ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಮರೇ ಇಲ್ಲದ ಹಳ್ಳಿಯಲ್ಲಿ ಮಸೀದಿ, ನಮಾಜ್ ಮಾಡುವವರೆಲ್ಲ ಹಿಂದೂಗಳು

|
Google Oneindia Kannada News

ಪಾಟ್ನಾ (ಬಿಹಾರ), ಸೆಪ್ಟೆಂಬರ್ 8: ಧರ್ಮದ ಆಧಾರದಲ್ಲಿ ದೊಡ್ಡ ಕಂದಕಗಳು ಕಾಣಿಸಿಕೊಳ್ಳುತ್ತಿರುವ ಸನ್ನಿವೇಶದಲ್ಲೂ ಇಂಥ ಉದಾಹರಣೆಗಳು ಏಕತೆಯ ಭರವಸೆಯನ್ನು ಜೀವಂತ ಉಳಿಸುತ್ತದೆ. ಬಿಹಾರ ರಾಜ್ಯದ ನಳಂದಾ ಜಿಲ್ಲೆಯ ಮಾಧಿ ಹಳ್ಳಿಯು ಅಂಥ ಅದ್ಭುತ ಉದಾಹರಣೆಯಾಗಿ ನಮಗೆ ಸಿಗುತ್ತದೆ. ಮುಕ್ತ ಮನಸ್ಸು- ಉದಾರ ಭಾವ ಎಂಥ ನಿದರ್ಶನಗಳನ್ನು ನಮ್ಮೆದುರು ನಿಲ್ಲಿಸಬಹುದು ಎಂಬುದಕ್ಕೆ ಉದಾಹರಣೆ ಇದು.

Recommended Video

ಭಾರತವನ್ನ ಬೆಂಬಲಿಸಿ ಪಾಕಿಸ್ತಾನಕ್ಕೆ ಛೀಮಾರಿ ಹಾಕಿದ ಇಸ್ಲಾಮಿಕ್ ವಿದ್ವಾಂಸ ಇಮಾಮ್ ಮೊಹಮ್ಮದ್ ತಾವ್ಹಿದಿ

ಮಾಧಿ ಹಳ್ಳಿಯಲ್ಲಿ ಮುಸ್ಲಿಮರೇ ಇಲ್ಲ. ಆದರೆ ಇನ್ನೂರು ವರ್ಷದಷ್ಟು ಹಳೆಯ ಮಸೀದಿಯಲ್ಲಿ ನಿತ್ಯವೂ ಹಿಂದೂಗಳು ಶ್ರದ್ಧೆಯಿಂದ ಐದು ಹೊತ್ತು ನಮಾಜ್ ಮಾಡುತ್ತಾರೆ. ಮಸೀದಿಯ ನಿರ್ವಹಣೆ ಜವಾಬ್ದಾರಿಯನ್ನೂ ಹಿಂದೂಗಳೇ ವಹಿಸಿಕೊಂಡಿದ್ದಾರೆ.

ಮುಸಲ್ಮಾನರಿಲ್ಲದ ಊರಲ್ಲಿ ಮೊಹರಂ ಆಚರಣೆಮುಸಲ್ಮಾನರಿಲ್ಲದ ಊರಲ್ಲಿ ಮೊಹರಂ ಆಚರಣೆ

"ನಮಗೆ (ಹಿಂದೂಗಳು) 'ಅಜಾನ್' ಗೊತ್ತಿಲ್ಲ. ಆದರೆ ಪೆನ್ ಡ್ರೈವ್ ನಲ್ಲಿ ಅದು ರೆಕಾರ್ಡ್ ಮಾಡಿಕೊಂಡಿದ್ದೀವಿ. ಪ್ರತಿ ದಿನ ಅದರ ಮೂಲಕ ಹಾಕಿ, ನಮಾಜ್ ಮಾಡ್ತೀವಿ" ಎಂದು ಸ್ಥಳೀಯರಾದ ಹನ್ಸ್ ಕುಮಾರ್ ಹೇಳುತ್ತಾರೆ.

Maadhi Village Mosque

ಹಳ್ಳಿಗರ ಪ್ರಕಾರ, ಒಂದು ಕಾಲದಲ್ಲಿ ಇಲ್ಲಿ ಮುಸ್ಲಿಮರು ಸ್ವಲ್ಪ ಪ್ರಮಾಣದಲ್ಲಿ ಇದ್ದರು. ಆದರೆ ಕ್ರಮೇಣ ಬೇರೆಡೆ ಗುಳೆ ಹೋದರು. ಮಸೀದಿಯ ನಿರ್ವಹಣೆ ಮಾಡುವುದಕ್ಕೆ ಯಾರೂ ಇಲ್ಲದ ಕಾರಣ ಹಿಂದೂಗಳೇ ನಿರ್ವಹಣೆ ಮಾಡುತ್ತಿದ್ದಾರೆ.

ಈ ಮಸೀದಿ ಯಾವಾಗ ನಿರ್ಮಾಣ ಆಗಿದೆ, ಯಾರಿಂದ ನಿರ್ಮಾಣ ಆಗಿದೆ ಎಂಬುದು ಹಳ್ಳಿಯಲ್ಲಿ ಯಾರಿಗೂ ಗೊತ್ತಿಲ್ಲ. ಆದರೆ ಹಿಂದೂಗಳ ಮನೆಯಲ್ಲಿ ಯಾವುದೇ ಶುಭ ಕಾರ್ಯ ಆಗುವುದಕ್ಕೆ ಮುಂಚೆ ಮಸೀದಿಗೆ ಭೇಟಿ ನೀಡುತ್ತಾರೆ.

ಈ ಮುಸ್ಲಿಂ ಕುಟುಂಬದಲ್ಲಿ 30ನೇ ಕೃಷ್ಣ ಜನ್ಮಾಷ್ಟಮಿ ಸಂಭ್ರಮಈ ಮುಸ್ಲಿಂ ಕುಟುಂಬದಲ್ಲಿ 30ನೇ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಮಸೀದಿಯನ್ನು ಪ್ರತಿ ಬೆಳಗ್ಗೆ ಹಾಗೂ ಸಂಜೆ ಸ್ವಚ್ಛಗೊಳಿಸಲಾಗುತ್ತದೆ ಹಾಗೂ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಜನರಿಗೆ ಸಮಸ್ಯೆ ಬಂದಾಗ ಪ್ರಾರ್ಥನೆಗೆ ಇಲ್ಲಿಗೆ ಬರುತ್ತಾರೆ ಎಂದು ಹಳ್ಳಿಯ ಅರ್ಚಕರಾದ ಜಾನಕಿ ಪಂಡಿತ್ ಹೇಳುತ್ತಾರೆ.

English summary
Bihar state, Nalanda district Maadhi village has no Muslims. But Mosque is there. Hindu offer Namaz in the Mosque.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X