ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪ್ರಗ್ಯಾ ಹೇಳಿಕೆಗೆ ಅಷ್ಟು ಬೇಸರವಾಗಿದ್ದರೆ ಸಿಎಂ ಸ್ಥಾನಕ್ಕೆ ನಿತೀಶ್ ರಾಜೀನಾಮೆ ನೀಡಲಿ'

|
Google Oneindia Kannada News

ಪಾಟ್ನಾ (ಬಿಹಾರ), ಮೇ 19: ನಾಥೂರಾಂ ಗೋಡ್ಸೆ ಬಗ್ಗೆ ಸಾಧ್ವಿ ಪ್ರಗ್ಯಾ ಸಿಂಗ್ ನೀಡಿದ ಹೇಳಿಕೆಯನ್ನು ಖಂಡಿಸಿದ ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆರ್ ಜೆಡಿ ನಾಯಕಿ ರಾಬ್ರಿ ದೇವಿ ಕೇಳಿದ್ದಾರೆ. ಪ್ರಗ್ಯಾ ಹೇಳಿಕೆಯಿಂದ ನಿತೀಶ್ ಕುಮಾರ್ ಗೆ ಬೇಸರ ಆಗಿದ್ದರೆ ಬಿಜೆಪಿಯ ಸಖ್ಯ ಬಿಟ್ಟು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು ಎಂದು ಎಎನ್ ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ನಾವು ಬಿಹಾರದಲ್ಲಿ ನಲವತ್ತಕ್ಕೆ ನಲವತ್ತು ಸ್ಥಾನ ಜಯಿಸುತ್ತೇವೆ. ಮಹಾ ಘಟಬಂಧನ್ ಆರಾಮವಾಗಿದೆ. ಮೇ ಇಪ್ಪತ್ಮೂರನೇ ತಾರೀಕು ಎಲ್ಲ ಸ್ಪಷ್ಟವಾಗಲಿದೆ ಎಂದು ರಾಬ್ರಿದೇವಿ ಹೇಳಿದ್ದಾರೆ. ಮೇ ಹದಿನಾರನೇ ತಾರೀಕು ಬಿಜೆಪಿ ನಾಯಕಿ ಪ್ರಗ್ಯಾ ಸಿಂಗ್, ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಂ ಗೋಡ್ಸೆ ನಿಜವಾದ ದೇಶಭಕ್ತ ಎಂದು ಹೇಳಿದ್ದರು.

'ಪ್ರಶಾಂತ್ ಮೂಲಕ ನಿತೀಶ್ ರಿಂದ ಆರ್ ಜೆಡಿ- ಜೆಡಿಯು ವಿಲೀನ ಪ್ರಸ್ತಾವ' 'ಪ್ರಶಾಂತ್ ಮೂಲಕ ನಿತೀಶ್ ರಿಂದ ಆರ್ ಜೆಡಿ- ಜೆಡಿಯು ವಿಲೀನ ಪ್ರಸ್ತಾವ'

ಈ ಹೇಳಿಕೆಯಿಂದ ಬಿಜೆಪಿ ಮುಜುಗರಕ್ಕೆ ಈಡಾಗಿತ್ತು. ಈ ಹೇಳಿಕೆಯನ್ನು ಖಂಡಿಸಿದ ಬಿಜೆಪಿ, ಕ್ಷಮೆ ಕೋರುವಂತೆ ಆಕೆಗೆ ಸೂಚನೆ ನೀಡಿತ್ತು. "ಆರೆಸ್ಸೆಸ್ ಸಿದ್ಧಾಂತದ ಜತೆಗೆ ಬೆಳೆಯುವವರ ಮನಸ್ಥಿತಿ ಹೇಗಿರುತ್ತದೆ ಎಂಬುದಕ್ಕೆ ಪ್ರಗ್ಯಾ ಸಿಂಗ್ ಹೇಳಿಕೆ ಸಾಕ್ಷಿ' ಎಂದು ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು.

If Pragyas statement hurt Nitish, he should resign to CM post

ಮಾಲೇಗಾಂವ್ ಸ್ಫೋಟದ ಆರೋಪಿ ಆಗಿರುವ ಪ್ರಗ್ಯಾಗೆ ವಿವಾದಗಳು ಹೊಸತಲ್ಲ. ಪ್ರಗ್ಯಾ ಸಿಂಗ್ ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. "ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ಮುಂಬೈ ದಾಳಿ ವೇಳೆ ಹತ್ಯೆಯಾಗಲು ನನ್ನ ಶಾಪವೇ ಕಾರಣ" ಎಂದು ನೀಡಿದ್ದ ಹೇಳಿಕೆ ಕೂಡ ವಿವಾದಕ್ಕೆ ಕಾರಣವಾಗಿತ್ತು.

ಇದ್ಯಾರಿದು ಬಿಜೆಪಿ ಮೈತ್ರಿಕೂಟದಲ್ಲಿ ಪಿಎಂ ಹುದ್ದೆಗೆ ಹೊಸ ಹೆಸರು ತೇಲಿಬಿಟ್ಟಿದ್ದುಇದ್ಯಾರಿದು ಬಿಜೆಪಿ ಮೈತ್ರಿಕೂಟದಲ್ಲಿ ಪಿಎಂ ಹುದ್ದೆಗೆ ಹೊಸ ಹೆಸರು ತೇಲಿಬಿಟ್ಟಿದ್ದು

ನಾನಾ ಕಡೆಗಳಿಂದ ಆ ಹೇಳಿಕೆ ವಿರೋಧ ಬಂದಿತ್ತು. ಅದು ಪ್ರಗ್ಯಾ ಸಿಂಗ್ ರ ವೈಯಕ್ತಿಕ ಹೇಳಿಕೆ ಎಂದು ಬಿಜೆಪಿ ಕೂಡ ಅಂತರ ಕಾಯ್ದುಕೊಂಡಿತ್ತು.

English summary
If Pragya's statement about Nathuram Godse hurt Nitish, he should resign to CM post, said RJD leader Rabri Singh to ANI news agency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X