ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಬಿಹಾರದಲ್ಲಿ 40 ಸ್ಥಾನ ಗೆದ್ದವರಿಗೆ ದಕ್ಕಿದ್ದು ಹೇಗೆ ಸಿಎಂ ಸ್ಥಾನ?"

|
Google Oneindia Kannada News

ಪಾಟ್ನಾ, ನವೆಂಬರ್.15: ಬಿಹಾರದಲ್ಲಿ ಕೇವಲ 40 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಒಂದು ಪಕ್ಷದ ಮುಖ್ಯಸ್ಥರು ರಾಜ್ಯದ ಮುಖ್ಯಮಂತ್ರಿ ಆಗುವುದು ಹೇಗೆ ಎನ್ನುವುದರ ಬಗ್ಗೆ ಆರ್ ಜೆಡಿ ಪಕ್ಷದ ರಾಜ್ಯಸಭಾ ಸದಸ್ಯ ಮನೋಜ್ ಝಾ ಪ್ರಶ್ನೆ ಮಾಡಿದ್ದಾರೆ.

ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಶಾಸಕರ ಸಭೆಯಲ್ಲಿ ನಿತೀಶ್ ಕುಮರ್ ರನ್ನು ಮುಂದಿನ ಮುಖ್ಯಮಂತ್ರಿ ಆಗಿ ಆಯ್ಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ವಿರುದ್ಧ ಮನೋಜ್ ಝಾ ಧ್ವನಿ ಎತ್ತಿದ್ದಾರೆ.

ಸತತ ನಾಲ್ಕನೇ ಬಾರಿಗೆ ಸಿಎಂ ಆಗಲಿರುವ ನಿತೀಶ್ ಕುಮಾರ್ಸತತ ನಾಲ್ಕನೇ ಬಾರಿಗೆ ಸಿಎಂ ಆಗಲಿರುವ ನಿತೀಶ್ ಕುಮಾರ್

ಬಿಹಾರದ ಮತದಾರರು ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ಬದಲಿಗೆ ಪರ್ಯಾಯ ನಾಯಕನ ಆಯ್ಕೆಗೆ ಮನಸ್ಸು ಮಾಡಿದ್ದರು. ಕೂದಲೆಳೆ ಅಂತರದಲ್ಲಿ ಅವರಿಗೆ ಮತ್ತೊಮ್ಮೆ ಅಧಿಕಾರವು ದಕ್ಕಿದೆ. ಆದರೆ ಮುಂದಿನ ಒಂದು ವಾರ, 10 ದಿನ ಅಥವಾ ಒಂದು ತಿಂಗಳಿನಲ್ಲೇ ಮತ್ತೆ ರಾಜಕೀಯ ಚಿತ್ರಣವು ಬದಲಾಗುತ್ತದೆ. ಖಂಡಿತವಾಗಿ ನಿತೀಶ್ ಕುಮಾರ್ ಸಿಎಂ ಸ್ಥಾನದಿಂದ ದೂರ ಉಳಿಯುತ್ತಾರೆ ಎಂದು ಆರ್ ಜೆಡಿಯ ರಾಜ್ಯಸಭಾ ಸದಸ್ಯ ಮನೋಜ್ ಝಾ ಭವಿಷ್ಯ ನುಡಿದಿದ್ದಾರೆ.

How Nitish Kumar Become Chief Minister After Getting Only 40 Seat In Bihar Assembly Election

ಬಿಹಾರದಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ ಬಹುಮತ:

ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಪೈಕಿ ಸ್ಪಷ್ಟ ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದ್ದು, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ ಡಿಎ) 125 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ. ಬಿಜೆಪಿ 74, ಜೆಡಿಯು 43, ವಿಐಪಿ 4 ಹಾಗೂ ಹಿಂದೂಸ್ಥಾನ್ ಅವಂ ಮೋರ್ಚಾ ಪಕ್ಷವು 4 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಮಹಾಘಟಬಂಧನ್ ಮೈತ್ರಿಕೂಟವು 110 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಅದರಲ್ಲಿ ರಾಷ್ಟ್ರೀಯ ಜನತಾ ದಳ 75, ಕಾಂಗ್ರೆಸ್ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಎಐಎಂಐಎಂ 5, ಲೋಕಜನಶಕ್ತಿ ಪಕ್ಷ 1 ಹಾಗೂ ಪಕ್ಷೇತರ ಅಭ್ಯರ್ಥಿಗಳು 2 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದಾರೆ.

ಬಿಹಾರ: ಗೆದ್ದವರಲ್ಲಿ 163 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣಬಿಹಾರ: ಗೆದ್ದವರಲ್ಲಿ 163 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ

ನಾಯಕತ್ವ ನಿರ್ಧರಿಸುವುದು ಬಿಜೆಪಿ:

ಬಿಹಾರದಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆದ್ದಿರುವ ಭಾರತೀಯ ಜನತಾ ಪಕ್ಷವು ನಾಯಕತ್ವವನ್ನು ತೀರ್ಮಾನಿಸಬೇಕಿದೆ. ಆದರೆ ಬಿಜೆಪಿಗೆ 43 ಸ್ಥಾನಗಳನ್ನು ಗೆದ್ದಿರುವ ಜೆಡಿಯು ಪಕ್ಷವನ್ನು ಹಿಂಬಾಲಿಸದೇ ಪರ್ಯಾಯ ಮಾರ್ಗವಿಲ್ಲ. ಈ ಹಿನ್ನೆಲೆಯಲ್ಲಿ ಜೆಡಿಯು ಅಭ್ಯರ್ಥಿಗೆ ಸಿಎಂ ಸ್ಥಾನವನ್ನು ಬಿಟ್ಟು ಕೊಡುತ್ತಿದ್ದಾರೆ. ಆದರೆ ಇದು ಶಾಶ್ವತವಾಗಿ ಇರುವುದಿಲ್ಲ ಎಂದು ಮನೋ ಝಾ ಹೇಳಿದ್ದಾರೆ.

English summary
How Nitish Kumar Become Chief Minister After Getting Only 40 Seat In Bihar Assembly Election: RJD MP Manoj Jha Questioned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X