ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದ ಜನರಿಗೆ 10 ಲಕ್ಷ ಸರ್ಕಾರಿ ಉದ್ಯೋಗದ ಆಫರ್!

|
Google Oneindia Kannada News

ಪಾಟ್ನಾ, ಸಪ್ಟೆಂಬರ್.27: ಬಿಹಾರ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿ ನಾಯಕರ ಭರವಸೆ ಮಾತುಗಳು ಶುರುವಾಗಿವೆ. ರಾಷ್ಟ್ರೀಯ ಜನತಾ ದಳ ಪಕ್ಷವು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ 10 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಸುವುದಾಗಿ ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಭರವಸೆ ನೀಡಿದ್ದಾರೆ.

ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ತೇಜಸ್ವಿ ಯಾದವ್, ಬಿಹಾರದಲ್ಲಿ ಆರ್ ಜೆಡಿ ಪಕ್ಷಕ್ಕೆ ಅಧಿಕಾರ ಸಿಕ್ಕಲ್ಲಿ ಮೊದಲ ಸಂಪುಟ ಸಭೆಯಲ್ಲಿ 10 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ಪ್ರಕ್ರಿಯೆಗೆ ಮೊದಲ ಅಂಕಿತ ಹಾಕಲಾಗುತ್ತದೆ. ಇದು ಕೇವಲ ಆಶ್ವಾಸನೆಯಲ್ಲ. ಸರ್ಕಾರಿ ಮತ್ತು ಶಾಶ್ವತ ಉದ್ಯೋಗ ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಬಿಹಾರ ಚುನಾವಣೆ: ಸಿಎಂ ಅಭ್ಯರ್ಥಿ ವಿಚಾರದಲ್ಲಿ ಶುರುವಾಯ್ತು ಮಹಾಮೈತ್ರಿಕೂಟದಲ್ಲಿ ತಿಕ್ಕಾಟಬಿಹಾರ ಚುನಾವಣೆ: ಸಿಎಂ ಅಭ್ಯರ್ಥಿ ವಿಚಾರದಲ್ಲಿ ಶುರುವಾಯ್ತು ಮಹಾಮೈತ್ರಿಕೂಟದಲ್ಲಿ ತಿಕ್ಕಾಟ

ಕಳೆದ 15 ವರ್ಷಗಳಿಂದ ಸುಳ್ಳು ಭರವಸೆ ಮತ್ತು ಆಶ್ವಾಸನೆ ನೀಡಿದವರ ಆಡಳಿತ ವೈಖರಿಯನ್ನು ಜನರು ಈಗಾಗಲೇ ಕಂಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ ಒಂದು ಸಾವಿರ ಜನರಿಗೆ ಒಬ್ಬ ವೈದ್ಯರನ್ನು ನೇಮಿಸಿರಬೇಕು. ಬಿಹಾರದಲ್ಲಿ ಪೊಲೀಸ್ ಇಲಾಖೆಯಲ್ಲೂ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಬೇಕಿದ್ದು, ಇದನ್ನೆಲ್ಲ ಸರ್ಕಾರ ಮಾಡಲಿಲ್ಲವೇಕೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪ್ರಶ್ನೆ ಮಾಡಿದ್ದಾರೆ.

ಬಿಹಾರದಲ್ಲಿ 12.50 ಕೋಟಿ ಜನರಿಗೆ 1.25 ಲಕ್ಷ ವೈದ್ಯರು

ಬಿಹಾರದಲ್ಲಿ 12.50 ಕೋಟಿ ಜನರಿಗೆ 1.25 ಲಕ್ಷ ವೈದ್ಯರು

ಬಿಹಾರವು 12.50 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ರಾಜ್ಯಕ್ಕೆ ಕನಿಷ್ಠ 1.25 ಲಕ್ಷ ವೈದ್ಯರ ಅಗತ್ಯವಿದ್ದು, ಸಹಾಯಕ ಸಿಬ್ಬಂದಿಯ ಅವಶ್ಯಕತೆಯೂ ಇದೆ. ಆರೋಗ್ಯ ಇಲಾಖೆಗೆ 2.5 ಲಕ್ಷ ಸಿಬ್ಬಂದಿಯನ್ನು ನೇಮಕ ಮಾಡಬೇಕಿದೆ ಎಂದು ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಮಾಹಿತಿ ನೀಡಿದ್ದಾರೆ.

ಬಿಹಾರದಲ್ಲಿ 50,000 ಪೊಲೀಸ್ ಹುದ್ದೆಗಳು ಖಾಲಿ

ಬಿಹಾರದಲ್ಲಿ 50,000 ಪೊಲೀಸ್ ಹುದ್ದೆಗಳು ಖಾಲಿ

ರಾಜ್ಯದಲ್ಲಿ 50,000ಕ್ಕೂ ಅಧಿಕ ಪೊಲೀಸ್ ಹುದ್ದೆಗಳು ಖಾಲಿ ಖಾಲಿಯಾಗಿದೆ. ಪುಟ್ಟ ರಾಜ್ಯ ಎನಿಸಿರುವ ಮಣಿಪುರದಲ್ಲಿ ಒಂದು ಲಕ್ಷ ಜನರ ಭದ್ರತೆಗೆ ಕನಿಷ್ಠ 1,000 ಪೊಲೀಸರನ್ನು ನೇಮಿಸಿಕೊಳ್ಳಲಾಗಿದೆ. ಆದರೆ, ಬಿಹಾರದಲ್ಲಿ ಒಂದು ಲಕ್ಷ ಜನರ ಭದ್ರತೆಗೆ ಕೇವಲ 77 ಪೊಲೀಸರಿದ್ದಾರೆ ಎಂದು ತೇಜಸ್ವಿ ಯಾದವ್ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಆರಂಭಿಸಿದ ನಿರುದ್ಯೋಗಿಗಳ ತಾಣಕ್ಕೆ ನೋಂದಣಿ

ರಾಜ್ಯದಲ್ಲಿ ಆರಂಭಿಸಿದ ನಿರುದ್ಯೋಗಿಗಳ ತಾಣಕ್ಕೆ ನೋಂದಣಿ

"ಕಳೆದ ಸಪ್ಟೆಂಬರ್.5ರಂದು ಬಿಹಾರದಲ್ಲಿ ಆರಂಭಿಸಿದ ನಿರುದ್ಯೋಗಿಗಳ ಪೋರ್ಟಲ್ ನಲ್ಲಿ ಪ್ರತಿನಿತ್ಯ ಒಂದು ಲಕ್ಷ ಜನರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. 22 ದಿನಗಳಲ್ಲೇ 22 ಲಕ್ಷ ನಿರುದ್ಯೋಗಿಗಳು ಹೆಸರು ನೋಂದಾಯಿಸಿದ್ದಾರೆ. ಉಚಿತ ದೂರವಾಣಿ ಕರೆ ಮೂಲಕ 947324 ಜನ ಹೆಸರು ನೋಂದಾಯಿಸಿದ್ದು, 13,11,626 ಜನರು ಮಿಸ್ ಕಾಲ್ ನೀಡುವ ಮೂಲಕ ಹೆಸರು ನೋಂದಾಯಿಸಿದ್ದಾರೆ. ಒಟ್ಟು 22.58 ಲಕ್ಷ ನಿರುದ್ಯೋಗಿಗಳು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ" ಎಂದು ತೇಜಸ್ವಿ ಯಾದವ್ ತಿಳಿಸಿದ್ದಾರೆ.

ಹಸಿವಿನ ನೋವು ಮತ್ತು ಬಡತನದ ಬೇಗೆ

ಹಸಿವಿನ ನೋವು ಮತ್ತು ಬಡತನದ ಬೇಗೆ

ಬಿಹಾರದ ಜನಸಂಖ್ಯೆಯಲ್ಲಿ ಶೇ.60ರಷ್ಟು ಯುವಕರೇ ಇದ್ದಾರೆ. ಹೀಗಿದ್ದರೂ ಉದ್ಯೋಗವಿಲ್ಲದೇ, ದುಡಿಮೆಯಿಲ್ಲದೇ ಬಡತನ ಮತ್ತು ಹಸಿವಿನ ನೋವು ಜನರನ್ನು ಕಿತ್ತು ತಿನ್ನುತ್ತಿದೆ. ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣವು ಶೇ.46.60ರಷ್ಟಿದೆ. ನಿರುದ್ಯೋಗ ಮತ್ತು ವಲಸೆ ಕಾರ್ಮಿಕರ ಬಗ್ಗೆ ತೋರಿದ ದಿವ್ಯ ನಿರ್ಲಕ್ಷ್ಯದ ಬಗ್ಗೆಯೂ ತೇಜಸ್ವಿ ಯಾದವ್ ಸರ್ಕಾರವನ್ನು ಟೀಕಿಸಿದ್ದಾರೆ. ರಾಜ್ಯದ ಯುವ ಸಮುದಾಯಕ್ಕೆ ನಾವೊಂದು ಸಂದೇಶವನ್ನು ನೀಡುತ್ತೇವೆ. ಒಂದು ವೇಳೆ ನಮ್ಮ ಪಕ್ಷವು ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ, ಅಗತ್ಯವಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುತ್ತೇವೆ ಎಂದು ತೇಜಸ್ವಿ ಯಾದವ್ ಭರವಸೆ ನೀಡಿದ್ದಾರೆ.

3 ಹಂತಗಳಲ್ಲಿ ಬಿಹಾರ ವಿಧಾನಸಭಾ ಚುನಾವಣೆ

3 ಹಂತಗಳಲ್ಲಿ ಬಿಹಾರ ವಿಧಾನಸಭಾ ಚುನಾವಣೆ

ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್,28ರಂದು 16 ಜಿಲ್ಲೆಗಳ 71 ಕ್ಷೇತ್ರಗಳಿಗೆ 31,000 ಮತಗಟ್ಟೆಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್.03ರಂದು ಎರಡನೆಯ ಹಂತದಲ್ಲಿ 17 ಜಿಲ್ಲೆಗಳಲ್ಲಿ 94 ಕ್ಷೇತ್ರಗಳಿಗೆ 42,000 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್.07ರಂದು ಮೂರನೇ ಹಂತದಲ್ಲಿ 78 ಕ್ಷೇತ್ರಗಳಿಗೆ 15 ಜಿಲ್ಲೆಗಳಲ್ಲಿ ಅಂದಾಜು 33,500 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಅಂತಿಮವಾಗಿ ನವೆಂಬರ್.10ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶವು ಹೊರ ಬೀಳಲಿದೆ.

English summary
Bihar Assembly Elections: If RJD Comes To Power, 10 Lakh Peoples Get Jobs, Says Tejashwi Yadav.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X