಯಾಣ ಮಾಡಿದ್ದಾರೆ. ಸುಮಾರು ಏಳು ದಿನಗಳ ಕಾಲ ಸೈಕಲ್‌ನಲ್ಲಿ ತಂದೆ-ಮಗಳು ಪ್ರಯಾಣ ಮಾಡಿದ್ದಾರೆ.

English summary
US president Donald Trump’s daughter Ivanka Trump appreciated to Jyoti Kumari, who travelled 1,200 KM carrying her father on a Cycle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X