ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಹಕ್ಕೆ ತತ್ತರಿಸಿದ ಬಿಹಾರ: 31 ಮಂದಿ ಸಾವು, 40 ಲಕ್ಷ ಜನರ ಸ್ಥಳಾಂತರ

|
Google Oneindia Kannada News

ಪಾಟ್ನಾ, ಜುಲೈ 16: ಮುಂಗಾರು ಆಗಮನಕ್ಕೂ ಮೊದಲು ಎಲ್ಲೂ ಮಳೆಯಾಗುತ್ತಿಲ್ಲವಲ್ಲ ಎನ್ನುವ ಆತಂಕ ಈಗ ಮುಂಗಾರು ಆರಂಭವಾದ ಬಳಿಕ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಯಾವಾಗ ಮಳೆ ನಿಲ್ಲುತ್ತೋ ಎನ್ನುವಂತಾಗಿದೆ.

ಹೌದು ಬಿಹಾರದ ಜನತೆ ಪ್ರವಾಹದಿಂದ ತತ್ತರಿಸಿದೆ. ಈಗಾಗಲೇ 31 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾಕಷ್ಟು ಮಂದಿಯನ್ನು ನಿರಾಶ್ರಿತರ ಕೇಂದ್ರಗಳಿಗೆ ಕಳುಹಿಸಲಾಗಿದೆ.

ನೇಪಾಳ ಪ್ರವಾಹದಲ್ಲಿ ಕನಿಷ್ಠ 47 ಮಂದಿ ಸಾವು, ಹತ್ತಾರು ಮಂದಿ ನಾಪತ್ತೆ ನೇಪಾಳ ಪ್ರವಾಹದಲ್ಲಿ ಕನಿಷ್ಠ 47 ಮಂದಿ ಸಾವು, ಹತ್ತಾರು ಮಂದಿ ನಾಪತ್ತೆ

ನದಿಗಳಲ್ಲಿ ನೀರಿನ ಮಟ್ಟವೂ ಕೂಡ ಹೆಚ್ಚಾಗುತ್ತಿದೆ. ಅರಾರಿಯಾ, ಕಿಶನ್‌ಗಂಜ್, ದರ್ಬಾಂಗಾ, ಮಧುಬನಿ, ಮುಜಾಫರ್‌ಪುರ್‌ ಜಿಲ್ಲೆಗಳಿಗೆ ಅಪಾಯ ಉಂಟಾಗಿದೆ. ಸೀತಾಮರಿಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಅರಾರಿಯಾದಲ್ಲಿ 11 ಮಂದಿ, ಕಿಶನ್‌ಗಂಜ್‌ನಲ್ಲಿ ನಾಲ್ಕು ಮಂದಿ, ಮಧುಬನಿಯಲ್ಲಿ ಎರಡು ಮಂದಿ ಜೀವ ಕಳೆದುಕೊಂಡಿದ್ದಾರೆ.

Flood wreaks havoc in Bihar

ಉತ್ತರ ಬಿಹಾರದ 12 ಜಿಲ್ಲೆಗಳು ಪ್ರವಾಹಕ್ಕೊಳಗಾಗಿದೆ. ಸಾಕಷ್ಟು ರಸ್ತೆಗಳು ಬಿರುಕುಬಿಟ್ಟಿವೆ, ಮರಗಳು ಧರೆಗುರುಳಿವೆ, ರಸ್ತೆಯೆಲ್ಲಾ ಚರಂಡಿಯಾಗಿ ಪರಿವರ್ತನೆಗೊಂಡಿವೆ.
ಪ್ರವಾಹಕ್ಕೊಳಗಾಗಿರುವ ಪ್ರದೇಶ ವಾಸಿಗಳಿಗೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗುತ್ತಿದೆ. ಸರ್ಕಾರು 350 ಕಮ್ಯುನಿಟಿ ಕಿಚನ್‌ಗಳನ್ನು ಸಿದ್ಧಪಡಿಸಿದ್ದು ಅಲ್ಲಿಂದಲೇ ಆಹಾರ ಸರಬರಾಜಾಗುತ್ತಿದೆ.

ಭಾಗಮತಿ, ಕಮಲ, ಮಹಾನಂದ್ರಾ ನದಿ ಅಪಾಯಮಟ್ಟಕ್ಕೆ ತಲುಪಿದೆ. ಒಟ್ಟು 13 ನೈಸರ್ಗಿಕ ವಿಕೋಪ ನಿರ್ವಹಣಾ ತಂಡ ಕಾರ್ಯ ನಿರ್ವಹಿಸುತ್ತಿದೆ. ಎರಡು ದಿನಗಳ ಹಿಂದೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿದ್ದಾರೆ. 12 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಭಾಗಮತಿ, ಕಮಲ ಬಾಲನ್, ಕೋಸಿ, ಗಂಡಕ ನದಿ ತುಂಬಿ ಹರಿಯುತ್ತಿದೆ. ಬಿಹಾರ ಸರ್ಕಾರವು ಕೋಸಿ ಬ್ಯಾರೇಜಿನ 56 ಗೇಟುಗಳನ್ನು ತೆರೆದಿದೆ.

English summary
Flood wreaks havoc in Bihar's 12 districts. At least 31 people have died and over 20 lakh people have been affected due to flood .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X