• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

0000000000 ಇದು ಕೊರೊನಾ ಪರೀಕ್ಷೆ ಮಾಡಿಸಿಕೊಂಡವರ ಫೋನ್ ನಂಬರ್; ಬಿಹಾರದಲ್ಲಿ ನಕಲಿ ದಾಖಲೆ

|

ಪಾಟ್ನಾ, ಫೆಬ್ರುವರಿ 12: ಕೊರೊನಾ ಪರೀಕ್ಷೆ ನಡೆಸದೇ ನಕಲಿ ಕೋವಿಡ್ ಪರೀಕ್ಷಾ ವರದಿಗಳನ್ನು ನೀಡಿದ ಸಂಗತಿ ಬಿಹಾರದ ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈಚೆಗೆ ಬೆಳಕಿಗೆ ಬಂದಿತ್ತು. ಅಕ್ರಮವಾಗಿ ನೆಗೆಟಿವ್ ವರದಿ ನೀಡಿದ ಕುರಿತು ಸುದ್ದಿಯಾಗಿತ್ತು. ಇದೀಗ ಕೊರೊನಾ ಪರೀಕ್ಷೆ ದಾಖಲೆಗಳಲ್ಲಿಯೂ ಯಾವುದೇ ಶಿಷ್ಟಾಚಾರ ಪಾಲಿಸದೇ ಕಾಟಾಚಾರಕ್ಕೆ ಎಂಬಂತೆ ದಾಖಲೆಗಳನ್ನು ತುಂಬಿರುವುದು ಕಂಡುಬಂದಿದೆ.

ಬಿಹಾರದ ಸುಮಾರು ಆರು ಪ್ರಾಥಮಿಕ ಕೇಂದ್ರಗಳಲ್ಲಿ, ಕೊರೊನಾ ಪರೀಕ್ಷೆ ವಿವರದ ದಾಖಲಾತಿಯಲ್ಲಿ ಮೊಬೈಲ್ ನಂಬರ್ ಜಾಗದಲ್ಲಿ 0000000000 ಹಾಕಲಾಗಿದೆ. ಜಮುಯಿ ಬರ್ಹಾತ್ ಪ್ರಾಥಮಿಕ ಕೇಂದ್ರವೊಂದರಲ್ಲೇ, ಪರೀಕ್ಷೆ ಮಾಡಿಸಿಕೊಂಡ 48 ಮಂದಿಯಲ್ಲಿ 28 ಮಂದಿಯ ಮೊಬೈಲ್ ನಂಬರ್ ಜಾಗದಲ್ಲಿ ಈ ರೀತಿ ಸೊನ್ನೆಗಳನ್ನು ನಮೂದಿಸಿರುವುದು ಕಂಡುಬಂದಿದೆ. ಇದು ಜನವರಿ 16ರ ವರದಿಯಾದರೆ, ಜನವರಿ 25ರಂದು 83 ಮಂದಿಯಲ್ಲಿ 46 ಮಂದಿಯ ಮೊಬೈಲ್ ನಂಬರ್ ಜಾಗದಲ್ಲಿ ಸೊನ್ನೆಗಳನ್ನು ಬಳಸಲಾಗಿದೆ.

ಬಿಹಾರ ಪಿಎಚ್‌ಸಿಯಲ್ಲಿ ಅಕ್ರಮ: ಕೊರೊನಾ ಪರೀಕ್ಷೆ,ವ್ಯಕ್ತಿ,ಫೋನ್ ನಂಬರ್ ಎಲ್ಲಾ ನಕಲಿಬಿಹಾರ ಪಿಎಚ್‌ಸಿಯಲ್ಲಿ ಅಕ್ರಮ: ಕೊರೊನಾ ಪರೀಕ್ಷೆ,ವ್ಯಕ್ತಿ,ಫೋನ್ ನಂಬರ್ ಎಲ್ಲಾ ನಕಲಿ

ಇನ್ನೊಂದು ಕೇಂದ್ರದಲ್ಲಿ 16ನೇ ತಾರೀಕು 150 ಮಂದಿಯಲ್ಲಿ 73 ಜನರ ವರದಿಯ ವಿವರದ ಚಾರ್ಟ್ ನಲ್ಲಿ ಈ ಸೊನ್ನೆಗಳನ್ನು ಬಳಸಲಾಗಿದೆ. ಬಿಹಾರದ ಆರು ಆರೋಗ್ಯ ಕೇಂದ್ರಗಳಲ್ಲಿ "ಇಂಡಿಯನ್ ಎಕ್ಸ್‌ಪ್ರೆಸ್" ಜನವರಿ ದಾಖಲೆಗಳನ್ನು ಪರಿಶೀಲಿಸಿದ್ದು, 885 ಜನರ ದಾಖಲೆ ದೊರೆತಿದೆ. ಅದರಲ್ಲಿ ಬಹುಪಾಲು ಮೊಬೈಲ್ ನಂಬರ್ ಗಳ ಜಾಗದಲ್ಲಿ ಸೊನ್ನೆಗಳನ್ನು ಬಳಸಲಾಗಿದೆ. ಅಷ್ಟೇ ಅಲ್ಲದೇ ಒಂದೇ ಮೊಬೈಲ್ ನಂಬರ್‌ ಅನ್ನು ಹತ್ತಾರು ಕಡೆ ನಮೂದಿಸಲಾಗಿದೆ. ಕೊರೊನಾ ಪರೀಕ್ಷೆಯನ್ನೇ ನಡೆಸದ, ಇದಕ್ಕೆ ಸಂಬಂಧ ಪಡದ ಹಲವು ನಂಬರ್ ಗಳನ್ನು ದಾಖಲೆಯಲ್ಲಿ ಬಳಸಿಕೊಳ್ಳಲಾಗಿದೆ.

ಈ ರೀತಿಯ ನಕಲಿ ದಾಖಲೆಗಳು, ಕೊರೊನಾ ಪರೀಕ್ಷೆ ನಡೆಸಿರುವುದೇ ಸುಳ್ಳು ಎಂಬುದನ್ನು ಸಾಕ್ಷೀಕರಿಸುತ್ತಿವೆ.

ಸುಳ್ಳು ಮಾಹಿತಿ ನಮ್ಮ ಗಮನಕ್ಕೆ ಬಂದಿದೆ. ನಾವು ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದಲ್ಲಿ ಪರಿಶೀಲನೆ ನಡೆಸಿದ್ದೇವೆ ಎಂದು ಜಮುಯಿ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

English summary
Ten zeroes used to denote missing entries again proves creation of fake covid test documents in bihar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X