ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇವು ಹಗರಣ; ಜಾರ್ಖಂಡ್ ಹೈಕೋರ್ಟ್‌ನಿಂದ ಲಾಲೂ ಪ್ರಸಾದ್ ಜಾಮೀನು ತಿರಸ್ಕಾರ

|
Google Oneindia Kannada News

ಪಾಟ್ನಾ, ಫೆಬ್ರವರಿ 19: ಮೇವು ಹಗರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಜಾಮೀನು ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್‌ ತಿರಸ್ಕರಿಸಿದ್ದು, ಎರಡು ತಿಂಗಳ ನಂತರ ಹೊಸ ಅರ್ಜಿ ಸಲ್ಲಿಸಲು ಸೂಚಿಸಿದೆ.

ಲಾಲು ಪ್ರಸಾದ್ ಅವರು ಮುಖ್ಯಮಂತ್ರಿಯಾಗಿದ್ದ 1992-93ರ ಅವಧಿಯಲ್ಲಿ ಚೈಬಾಸಾ ಖಜಾನೆಯಲ್ಲಿ 33.67 ಕೋಟಿ ಅವ್ಯವಹಾರ ಪ್ರಕರಣದಲ್ಲಿ 2017ರಿಂದಲೂ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲೂ ಸೇರಿ ಒಟ್ಟು 16 ಮಂದಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ಬಹುಕೋಟಿ ಮೇವು ಹಗರಣದಲ್ಲಿ ನಾಲ್ಕು ಪ್ರಕರಣಗಳನ್ನು ಎದುರಿಸುತ್ತಿರುವ ಲಾಲೂ ಪ್ರಸಾದ್ ಅವರಿಗೆ ಮೂರು ಪ್ರಕರಣದಲ್ಲಿ ಈಗಾಗಲೇ ಜಾಮೀನು ದೊರೆತಿದೆ. ಈ ಮುನ್ನ ಲಾಲೂ ಪ್ರಸಾದ್ ಆರೋಗ್ಯ ಕಾರಣದಿಂದ ಜಾರ್ಖಂಡ್‌ನ ರಾಂಚಿಯಲ್ಲಿರುವ ರಾಜೇಂದ್ರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಹದಗೆಟ್ಟ ಕಾರಣ ಈಚೆಗೆ ಅವರನ್ನು ದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು.

ಡುಮ್ಕಾ ಖಜಾನೆ ಪ್ರಕರಣ: ಡಿ.11ಕ್ಕೆ ಲಾಲೂ ಜಾಮೀನು ಅರ್ಜಿ ವಿಚಾರಣೆ ಡುಮ್ಕಾ ಖಜಾನೆ ಪ್ರಕರಣ: ಡಿ.11ಕ್ಕೆ ಲಾಲೂ ಜಾಮೀನು ಅರ್ಜಿ ವಿಚಾರಣೆ

ತಮ್ಮ ಶಿಕ್ಷೆಯ ಅವಧಿಯನ್ನು ಅರ್ಧ ಪೂರೈಸಿರುವುದಾಗಿ ಕೋರಿ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

Fodder Scam Jharkhand HC Rejects Bail Plea Of Lalu Prasad Yadav

ಜನವರಿ 29ಕ್ಕೆ ಅರ್ಜಿ ಕೈಗೆತ್ತಿಕೊಂಡಿದ್ದ ಜಾರ್ಖಂಡ್ ಹೈಕೋರ್ಟ್ ಫೆ.19ಕ್ಕೆ ವಿಚಾರಣೆ ಮುಂದೂಡಿದ್ದು, ಶುಕ್ರವಾರ ವಿಚಾರಣೆ ನಡೆಸಿದೆ. ಈ ಪ್ರಕರಣದಲ್ಲಿ ತಮಗೆ ಪೂರಕ ಆದೇಶ ದೊರೆತು ಜೈಲಿನಿಂದ ಬಿಡುಗಡೆಯಾಗುವುದಾಗಿ ಲಾಲೂ ಪ್ರಸಾದ್ ನಿರೀಕ್ಷಿಸಿದ್ದರು. ಆದರೆ ಜಾಮೀನು ತಿರಸ್ಕೃತಗೊಂಡಿದೆ.

English summary
Jharkhand High Court on Friday rejected bail plea of Bihar former Chief Minister Lalu Prasad Yadav in connection with the fodder scam case,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X