ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Just in: ಬಿಹಾರದ ಉದ್ಯಮಿ ಮನೆಯಲ್ಲಿ ಪಟಾಕಿ ಸ್ಪೋಟ: 5 ಸಾವು

|
Google Oneindia Kannada News

ಪಾಟ್ನಾ ಜುಲೈ 24: ಬಿಹಾರ ರಾಜ್ಯದಲ್ಲಿ ಉದ್ಯಮಿ ಮನೆಯೊಬ್ಬರ ಮನೆಯಲ್ಲಿದ್ದ ಪಟಾಕಿಗಳು ಸ್ಪೋಟಗೊಂಡ ಭೀಕರ ಘಟನೆ ನಡೆದಿದೆ. ಘಟನೆಯಲ್ಲಿ 6 ಮಂದಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಬಿಹಾರದಲ್ಲಿನ ಸರಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪಟಾಕಿ ಉದ್ಯಮಿಯೊಬ್ಬರು ತಮ್ಮ ಮನೆಯಲ್ಲಿ ಪಟಾಕಿಗಳ ದಾಸ್ತಾನು ಮಾಡಿಟ್ಟುಕೊಂಡಿದ್ದರು. ಆಕಸ್ಮಾತ್ ಆಗಿ ಬೆಂಕಿ ತಗಲಿ ಪಟಾಕಿ ಸ್ಪೋಟಗೊಂಡಿದ್ದರಿಂದ ಆರು ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಸುಮಾರು 8 ಮಂದಿ ಸಿಲುಕಿರುವ ಅನುಮಾನ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಪಟಾಕಿ ಉತ್ಪಾದನೆ ತಯಾರಿಕೆ ಕಟ್ಟಡ ಪಕ್ಕದಲ್ಲೇ ಪಟಾಕಿ ಉದ್ಯಮಿ ಮನೆ ಇದ್ದು. ತಯಾರಿಸಿದ ಪಟಾಕಿಗಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದರು. ಸ್ಪೋಟದ ಸದ್ದು, ಘಟನೆ ಕುರಿತು ತಿಳಿಯುತ್ತಿದ್ದ ಮನೆಯತ್ತ ಸಾರ್ವಜನಿಕರು ಜಮಾಯಿಸಿದ್ದಾರೆ. ಘಟನೆಯಲ್ಲಿ ಮನೆ ಸಹ ಜಖಂಗೊಂಡಿದೆ.

ಪಟಾಕಿ ಸ್ಪೋಟಗೊಂಡ ಮನೆ ಮಾಲೀಕ ಮತ್ತು ಉದ್ಯಮಿಯನ್ನು ಶಬೀರ್ ಹುಸೇನ್ ಎಂದು ಗುರುತಿಸಲಾಗಿದೆ. ಪಟಾಕಿ ತೀವ್ರ ಸ್ಫೋಟದಿಂದ ಉದ್ಯಮಿ ಮನೆಯ ಒಂದು ಭಾಗ ಜಖಂಗೊಂಡಿದೆ. ಮನೆಯ ಇನ್ನಿತರ ಭಾಗಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದರು.

ಅವಘಡದಲ್ಲಿ ಒಟ್ಟು ಆರು ಮಂದಿ ಮೃತಪಟ್ಟಿದ್ದು, ಎಂಟು ಮಂದಿ ಜಖಂಡಗೊಂಡು ಕುಸಿದ ಮನೆ ಅವಶೇಷಗಳಡಿ ಸಿಲುಕಿದ್ದಾರೆ. ಅವರನ್ನು ರಕ್ಷಿಸುವ ಕಾರ್ಯ ಮುಂದುವರಿದೆ. ಈಗಾಗಲೇ ಗಾಯಗೊಂಡ ಹಲವರನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸಲಾಗಿದೆ.

ಪಟಾಕಿ ಸ್ಪೋಟದ ತೀವ್ರಗೆ ಮನೆ ಕುಸಿದಿದ್ದು, ಆರು ಜನರು ಸಾವನ್ನಪ್ಪಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ, ಆಬಗ್ಗೆ ತನಿಖೆ ನಡೆಯಲಿದೆ. ಘಟನಾ ಸ್ಥಳಕ್ಕೆ ವಿಧಿ ವಿಜ್ಞಾನ ತಂಡ ಮತ್ತು ಬಾಂಬ್ ನಿಷ್ಕ್ರಿಯ ದಳ ಸಿಬ್ಬಿಂದಿಯನ್ನು ಕರೆಸಿದ್ದೇವೆ ಎಂದು ಸರನ್ ಪೊಲೀಸ್‌ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಮಾಹಿತಿ ನೀಡಿದ್ದಾರೆ.

Firecracker Explosion In Bihar Businessman House 5 killed

Recommended Video

Tiger Crossing Road: ಹುಲಿಯನ್ನ ರಸ್ತೆ ದಾಟಿಸಿದ ಪೊಲೀಸ್ ಅಧಿಕಾರಿ | *India | OneIndia Kannada

English summary
Firecracker explosion In Bihar businessman house, 5 killed in accident. Incident took place at Saran at Bihar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X