ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಜನ್ಮದಿನ ಶುಭಾಶಯ"ದ ಹಿಂದಿದೆಯಾ ರಾಜಕೀಯ ಲೆಕ್ಕಾಚಾರ?

|
Google Oneindia Kannada News

ಪಾಟ್ನಾ, ನವೆಂಬರ್.09: ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬೀಳುವುದಕ್ಕೂ ಮುನ್ನ ದಿನ ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರಿಗೆ ಲೋಕಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಹುಟ್ಟುಹಬ್ಬದ ಶುಭಾಷಯ ಕೋರಿದ್ದಾರೆ.

ನವೆಂಬರ್.09ರಂದು ರಾಷ್ಟ್ರೀಯ ಜನತಾ ದಳ ಪಕ್ಷದ ಮುಖ್ಯಸ್ಥ ತೇಜಸ್ವಿ ಯಾದವ್ 32ನೇ ವಸಂತಕ್ಕೆ ಕಾಲಿಟ್ಟದ್ದು, ಶುಭಾಷಯಗಳ ಮಹಾಪೂರವೇ ಹರಿದು ಬಂದಿದೆ. ಈ ಮಧ್ಯೆ ಚಿರಾಗ್ ಪಾಸ್ವಾನ್ ಅವರ ಟ್ವೀಟ್ ರಾಜಕೀಯ ಲೆಕ್ಕಾಚಾರಕ್ಕೆ ನಾಂದಿ ಹಾಡಿದೆ.

ಅಮೆರಿಕಾ ಚುನಾವಣೆ ಮತ್ತು ಬಿಹಾರ ಚುನಾವಣೆ ನಡುವೆ ಹೋಲಿಕೆ!ಅಮೆರಿಕಾ ಚುನಾವಣೆ ಮತ್ತು ಬಿಹಾರ ಚುನಾವಣೆ ನಡುವೆ ಹೋಲಿಕೆ!

"ನಿಮಗೆ ಹುಟ್ಟುಹಬ್ಬದ ಶುಭಾಷಯಗಳು. ಆ ದೇವರು ನಿಮ್ಮನ್ನು ದೀರ್ಘಾಯುಷ್ಯಿ ಆಗಿರುವಂತೆ ಆಶೀರ್ವದಿಸಲಿ. ನೀವು ಅಂದುಕೊಂಡ ಯಶಸ್ವಿ ಜೀವನವು ನಿಮ್ಮದಾಗಲಿ. ಇಂದು ನಿಮ್ಮ ಹುಟ್ಟುಹಬ್ಬವಾಗಿದ್ದು, ದೇವರ ಆಶೀರ್ವಾದ ನಿಮ್ಮ ಮೇಲಿರಲಿ" ಎಂದು ಚಿರಾಗ್ ಪಾಸ್ವಾನ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

Happy Birthday Brother: One Tweet Creates Many Doubts In Bihar Politics

ಚಿರಾಗ್ ಪಾಸ್ವಾನ್ ಸಂದೇಶಕ್ಕೆ ಧನ್ಯವಾದ:

ತಮಗೆ ಜನ್ಮದಿನದ ಶುಭಾಷಯ ಕೋರಿದ ಚಿರಾಗ್ ಪಾಸ್ವಾನ್ ಅವರಿಗೆ ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಧನ್ಯವಾದ ತಿಳಿಸಿದ್ದಾರೆ. ವಿಧಾನಸಭಾ ಚುನಾವಣಾ ಪ್ರಚಾರದ ಕಣದಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡ ನಾಯಕರು ಅಸಲಿಗೆ ಆಪ್ತ ಗೆಳೆಯರು. ಎರಡೂ ಕುಟುಂಬಗಳ ನಡುವೆ ಉತ್ತಮ ಸ್ನೇಹ ಸಂಬಂಧವಿದೆ. ರಾಜಕೀಯ ಪ್ರವೇಶಕ್ಕೂ ಮೊದಲು ಕ್ರೀಡೆಯಲ್ಲಿ ಇದೇ ತೇಜಸ್ವಿ ಯಾದವ್ ಹಾಗೂ ಚಿರಾಗ್ ಪಾಸ್ವಾನ್ ಸ್ನೇಹಿತರಾಗಿದ್ದರು.

ತೇಜಸ್ವಿ ಯಾದವ್ ತಂದೆ ಲಾಲೂ ಪ್ರಸಾದ್ ಯಾದವ್ ಹಾಗೂ ಚಿರಾಗ್ ಪಾಸ್ವಾನ್ ಅವರ ತಂದೆ ರಾಮ್ ವಿಲಾಸ್ ಪಾಸ್ವಾನ್ ಕೂಡಾ ಉತ್ತಮ ಸ್ನೇಹಿತರಾಗಿದ್ದವರು. ಬಿಹಾರದಲ್ಲಿ ನಡೆದ ಚಳುವಳಿ ಮತ್ತು ಹೋರಾಟಗಳಲ್ಲಿ ಪರಸ್ಪರ ಇಬ್ಬರು ನಾಯಕರು ಕೈಜೋಡಿಸಿದ ಇತಿಹಾಸವೂ ಇದೆ.

ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರೋಧಿ ಅಲೆಯಲ್ಲಿ ಮುಂದಿನ ಮುಖ್ಯಮಂತ್ರಿ ಗದ್ದುಗೆ ಏರಲು ತೇಜಸ್ವಿ ಯಾದವ್ ತುದಿಗಾಲ ಮೇಲೆ ನಿಂತಿದ್ದಾರೆ. ಕಾಂಗ್ರೆಸ್ ಜೊತೆಗೆ ಕೈಜೋಡಿಸಿರುವ ಸ್ನೇಹಿತನಿಗೆ ಆಪತ್ತಿನ ಕಾಲದಲ್ಲಿ ಚಿರಾಗ್ ಪಾಸ್ವಾನ್ ಕೂಡಾ ಬೆಂಬಲ ನೀಡುತ್ತಾರೆಯೇ ಎಂಬ ಪ್ರಶ್ನೆಗಳು ಬಿಹಾರದ ರಾಜಕೀಯ ವಲಯಗಳಲ್ಲಿ ಚರ್ಚೆ ಆಗುತ್ತಿವೆ.

2020ರ ವಿಧಾನಸಭಾ ಚುನಾವಣೆಗೆ ಈಗಾಗಲೇ ಮೂರು ಹಂತಗಳಲ್ಲಿ ಮತದಾನ ನಡೆದಿದೆ. ಅಕ್ಟೋಬರ್.28ರ ಮೊದಲ ಹಂತದಲ್ಲಿ ಶೇ.55.69ರಷ್ಟು ಮತದಾನ ನಡೆದಿದೆ. ನವೆಂಬರ್.03ರ ಎರಡನೇ ಹಂತದಲ್ಲಿ ಶೇ.53.51ರಷ್ಟು ಮತದಾನ ನಡೆದಿದೆ. ಶನಿವಾರ 3ನೇ ಹಂತದಲ್ಲಿ ಶೇ.51ರಷ್ಟು ಮತದಾನ ನಡೆದಿದ್ದು, ನವೆಂಬರ್.10ರಂದು ಫಲಿತಾಂಶ ಹೊರಬೀಳಲಿದೆ.

English summary
"Happy Birthday Brother": One Tweet Creates Many Doubts In Bihar Politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X