ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಟ್ನಾದಲ್ಲಿ ಕೇಂದ್ರ ಸಚಿವರ ಮೇಲೆ ಇಂಕ್ ಎರಚಿ, ವ್ಯಕ್ತಿ ಪರಾರಿ

|
Google Oneindia Kannada News

ಪಾಟ್ನಾ (ಬಿಹಾರ), ಅಕ್ಟೋಬರ್ 15: ಬಿಹಾರದ ಪಾಟ್ನಾ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಡೆಂಗ್ಯೂ ರೋಗಿಯನ್ನು ಮಂಗಳವಾರ ಭೇಟಿ ಮಾಡುವಾಗ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಮೇಲೆ ಇಂಕ್ ಎರಚಲಾಗಿದೆ. ಜನರನ್ನು, ಮಾಧ್ಯಮದವರನ್ನು ಮಾತನಾಡಿಸುವ ವೇಳೆ ಈ ಘಟನೆ ನಡೆದಿದೆ. ಆದರೆ ಇಂಕ್ ಎರಚಿದ ವ್ಯಕ್ತಿಯ ಗುರುತು ಪತ್ತೆ ಆಗಿಲ್ಲ. ಸಚಿವರ ಕೋಟ್ ಹಾಗೂ ಕಾರಿನ ಮೇಲೆ ಇಂಕ್ ಚೆಲ್ಲಿದೆ.

ನನ್ನನ್ನು ಗುರಿ ಮಾಡಿಕೊಂಡು ಆದ ದಾಳಿ ಇದಲ್ಲ ಎಂದು ಸಚಿವರ ಹೇಳಿದ್ದಾರೆ. "ಮಾಧ್ಯಮಗಳ ಮೇಲೆ ಇಂಕ್ ನಿಂದ ದಾಳಿ ಮಾಡಲಾಯಿತು. ಆಗ ಕೆಲವು ಹನಿ ನನ್ನ ಮೇಲೂ ಬಿದ್ದಿದೆ" ಎಂದು ಚೌಬೆ ಅವರು ಘಟನೆ ಬಗ್ಗೆ ಹೇಳಿದ್ದಾರೆ.

ಬೂಟು ಎಸೆದವನಿಗೆ 3 ವರ್ಷ ಜೈಲು ಶಿಕ್ಷೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಮಾತನಾಡಿ, ಅಪರಾಧ ಮನಸ್ಥಿತಿಯ ವ್ಯಕ್ತಿಗಳು ಸಾರ್ವಜನಿಕರು, ಪ್ರಜಾಪ್ರಭುತ್ವ ಹಾಗೂ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭದ ಮೇಲೆ ದಾಳಿ ನಡೆಸಿದ್ದಾರೆ ಎಂದು ಹೇಳಿದ್ದಾರೆ. ದಾಳಿಕೋರ ಸ್ಥಳದಿಂದ ಪರಾರಿಯಾಗಿದ್ದಾನೆ.

Ink Thrown On Union Minister In Patna

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿಯ ಕಾರಣಕ್ಕೆ ಕಳೆದ ಸೆಪ್ಟೆಂಬರ್ ನಿಂದ ಈಚೆಗೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಪಾಟ್ನಾದಲ್ಲಿ 900 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.

English summary
Ink thrown by unknown person on union minister Ashwini Kumar Choubey in Patna on Tuesday. Here is the complete details of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X