ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಹದಲ್ಲಿ ಮುಳುಗಿದ ಬಿಹಾರ: ಮೃತರ ಸಂಖ್ಯೆ 29ಕ್ಕೆ ಏರಿಕೆ

|
Google Oneindia Kannada News

ಪಟ್ನಾ, ಸೆಪ್ಟೆಂಬರ್ 30: ಬಿಹಾರದ ಅನೇಕ ಕಡೆ ಭಾರಿ ಮಳೆ ಮುಂದುವರಿದಿದ್ದು, ರಾಜಧಾನಿ ಪಟ್ನಾ ಕಳೆದ ಮೂರು ದಿನಗಳಿಂದ ಜಲಾವೃತವಾಗಿದೆ. ತಗ್ಗಿನ ಪ್ರದೇಶಗಳಲ್ಲಿನ ಮನೆಗಳು ಮತ್ತು ಆಸ್ಪತ್ರೆಗಳಿಗೆ ನೀರು ನುಗ್ಗಿದ್ದು, ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪ್ರವಾಹ ಸಂಬಂಧಿ ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 29ಕ್ಕೆ ಏರಿದೆ. ಸಾವಿರಾರು ಜನರು ಸಂತ್ರಸ್ತರಾಗಿದ್ದಾರೆ.

ರಾಷ್ಟ್ರೀಯ ವಿಪತ್ತು ಪರಿಹಾರ ದಳದ ಮೂರು ತಂಡಗಳು ನಗರದಲ್ಲಿ ಸತತ ಕಾರ್ಯಾಚರಣೆಗಳನ್ನು ನಡೆಸಿ ಜನರನ್ನು ರಕ್ಷಿಸುವ ಕಾರ್ಯಗಳಲ್ಲಿ ನಿರತವಾಗಿವೆ. ರಸ್ತೆಗಳು ಮುಚ್ಚಿಹೋಗಿದ್ದು, ನೀರಿನ ತುಂಬಿರುವ ಪ್ರದೇಶಗಳಲ್ಲಿ ದೋಣಿಗಳನ್ನು ಬಳಸಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗುತ್ತಿದೆ.

ಬಿಹಾರದಲ್ಲಿ ಭಾರೀ ಮಳೆ, ಪ್ರವಾಹ: 27 ಮಂದಿ ದುರ್ಮರಣಬಿಹಾರದಲ್ಲಿ ಭಾರೀ ಮಳೆ, ಪ್ರವಾಹ: 27 ಮಂದಿ ದುರ್ಮರಣ

ಪಟ್ನಾದ ತಮ್ಮ ನಿವಾಸದಲ್ಲಿ ಸಿಲುಕಿದ್ದ ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರನ್ನು ಎನ್‌ಡಿಎಆರ್ಎಫ್ ಸಿಬ್ಬಂದಿ ರಕ್ಷಿಸಿದರು. ಮುಂಜಾಗ್ರತಾ ದೃಷ್ಟಿಯಿಂದ ಮಂಗಳವಾರದವರೆಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪಟ್ನಾದ ಜಕ್ಕನಪುರ ಪೊಲೀಸ್ ಠಾಣೆಯ ಒಳಗೆ ನೀರು ನುಗ್ಗಿದೆ.

ಭಾರಿ ಮಳೆ ಎಚ್ಚರಿಕೆ

ಬಿಹಾರದ ಅನೇಕ ಕಡೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಪಟ್ನಾ ಮತ್ತು ಇತರೆ ಜಿಲ್ಲೆಗಳಲ್ಲಿ ಭಾರಿಯಿಂದ ವಿಪರೀತ ಮಳೆ ಸುರಿಯಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಪಟ್ನಾದ ಅತಿ ದೊಡ್ಡ ಆಸ್ಪತ್ರೆ ನಳಂದಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸೇರಿದಂತೆ ಅನೇಕ ಆಸ್ಪತ್ರೆಗಳ ಒಳಗೆ ನೀರು ನುಗ್ಗಿದೆ. ಜಲಾವೃತವಾಗಿರುವ ಆಸ್ಪತ್ರೆಯ ಕೊಠಡಿಗಳಲ್ಲಿಯೇ ಹಾಸಿಗೆಯ ಮೇಲೆ ರೋಗಿಗಳು ಮಲಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಂಚಾರಕ್ಕೆ ಅಡ್ಡಿ, ವಿದ್ಯುತ್ ವ್ಯತ್ಯಯ

ಸಂಚಾರಕ್ಕೆ ಅಡ್ಡಿ, ವಿದ್ಯುತ್ ವ್ಯತ್ಯಯ

ಇನ್ನು ಕೆಲವೆಡೆ ರಸ್ತೆಯ ಮೇಲೆ ನೀರು ಹರಿಯುತ್ತಿರುವುದರಿಂದ ಸಂಚಾರ ದಟ್ಟಣೆ ಉಂಟಾಗಿದೆ. ರೈಲುಗಳ ಓಡಾಟಕ್ಕೂ ಅಡ್ಡಿಯಾಗಿದೆ. ಕಳೆದ ಮೂರು ದಿನಗಲ್ಲಿ ಅನೇಕ ರೈಲುಗಳು ಸಂಚಾರ ಸ್ಥಗಿತಗೊಳಿಸಿವೆ. ಎರಡು ದಿನಗಳಲ್ಲಿ ನಗರದ ಹಲವೆಡೆ ವಿದ್ಯುತ್ ಪೂರೈಕೆ ಸಹ ಸ್ಥಗಿತಗೊಂಡಿವೆ. ನಗರದಲ್ಲಿ ಸುಮಾರು 32 ದೋಣಿಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ.

ಉತ್ತರ ಕರ್ನಾಟಕ ಭಾರತಕ್ಕೆ ಸೇರಿದೆ, ಮೋದಿಜೀ ಇತ್ತ ನೋಡಿ!ಉತ್ತರ ಕರ್ನಾಟಕ ಭಾರತಕ್ಕೆ ಸೇರಿದೆ, ಮೋದಿಜೀ ಇತ್ತ ನೋಡಿ!

ಕಣ್ಣೀರಿಟ್ಟ ರಿಕ್ಷಾವಾಲ

ರಿಕ್ಷಾ ಎಳೆಯುವ ವ್ಯಕ್ತಿಯೊಬ್ಬ ನೀರಿನಲ್ಲಿ ಮುಳುಗಿರುವ ರಸ್ತೆಯಲ್ಲಿ ಸಿಲುಕಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ರಿಕ್ಷಾ ಎಳೆಯಲು ಪ್ರಯತ್ನಿಸುತ್ತಿರುವ ಆತ ಅದರಲ್ಲಿ ಸೋತು ಅಸಹಾಯಕತೆಯಿಂದ ಕಣ್ಣೀರಿಡುತ್ತಿರುವ ಹೃದಯ ಕಲಕುವ ವಿಡಿಯೋ ಎಲ್ಲರನ್ನೂ ಕಾಡುತ್ತಿದೆ. ರಸ್ತೆಯ ಪಕ್ಕದಲ್ಲಿ ಎತ್ತರದ ಕಟ್ಟಡದಲ್ಲಿರುವ ನಿವಾಸಿಗಳು ಈ ವಿಡಿಯೋ ಚಿತ್ರೀಕರಿಸಿದ್ದು, ರಿಕ್ಷಾ ಎಳೆಯುವವನಿಗೆ ಹೇಗೆ ಹೋಗಬೇಕೆಂದು ಮಾರ್ಗದರ್ಶನ ಮಾಡುತ್ತಿರುವುದು ದಾಖಲಾಗಿದೆ.

Array

ಸಂಕಷ್ಟಲ್ಲಿ ಇರುವವರಿಗೆ ಸಹಾಯವಾಣಿ

ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವಾಗಲು ಬಿಹಾರ ಸರ್ಕಾರ ಸಹಾಯವಾಣಿ ಸಂಖ್ಯೆಗಳನ್ನು ನೀಡಿದೆ.

ರಾಜೇಂದ್ರ ನಗರ: 9006192686
ಪಟ್ನಾ ನಗರ: 7903331869, 8340582547
ಕದಂಕುವಾನ್: 8210286544, 9431295882
ಎನ್‌ಡಿಆರ್ಎಫ್: 8541908006
ಎಸ್‌ಡಿಆರ್ಎಫ್: 9801598289
ಕಂಕರ್ಬಾಗ್: 6203674823

ಪುಣೆಯಲ್ಲಿ ಭಾರೀ ಮಳೆಗೆ ಕನಿಷ್ಠ ಹನ್ನೊಂದು ಮಂದಿ ಸಾವುಪುಣೆಯಲ್ಲಿ ಭಾರೀ ಮಳೆಗೆ ಕನಿಷ್ಠ ಹನ್ನೊಂದು ಮಂದಿ ಸಾವು

English summary
Floods situation turns worst in Bihar's Patna and other district as heavy rain continues on the third day. Death toll rises to 29 on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X