ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮೊದಲ ಕೊವಿಡ್ ಲಸಿಕೆ 'ಕೋವ್ಯಾಕ್ಸಿನ್': ಮಾನವನ ಮೇಲೆ ಪ್ರಯೋಗ ಆರಂಭ

|
Google Oneindia Kannada News

ನವದೆಹಲಿ, ಜುಲೈ 14: ಮಾನವನ ಮೇಲೆ ಭಾರತದ ಮೊದಲ ಕೊವಿಡ್ ಲಸಿಕೆ 'ಕೋವ್ಯಾಕ್ಸಿನ್' ಪ್ರಯೋಗವನ್ನು ಆರಂಭಿಸಲಾಗಿದೆ.

ಪಾಟ್ನಾದ ಏಮ್ಸ್ ಆಸ್ಪತ್ರೆಯಲ್ಲಿ ಪ್ರಯೋಗ ಆರಂಭಿಸಲಾಗಿದೆ. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಹಭಾಗಿತ್ವದಲ್ಲಿ ಕೋವ್ಯಾಕ್ಸಿನ್ ತಯಾರಿಸಲಾಗಿದೆ.

ಆಗಸ್ಟ್ 15ಕ್ಕೆ ಭಾರತಕ್ಕೆ ದೊರೆಯಲಿದೆ ರಷ್ಯಾದ ಕೊರೊನಾ ಲಸಿಕೆಆಗಸ್ಟ್ 15ಕ್ಕೆ ಭಾರತಕ್ಕೆ ದೊರೆಯಲಿದೆ ರಷ್ಯಾದ ಕೊರೊನಾ ಲಸಿಕೆ

ಆಸ್ಪತ್ರೆಯ ಆಡಳಿತ ಮಂಡಳಿಯು ಹತ್ತು ಮಂದಿಯನ್ನು ಮೊದಲ ಟ್ರಯಲ್‌ಗೆ ಆಯ್ಕೆ ಮಾಡಿದ್ದಾರೆ, ಅವರ ಮೇಲೆ ಪ್ರಯೋಗ ನಡೆಯಲಿದೆ. ಮೊದಲು ಹತ್ತು ಮಂದಿಗೆ ಲಸಿಕೆ ನೀಡಲಾಗುತ್ತಿದ್ದು, 14 ದಿನಗಳ ಬಳಿಕ ಎರಡನೇ ಡೋಸ್ ನೀಡಲಾಗುತ್ತದೆ.

India’s First COVID-19 Vaccine COVAXIN Human Trial Begins

ಲಸಿಕೆ ತೆಗೆದುಕೊಂಡ ಬಳಿಕ ರೋಗಿಗಳು ತಪಾಸಣೆ ಮಾಡಿಸಬೇಕು, 22-50 ವರ್ಷದೊಳಗಿನ ಹತ್ತು ಮಂದಿಯ ಮೇಲೆ ಲಸಿಕೆ ಪ್ರಯೋಗಿಸಲಾಗುತ್ತಿದೆ.

ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ತಗ್ಗಲು ಇನ್ನೂ ಸುಮಾರು 3,4 ತಿಂಗಳ ಸಮಯ ಬೇಕಾಗಬಹುದು ಎಂದು ಅವರ ಅಂದಾಜಿಸಿದ್ದಾರೆ. ಎಲ್ಲರಿಗೂ ವ್ಯಾಕ್ಸಿನ್ ಪೂರೈಸಿದ ನಂತರ ವೈರಸ್ ತಗ್ಗಲಿದೆ. ಆಗ ಮಾತ್ರ ಪರಿಸ್ಥಿತಿ ಸಹಜಗೊಳ್ಳಲು ಅವಕಾಶವಾಗುತ್ತದೆ ಎಂದು ಗುಲೇರಿಯಾ ತಿಳಿಸಿದ್ದಾರೆ.

ಹೈದ್ರಾಬಾದಿನ ಸಂಸ್ಥೆಗೆ ಫೆವಿಪಿರಾವಿರ್ ಉತ್ಪಾದನೆಗೆ ಅನುಮತಿಹೈದ್ರಾಬಾದಿನ ಸಂಸ್ಥೆಗೆ ಫೆವಿಪಿರಾವಿರ್ ಉತ್ಪಾದನೆಗೆ ಅನುಮತಿ

ಭಾರತದಲ್ಲಿ ಬಹಳಷ್ಟು ಕಂಪನಿಗಳು ವ್ಯಾಕ್ಸಿನ್ ಅಭಿವೃದ್ದಿ ಪಡಿಸಲು ನಿರಂತರವಾಗಿ ಶ್ರಮಿಸುತ್ತಿವೆ. ಈ ಪೈಕಿ ಭಾರತ್ ಬಯೋಟೆಕ್ ಜೊತೆಗೆ ಸೀರಂ ಇನಿಸ್ಟಿಟ್ಯೂಟ್, ಕ್ಯಾಡಿಲಾ ದಂತಹ ಸಂಸ್ಥೆಗಳು ಪ್ರಯತ್ನ ನಡೆಸುತ್ತಿವೆ.

ಲಕ್ಷಾಂತರ ಮಂದಿ ವ್ಯಾಕ್ಸಿನ್ ಬಳಸುವ ಸಾಧ್ಯತೆಯ ಹಿನ್ನಲೆಯಲ್ಲಿ ಪ್ರತಿಕೂಲ ಪರಿಣಾಮ ಇಲ್ಲ ಎಂಬುದನ್ನು ಖಾತರಿ ಪಡಿಸಿಕೊಂಡ ನಂತರವೇ ಲಸಿಕೆ ಬಿಡುಗಡೆ ಮಾಡಬೇಕು. ಜೊತೆಗೆ ರೋಗ ನಿರೋಧ ಶಕ್ತಿ ಹೆಚ್ಚಿಸಲಿದೆಯೇ ಇಲ್ಲವೊ ಎಂಬುದನ್ನು ಖಾತರಿಪಡಿಸಕೊಳ್ಳಬೇಕು ಎಂದರು.

English summary
The human trial of COVAXIN, India’s first indigenous vaccine against the novel coronavirus, has begun at the All India Institute of Medical Sciences, Patna. COVAXIN developed by Hyderabad-based Bharat Biotech in partnership with the Indian Council of Medical Research (ICMR) is derived from a strain of SARS-CoV-2 virus isolated at the National Institute of Virology, Pune.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X