• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾನು ನೀಡಿದ ಭರವಸೆಗಳನ್ನು ಪೂರೈಸಲು ಇನ್ನೊಂದು ಅವಧಿ ಬೇಕು: ಮೋದಿ

|

"ನಾನು ಎಲ್ಲ ಕೆಲಸ ಮಾಡಿ ಮುಗಿಸಿದ್ದೇನೆ ಎಂದು ಹೇಳಿಕೊಳ್ಳುತ್ತಿಲ್ಲ. ಅವರು (ಕಾಂಗ್ರೆಸ್) ಎಪ್ಪತ್ತು ವರ್ಷದಲ್ಲಿ ಹಾಗೆ ಹೇಳಲು ಸಾಧ್ಯವಿಲ್ಲದ್ದನ್ನು ನಾನು ಕೇವಲ ಐದು ವರ್ಷದಲ್ಲಿ ಹೇಗೆ ಹೇಳಲು ಸಾಧ್ಯ? ತುಂಬ ಕೆಲಸ ಮಾಡಬೇಕು. ಇನ್ನೂ ಸಾಕಷ್ಟು ಕೆಲಸ ಮಾಡುವ ಸಾಧ್ಯತೆಇದೆ. ಅದಕ್ಕಾಗಿ ನಿರಂತರ ಶ್ರಮ ಬೇಕು. ಮತ್ತು ಇದಕ್ಕಾಗಿ ನನಗೆ ನಿಮ್ಮ ಆಶೀರ್ವಾದ ಬೇಕು" ಎಂದು ಮೋದಿ ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆರು ವರ್ಷದ ಹಿಂದೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ಆಗಿದ್ದ ನರೇಂದ್ರ ಮೋದಿ ಉತ್ತರಪ್ರದೇಶದಲ್ಲಿ ಚುನಾವಣೆ ಪ್ರಚಾರದಲ್ಲಿ ಮಾತನಾಡುತ್ತಾ, ನೀವು ಕಾಂಗ್ರೆಸ್ ಗೆ ಅರವತ್ತು ವರ್ಷ ನೀಡಿದ್ದೀರಿ. ಬಿಜೆಪಿಗೆ ಅರವತ್ತು ತಿಂಗಳು ನೀಡಿ. ನಾವು ಭಾರತದ ಭವಿಷ್ಯ ಬದಲಿಸುತ್ತೇವೆ ಮತ್ತು ಅರವತ್ತು ತಿಂಗಳಲ್ಲಿ ಅಭಿವೃದ್ಧಿ ಮಾಡುತ್ತೇವೆ ಎಂದಿದ್ದರು.

15 ಲಕ್ಷ ರು. ನೀಡುತ್ತೇನೆಂದು ಮೋದಿ ನಿಜಕ್ಕೂ ಪ್ರಾಮಿಸ್ ಮಾಡಿದ್ದರೆ?

ತಮ್ಮ ಭಾಷಣದುದ್ದಕ್ಕೂ ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಅಧಿಕಾರದಲ್ಲಿದ್ದಾಗ ಆಡಳಿತವು ರಿವರ್ಸ್ ಗೇರ್ ನಲ್ಲಿತ್ತು. ಭಯೋತ್ಪಾದನೆ, ಬೆಲೆ, ಹಿಂಸಾಚಾರ, ಭ್ರಷ್ಟಾಚಾರ, ಕಪ್ಪು ಹಣ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹೆಚ್ಚಿದೆ. ದೇಶದ ಸಂಪತ್ತು, ವಿಶ್ವಾಸಾರ್ಹತೆ, ಸಶಸ್ತ್ರ ಪಡೆಯ ನೈತಿಕತೆ, ಪ್ರಾಮಾಣಿಕತೆಗೆ ಗೌರವ ಕಡಿಮೆ ಆಗಿದೆ ಎಂದು ಹೇಳಿದರು.

I need one more term to fulfill my promises: Narendra Modi

ಕಾಂಗ್ರೆಸ್ ಮತ್ತು ನೆಹರೂ- ಗಾಂಧಿ ಕುಟುಂಬವು ಭಾರತದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರನ್ನು ಸೋಲಿಸಲು ಎಲ್ಲ ಮಾಡಿದರು. ಈ ಕುಟುಂಬವು ತನ್ನ ಸದಸ್ಯರನ್ನು ಭಾರತರತ್ನದ ಮೂಲಕ ಗೌರವಿಸಿತು. ಆದರೆ ಅಂಬೇಡ್ಕರ್ ರನ್ನು ಮರೆಯಿತು ಎಮ್ದು ಆರೋಪ ಮಾಡಿದರು.

ಶಾಂತಿಪ್ರಿಯ ಹಿಂದೂಗಳನ್ನು ಕಾಂಗ್ರೆಸ್ ಅವಮಾನಿಸಿದೆ : ಮೋದಿ ತೀವ್ರ ವಾಗ್ದಾಳಿ

ಪ್ರಧಾನಿಗಳ ಭಾಷಣದ ಬಗ್ಗೆ ರಾಷ್ಟ್ರೀಯ ಜನತಾ ದಳದ ತೇಜಸ್ವಿ ಯಾದವ್ ಮಾತನಾಡಿ, ಒಬ್ಬ ಮುಖ್ಯಮಂತ್ರಿಯೋ ಅಥವಾ ಪ್ರಧಾನಮಂತ್ರಿಯೋ ಹೀಗೆ ಮಾತನಾಡಲು ಹೇಗೆ ಸಾಧ್ಯ? ನನಗೆ ನಾಚಿಕೆ ಎನಿಸುತ್ತಿದೆ. ಉದ್ಯೋಗ, ರೈತರು, ಕಾರ್ಮಿಕರು ಅಥವಾ ಅಭಿವೃದ್ಧಿ ಬಗ್ಗೆ ಮಾತನಾಡಿಲ್ಲ. ಆರ್ಥ ಇಲ್ಲದ ವಿಷಯದ ಬಗ್ಗೆ ಮಾತನಾಡಿದ್ದಾರೆ. ಮೋದಿ ಜೀ ಬಂದು, ಬಿಹಾರಕ್ಕಾಗಿ ಯೋಜನೆಗಳ ಮಾತನಾಡುತ್ತಾರೆ ಎಂದು ನಾವಂದುಕೊಂಡೆವು ಎಂದಿದ್ದಾರೆ.

ಪಾಟ್ನಾ ಸಾಹಿಬ್ ರಣಕಣ
ಸ್ಟ್ರೈಕ್ ರೇಟ್
BJP 100%
BJP won 2 times since 2009 elections

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi Tuesday told a gathering in Bihar that he needs another term to fulfil his promises. He was campaigning in Jamui for the national election starting April 11.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more