• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರ ಪಿಎಚ್‌ಸಿಯಲ್ಲಿ ಅಕ್ರಮ: ಕೊರೊನಾ ಪರೀಕ್ಷೆ,ವ್ಯಕ್ತಿ,ಫೋನ್ ನಂಬರ್ ಎಲ್ಲಾ ನಕಲಿ

|

ಪಾಟ್ನಾ,ಫೆಬ್ರವರಿ 11: ಕೊರೊನಾ ಪರೀಕ್ಷೆಯನ್ನೇ ಮಾಡದೆ ನೆಗೆಟಿವ್ ವರದಿಯನ್ನು ನೀಡಿದ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದೆ.

ಬಿಹಾರದ ಒಟ್ಟು ಮೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂತಹ ವರದಿಯನ್ನು ನೀಡಲಾಗಿದೆ. ಕೊರೊನಾ ನೆಗೆಟಿವ್ ವರದಿಯನ್ನು ದುಡ್ಡಿಗೆ ಮಾರಾಟ ಮಾಡುವುದು, ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆಯನ್ನು ಸಾಮಾನ್ಯವಾಗಿ ನೋಡಿದ್ದೇವೆ, ಆದರೆ ಯಾರದ್ದೋ ಮೊಬೈಲ್ ನಂಬರ್, ಯಾರದ್ದೋ ಹೆಸರು ಪರೀಕ್ಷೆಯನ್ನೇ ಮಾಡದೆ ಸರ್ಟಿಫಿಕೇಟ್ ಮಾತ್ರ ನೆಗೆಟಿವ್ ನೀಡಲಾಗಿದೆ.

ಭಾರತದಲ್ಲಿ 68 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾ ಲಸಿಕೆಭಾರತದಲ್ಲಿ 68 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾ ಲಸಿಕೆ

ಒಂದೇ ಮೊಬೈಲ್ ನಂಬರ್‌ ಅನ್ನು ಹತ್ತಾರು ಕಡೆ ನಮೂದಿಸಲಾಗಿದೆ. ಬಿಹಾರ ಆರೋಗ್ಯ ಇಲಾಖೆ ಆರೋಗ್ಯಾಧಿಕಾರಿ ಅಮೃತ್ ಮಾತನಾಡಿ, ಈ ಕುರಿತು ಇಲಾಖೆಯಿಂದ ಮಾಹಿತಿ ಕೇಳಿದ್ದೇವೆ, ಎಲ್ಲಾ ಹಂತದಲ್ಲೂ ತನಿಖೆ ನಡೆಯಲಿದೆ. ಕೊರೊನಾ ಲಸಿಕೆ ನೀಡುವ ಸಂದರ್ಭದಲ್ಲಿ ಪ್ರತಿಯೊಬ್ಬರ ಹೆಸರನ್ನೂ ಆಧಾರ್ ಕಾರ್ಡ್ ಜತೆ ಲಿಂಕ್ ಮಾಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

 ಒಟ್ಟು ಹೆಸರುಗಳ ಪೈಕಿ ಶೇ.10ರಷ್ಟು ಮಂದಿಗೆ ಮಾತ್ರ ಪರೀಕ್ಷೆ

ಒಟ್ಟು ಹೆಸರುಗಳ ಪೈಕಿ ಶೇ.10ರಷ್ಟು ಮಂದಿಗೆ ಮಾತ್ರ ಪರೀಕ್ಷೆ

ಒಟ್ಟು ನೆಗೆಟಿವ್ ಸರ್ಟಿಫಿಕೇಟ್‌ ಬಂದಿರುವ ಹೆಸರುಗಳ ಪೈಕಿಯಲ್ಲಿ ಶೇ.10 ರಷ್ಟು ಮಂದಿಗೆ ಮಾತ್ರ ನಿಜವಾಗಿಯೂ ಪರೀಕ್ಷೆ ಮಾಡಲಾಗಿದೆ. ಕಳೆದ ಮೂರು ದಿನಗಳಲ್ಲಿ ಬಿಹಾರದ ಜುಮಯಿ ಜಿಲ್ಲೆಯ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳು 588 ಕೊರೊನಾ ಸೋಂಕಿತರ ಪರೀಕ್ಷೆ ನಡೆಸಿದೆ. ಎಲ್ಲರ ವರದಿಯೂ ನೆಗೆಟಿವ್ ಇದೆ.

 ವ್ಯಕ್ತಿ, ಹೆಸರು, ನಂಬರ್ ಎಲ್ಲಾ ಸುಳ್ಳು

ವ್ಯಕ್ತಿ, ಹೆಸರು, ನಂಬರ್ ಎಲ್ಲಾ ಸುಳ್ಳು

ಪರೀಕ್ಷಿಸಿದ ವ್ಯಕ್ತಿಯ ಹೆಸರು, ಮೊಬೈಲ್‌ ನಂಬರ್ ಚಾರ್ಟ್‌ನಲ್ಲಿ ನಮೂದಿಸಲಾಗಿದೆ. ಆದರೆ ಈ ಚಾರ್ಟ್‌ನಲ್ಲಿ ನಮೂದಿಸಲಾಗಿರುವ ಹೆಸರು, ಫೋನ್ ನಂಬರ್‌ಗಳು ನಕಲಿ ಎಂಬುದರ 'ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ. ಜಮುಯಿ, ಶೇಖ್‌ಪುರ ಮತ್ತು ಪಾಟ್ನಾದಲ್ಲಿ ಆರು ಪಿಎಚ್‌ಸಿಗಳಿಗೆ ಭೇಟಿ ನೀಡಿ ಜನವರಿ 16,ಜನವರಿ 18 ಹಾಗೂ ಜನವರಿ 25ರ ಪರೀಕ್ಷಾ ದಾಖಲೆಗಳನ್ನು ಪರಿಶೀಲಿಸಿತು.

 ನಿಜವಾಗಿಯೂ ಎಷ್ಟು ಮಂದಿಯ ಪರೀಕ್ಷೆ ನಡೆಸಿದ್ದಾರೆ

ನಿಜವಾಗಿಯೂ ಎಷ್ಟು ಮಂದಿಯ ಪರೀಕ್ಷೆ ನಡೆಸಿದ್ದಾರೆ

ಅದರಲ್ಲಿ ಕೊರೊನಾ ಕಿಟ್‌ಗಳ ಲಾಭ ಇನ್ನಿತರೆ ಅಂಶಗಳು ಬೆಳಕಿಗೆ ಬಂದಿದೆ. ಜಮುಯಿನಲ್ಲಿ 230 ವರದಿಗಳ ಪೈಕಿ ಕೇವಲ 12 ಮಾದರಿಗಳನ್ನು ಮಾತ್ರ ಪರೀಕ್ಷಿಸಲಾಗಿದೆ. ಸಿಕಂದರಾ ಪಿಎಚ್‌ಸಿಯಲ್ಲಿ 208 ನಮೂದುಗಳಲ್ಲಿ 43 ಮಂದಿ ಮಾತ್ರ ಪರೀಕ್ಷೆಗೆ ಒಳಪಟ್ಟಿದ್ದಾರೆ. ಸದರ್‌ನಲ್ಲಿ 150 ಮಂದಿಯಲ್ಲಿ ಕೇವಲ 65 ಮಂದಿ ಮಾತ್ರ ದಾಖಲಾದ ಡೇಟಾಗಳು ಸಿಕ್ಕಿವೆ. ಸಿಕಂದರಾದಲ್ಲಿ 16 ಮೊಬೈಲ್ ಸಂಖ್ಯೆಗಳು ನಕಲಿ, ಬರ್ಹತ್‌ನಲ್ಲಿ 14 ಮೊಬೈಲ್ ಸಂಖ್ಯೆಗಳು ನಕಲಿಯಾಗಿವೆ.

 ದಿನಗೂಲಿ ನೌಕರನ ಹೆಸರು, ನಂಬರ್ ಬಳಕೆ

ದಿನಗೂಲಿ ನೌಕರನ ಹೆಸರು, ನಂಬರ್ ಬಳಕೆ

ನಂಬರ್ ಒಂದು ಬಾಯ್‌ ಜು ರಾಜಕ್ ಎಂಬುವವರದ್ದಾಗಿದ್ದು, ಅವರು ದಿನಕೂಲಿ ಕೆಲಗಾರರಾಗಿದ್ದಾರೆ, ಆ ಸ್ಥಳದಿಂದ ಸುಮಾರು 100 ಕಿ.ಮೀ ದೂರದಲ್ಲಿ ಅವರಿದ್ದು, ಅವರ ಮೊಬೈಲ್ ಸಂಖ್ಯೆಯನ್ನು ಬಳಸಿಕೊಳ್ಳಲಗಿದೆ. ಅವರ ಮನೆಯಲ್ಲಿ ಯಾರೂ ಕೂಡ ಕೊರೊನಾ ಪರೀಕ್ಷೆ ಮಾಡಿಸಿಲ್ಲ ಎಂಬುದು ತಿಳಿದುಬಂದಿದೆ. ಬಳಿಕ ದಿನದ ಟಾರ್ಗೆಟ್ ತಲುಪಲು ಈ ರೀತಿ ಮಾಡಿದ್ದಾಗಿ ಅಧಿಕಾರಿಗಳು ತಪ್ಪೊಪ್ಪಿಕೊಂಡಿದ್ದಾರೆ.

English summary
Over three days last month, three Primary Health Centres (PHC) in Bihar’s Jamui district tested 588 residents for Covid — all were negative. The name, age and cell number of each person tested was put down in a chart and sent to Patna where it was aggregated with data from other districts to plot the state’s downward Covid curve.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X