ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ವಿಡಿಯೋ, ಬಿಹಾರದಲ್ಲಿ ಡೆಮು ರೈಲಿಗೆ ಬೆಂಕಿ

|
Google Oneindia Kannada News

ಪಾಟ್ನಾ, ಜುಲೈ 03; ಬಿಹಾರದಲ್ಲಿ ಡೆಮು ರೈಲಿನ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇತರ ಬೋಗಿಗಳಿಗೆ ಬೆಂಕಿಯೂ ಹಬ್ಬಿಲ್ಲ, ಇದರಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ.

ಭಾನುವಾರ ಮುಂಜಾನೆ ಭೆಲ್ವಾ ರೈಲು ನಿಲ್ದಾಣದ ಸಮೀಪ ಈ ಘಟನೆ ನಡೆದಿದೆ. ರಕ್ಸಾಲ್‌ನಿಂದ ನರ್ಕಟಿಯಾಗಂಜ್‌ಗೆ ಹೋಗುತ್ತಿದ್ದ ಡೆಮು ರೈಲಿನ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಂಜಿನ್ ಹೊತ್ತಿ ಉರಿಯುತ್ತಿರುವ ವಿಡಿಯೋ ವೈರಲ್ ಆಗಿದೆ.

ಧಾರವಾಡ-ಬೆಳಗಾವಿ ನೇರ ರೈಲು ಯೋಜನೆ ಶೀಘ್ರ ಆರಂಭಧಾರವಾಡ-ಬೆಳಗಾವಿ ನೇರ ರೈಲು ಯೋಜನೆ ಶೀಘ್ರ ಆರಂಭ

ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣ ತಿಳಿದುಬಂದಿಲ್ಲ. ಬೆಂಕಿ ಇಂಜಿನ್‌ನಿಂದ ಇತರ ಬೋಗಿಗಳಿಗೆ ಹಬ್ಬಿಲ್ಲ. ಆದ್ದರಿಂದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೊಸಪೇಟೆ-ಹರಿಹರ, ಬಳ್ಳಾರಿ-ಹೊಸಪೇಟೆ ಡೆಮು ರೈಲು; ವೇಳಾಪಟ್ಟಿಹೊಸಪೇಟೆ-ಹರಿಹರ, ಬಳ್ಳಾರಿ-ಹೊಸಪೇಟೆ ಡೆಮು ರೈಲು; ವೇಳಾಪಟ್ಟಿ

Fire In DEMU Train Engine At Bihar All Passengers Safe

ಬಿಹಾರದಲ್ಲಿ ಡೆಮು ರೈಲು ಇಂಜಿನ್‌ಗೆ ಬೆಂಕಿ ಹೊತ್ತಿರುವ ವಿಡಿಯೋ

ಬೆಂಕಿಯಿಂದಾಗಿ ಇಂಜಿನ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ರೈಲ್ವೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮುಂಜಾನೆ 5.25ಕ್ಕೆ ರೈಲಿನ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ಪ್ರಯಾಣಿಕರಿಗೆ ಮಾಹಿತಿ ನೀಡಿ ಅವರು ರೈಲಿನಿಂದ ಇಳಿಯುವಂತೆ ಸೂಚನೆ ನೀಡಲಾಯಿತು. ಯಾವುದೇ ಪ್ರಯಾಣಿಕರು ಗಾಯಗೊಂಡಿಲ್ಲ.

Recommended Video

ಟೈಲರ್ ಹತ್ಯೆ ವಿಚಾರಕ್ಕೆ ಸಾಥ್ ಕೊಟ್ರಾ ರಾಹುಲ್ ಗಾಂಧಿ! | OneIndia Kannada

ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. 6.06ಕ್ಕೆ ಕಾರ್ಯಾಚರಣೆ ಆರಂಭಿಸಿದ ಸಿಬ್ಬಂದಿ 7.20ಕ್ಕೆ ಬೆಂಕಿಯನ್ನು ಹತೋಟಿಗೆ ತಂದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಇಂಜಿನ್‌ಗೆ ಹಾನಿಯಾಗಿದ್ದು, ಬೋಗಿಗಳಿಗೆ ಬೆಂಕಿ ತಗುಲಿಲ್ಲ.

ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈಲ್ವೆ ಇಲಾಖೆ ಘಟನೆ ಕುರಿತು ವಿವರವಾರ ವರದಿ ನೀಡುವಂತೆ ಸೂಚನೆ ನೀಡಿದೆ. ಬೇರೆ ಇಂಜಿನ್ ಮೂಲಕ ಹಳಿಯ ಮೇಲಿದ್ದ ಬೋಗಿಗಳನ್ನು ಸ್ಥಳಾಂತರ ಮಾಡಲಾಯಿತು.

English summary
Fire accident in Diesel Electric Multiple Unit (DEMU) train engine near Bhelwa railway station, Bihar. All passengers are safe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X