• search
 • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

30 ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್; ತಪ್ಪು ತಿದ್ದಿಕೊಂಡಿತಾ ಬಿಜೆಪಿ?

|

ಪಾಟ್ನಾ, ಅಕ್ಟೋಬರ್.17: ಬಿಹಾರ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷವು ಎರಡನೇ ಬಾರಿ 30 ನಾಯಕರುಳ್ಳ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಎರಡನೇ ಹಂತದ ಚುನಾವಣೆಗಾಗಿ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ಇಬ್ಬರ ಹೆಸರನ್ನು ಸೇರ್ಪಡೆಗೊಳಿಸಲಾಗಿದೆ.

ಮೊದಲ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದ ಬಿಹಾರದ ಚಿರ ಪರಿಚಿತ ನಾಯಕರಾದ ಶಹನವಾಜ್ ಹುಸೇನ್ ಮತ್ತು ರಾಜೀವ್ ಪ್ರತಾಪ್ ರೂಢಿ ಹೆಸರನ್ನು ಈ ಬಾರಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಶನಿವಾರ ಬಿಜೆಪಿ ಬಿಡುಗಡೆಗೊಳಿಸಿದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ 30 ನಾಯಕರು ಹೆಸರನ್ನು ಸೇರಿಸಲಾಗಿದೆ.

'ನಾನು ಮೋದಿಯ ಹನುಮಂತ, ಬೇಕಿದ್ದರೆ ಎದೆ ಸೀಳಿ ತೋರಿಸುತ್ತೇನೆ'

ಮೂರು ಹಂತಗಳಲ್ಲಿ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಅಕ್ಟೋಬರ್.28 ಮೊದಲ ಹಂತದ ಚುನಾವಣೆ, ನವೆಂಬರ್.03 ಎರಡನೇ ಹಂತದ ಚುನಾವಣೆ ಮತ್ತು ನವೆಂಬರ್.07ರಂದು ಮೂರನೇ ಹಂತದ ಚುನಾವಣೆ ನಡೆಯಲಿದೆ. ಖಾಲಿ ಆಗಿರುವ ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರಕ್ಕೂ ನವೆಂಬರ್.07ರಂದೇ ಮತದಾನ ನಡೆಯಲಿದೆ.

ಬಿಹಾರ ಚುನಾವಣೆಗೆ ಬಿಜೆಪಿಯ ಟಾಪ್ -10 ಪ್ರಚಾರಕರು

ಬಿಹಾರ ಚುನಾವಣೆಗೆ ಬಿಜೆಪಿಯ ಟಾಪ್ -10 ಪ್ರಚಾರಕರು

1. ನರೇಂದ್ರ ಮೋದಿ

2. ಜಗತ್ ಪ್ರಕಾಶ್ ನಡ್ಡಾ

3. ರಾಜನಾಥ್ ಸಿಂಗ್

4. ಅಮಿತ್ ಶಾ

5. ನಿತಿನ್ ಗಡ್ಕರಿ

6. ಬಿ.ಎಲ್. ಸಂತೋಷ

7. ಸೌದಾನ್ ಸಿಂಗ್

8. ಡಾ. ಸಂಜಯ್ ಜೈಸ್ವಾಲ್

9. ಸುಶೀಲ್ ಮೋದಿ

10. ಭೂಪೇಂದ್ರ ಯಾದವ್

ಶಹನವಾಜ್ ಹುಸೇನ್ ಮತ್ತು ರೂಢಿಗೆ ಸ್ಥಾನ

ಶಹನವಾಜ್ ಹುಸೇನ್ ಮತ್ತು ರೂಢಿಗೆ ಸ್ಥಾನ

ಬಿಹಾರ ವಿಧಾನಸಭಾ ಚುನಾವಣೆಗೆ ಮೊದಲು ಬಿಜೆಪಿ ಬಿಡುಗಡೆಗೊಳಿಸಿದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಶಹನವಾಜ್ ಹುಸೇನ್ ಮತ್ತು ರಾಜೀವ್ ಪ್ರತಾಪ್ ರೂಢಿ ಹೆಸರನ್ನು ಕೈ ಬಿಡಲಾಗಿತ್ತು. ಎರಡನೇ ಹಂತದ ಚುನಾವಣೆಗಾಗಿ ಇದೀಗ ರಿಲೀಸ್ ಮಾಡಿರುವ ಪಟ್ಟಿಯಲ್ಲಿ ಈ ಇಬ್ಬರು ನಾಯಕರ ಹೆಸರನ್ನೂ ಸೇರ್ಪಡೆಗೊಳಿಸಲಾಗಿದ್ದು, 23 ಮತ್ತು 24ನೇ ಸ್ಥಾನದ ಸ್ಟಾರ್ ಪ್ರಚಾರಕರು ಎಂದು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಮೊದಮೊದಲು ಕಿರಿಯ ನಾಯಕರಿಗೆ ಮಣೆ ಹಾಕಿದ್ದ ಬಿಜೆಪಿ

ಮೊದಮೊದಲು ಕಿರಿಯ ನಾಯಕರಿಗೆ ಮಣೆ ಹಾಕಿದ್ದ ಬಿಜೆಪಿ

ಬಿಹಾರ ಮೊದಲ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಕಿರಿಯ ನಾಯಕರಿಗೆ ಬಿಜೆಪಿ ಮಣೆ ಹಾಕಿತ್ತು. 2014ರಿಂದ ಈಚೆಗೆ ಪಕ್ಷಕ್ಕೆ ಸೇರ್ಪಡೆಯಾದ ಸಂಸದ ರಾಮ್ ಕೃಪಾಲ್ ಯಾದವ್, ಸುಶೀಲ್ ಸಿಂಗ್, ಚೆಡಿ ಪಾಸ್ವಾನ್ ಅವರ ಹೆಸರನ್ನು ಸೇರಿಸಲಾಗಿತ್ತು. ಆದರೆ, 1999ರಿಂದಲೂ ಬಿಜೆಪಿಯಲ್ಲಿರುವ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವಧಿಯಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಶಹನವಾಜ್ ಹುಸೇನ್ ಮತ್ತು ರಾಜೀವ್ ಪ್ರತಾಪ್ ರೂಢಿ ಹೆಸರನ್ನು ಕೈ ಬಿಡಲಾಗಿತ್ತು.

  Corona ರೋಗದ ಮೊದಲನೇ ಲಕ್ಷಣ ನೆಗಡಿ | Oneindia Kannada
  ರಾಜೀವ್ ಪ್ರತಾಪ್ ರೂಢಿ ನಿರೀಕ್ಷೆಯಾಗಲಿಲ್ಲ ಹುಸಿ

  ರಾಜೀವ್ ಪ್ರತಾಪ್ ರೂಢಿ ನಿರೀಕ್ಷೆಯಾಗಲಿಲ್ಲ ಹುಸಿ

  "ಬಿಹಾರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಬಿಡುಗಡೆಗೊಳಿಸಿದ 30 ಸ್ಟಾರ್ ಪ್ರಚಾರಕರ ಪಟ್ಟಿಯು ಕೇವಲ ಒಂದು ಹಂತದ ಚುನಾವಣೆಗೆ ಮಾತ್ರ ಸೀಮಿತವಾಗಿದೆ ಎಂದು ರಾಜೀವ್ ಪ್ರತಾಪ್ ರೂಢಿ ಈ ಹಿಂದೆಯೇ ಹೇಳಿದ್ದರು. ನಾನು ಇಂದಿಗೂ ಪಕ್ಷದ ರಾಷ್ಟ್ರೀಯ ವಕ್ತಾರನೇ ಆಗಿದ್ದೇನೆ. ಮುಂದಿನ ಹಂತಗಳಲ್ಲಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿನ ಹೆಸರು ಬದಲಾಗಬಹುದು. ಅಂದು ನಾನೂ ಕೂಡಾ ಈ ಪಟ್ಟಿಯಲ್ಲಿ ಸ್ಥಾನ ಪಡೆಯಬಹುದು" ಎಂದು ಭವಿಷ್ಯ ನುಡಿದಿದ್ದರು.

  English summary
  Hussain, Rajiv Pratap Rudy's Name Added To The List Of BJP Star Campaigners
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X