ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಟಾಕಿ ತಯಾರಿಸುವ ವೇಳೆ ಸ್ಫೋಟ: ಮಗು ಸೇರಿ 7 ಮಂದಿ ಸಾವು

|
Google Oneindia Kannada News

ಭಾಗಲ್ಪುರ, ಮಾರ್ಚ್ 04: ಪಟಾಕಿ ತಯಾರಿಸುವ ವೇಳೆ ಮನೆಯಲ್ಲಿ ಸ್ಫೋಟ ಸಂಭವಿಸಿ ಮಗು ಸೇರಿ 7 ಮಂದಿ ಸಾವನ್ನಪ್ಪಿದ ಭೀಕರ ಘಟನೆ ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ನಡೆದಿದೆ. ಪಟಾಕಿ ತಯಾರಿಸುವಾಗ ಪಟಾಕಿ ಮನೆಯಲ್ಲಿ ಸ್ಫೋಟಗೊಂಡಿದೆ. ಈ ಸ್ಫೋಟ ಸಂಭವಿಸಿದ ಮನೆ ಸಂಪೂರ್ಣ ನೆಲಕಚ್ಚಿದೆ. ಈ ವೇಳೆ ಮನೆಯಲ್ಲಿದ್ದ ಮಗು ಸೇರಿದಂತೆ 7 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಸ್ಫೋಟದ ಶಬ್ದವು ನಗರದಲ್ಲಿ ಕಿಲೋಮೀಟರ್ ವರೆಗೂ ಕೇಳಿ ಬಂದಿದೆ. ಇದರಿಂದ ಅಲ್ಲಿಯೇ ಸುತ್ತಲಿನ ಜಮೀನು ಅಲ್ಲೋಲಕಲ್ಲೋಲವಾಗಿ 2-3 ಮನೆಗಳಿಗೂ ಹಾನಿಯಾಗಿದೆ. ಸ್ಫೋಟದ ಸುದ್ದಿ ತಿಳಿಯುತ್ತಿದ್ದಂತೆ ಡಿಐಡಿ ಮತ್ತು ಎಸ್‌ಎಸ್‌ಪಿ ಜೊತೆಗೆ ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆ ಸ್ಥಳಕ್ಕೆ ಆಗಮಿಸಿ ರಕ್ಷಣಾ ಮತ್ತು ಪರಿಹಾರ ಕಾರ್ಯವನ್ನು ಪ್ರಾರಂಭಿಸಿದೆ.

ಭಾಗಲ್‌ಪುರದ ತಾತರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಜ್ವಾಲಿಚಕ್ ಯತಿಂಖಾನಾ ಬಳಿ ಈ ಸ್ಫೋಟ ಸಂಭವಿಸಿದೆ. ಮಾರ್ಚ್ 03 ರ ಗುರುವಾರ ರಾತ್ರಿ ಜನರು ಮಲಗಲು ತಯಾರಿ ನಡೆಸುತ್ತಿದ್ದಾಗ ಭಾಗಲ್ಪುರದ ನಗರ ಪ್ರದೇಶದಲ್ಲಿ ಭಾರಿ ಸ್ಫೋಟ ಸಂಭವಿಸಿತು. ಸ್ಪೋಟದ ತೀವ್ರತೆಗೆ ಜನರು ಭಯಭೀತರಾದರು. ಸ್ಫೋಟದ ತೀವ್ರತೆಗೆ ಕಟ್ಟಡವು ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಇದಿಷ್ಟೇ ಅಲ್ಲ ಸುತ್ತಮುತ್ತಲಿನ ಇನ್ನೂ ಎರಡು ಮನೆಗಳು ನೆಲಕಚ್ಚಿವೆ. ಸ್ಫೋಟದ ರಭಸಕ್ಕೆ ಅಕ್ಕಪಕ್ಕದ ಮನೆಗಳಲ್ಲಿ ಮಲಗಿದ್ದವರಿಗೂ ಗಾಯಗಳಾಗಿವೆ. ನಾಶವಾದ ಮನೆಯ ತುಣುಕುಗಳು ಸಹ 250 ಮೀಟರ್‌ಗೂ ಹೆಚ್ಚು ದೂರ ಹಾರಿ ಬಿದ್ದಿವೆ.

ಮನೆಯಲ್ಲಿ ಸ್ಫೋಟದ ಬಗ್ಗೆ ಮಾಹಿತಿ ಪಡೆದ ತಾತರ್‌ಪುರ ಪೊಲೀಸ್ ಠಾಣೆ ಸೇರಿದಂತೆ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಕೂಡಲೇ ಅಧಿಕಾರಿಗಳು ಜೆಸಿಬಿ ಸಹಾಯದಿಂದ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಆರಂಭಿಸಿದ್ದು, ಅವಶೇಷಗಳಡಿ ಸಿಲುಕಿದ್ದ ಜನರನ್ನು ಹೊರತೆಗೆಯಲಾಯಿತು. ಈ ಕುರಿತು ಮಾಹಿತಿ ನೀಡಿದ ಭಾಗಲ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಬ್ರತಾ ಕುಮಾರ್ ಸೇನ್, ಈ ಅಪಘಾತದಲ್ಲಿ ಇದುವರೆಗೆ 7 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕ ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗುತ್ತಿದೆ. ಈ ಘಟನೆಯಿಂದ 2-3 ಮನೆಗಳಿಗೆ ಹಾನಿಯಾಗಿದೆ. ಪ್ರಾಥಮಿಕ ಹಂತದಲ್ಲಿ ಇಡೀ ಕುಟುಂಬ ಪಟಾಕಿ ತಯಾರಿಸುತ್ತಿದ್ದುದು ಪತ್ತೆಯಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಡಿಎಂ ತಿಳಿಸಿದ್ದಾರೆ.

Explosion in the house while making firecrackers, 7 people including a child lost their lives

ಸ್ಪೋಟದ ಶಬ್ದ ಇಡೀ ಪ್ರದೇಶವನ್ನು ಎರಡು ಕಿಲೋಮೀಟರ್‌ಗಳವರೆಗೆ ಅಲುಗಾಡಿಸಿದೆ. ಸ್ಪೋಟದ ಶಬ್ದವು 4 ಕಿಲೋಮೀಟರ್‌ಗಳವರೆಗೆ ಕೇಳಿಬಂತು ಸ್ಥಳೀಯರು ಹೇಳಿಕೊಮಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಸ್ಥಳೀಯ ನಿವಾಸಿ ಗಣೇಶ್ ಮಂಡಲ್ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ ಆದರೆ ಅವರ ಮಗಳು ಪಿಂಕಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಿಂಕಿ ಅವರು ಕೋಲ್ಕತ್ತಾದಿಂದ ಆಗಷ್ಟೇ ರಾತ್ರಿ 9 ಗಂಟೆಗೆ ಬಂದಿದ್ದರು. ಎಲ್ಲರೂ ಊಟ ಮಾಡಿ ವಿಶ್ರಾಂತಿ ಪಡೆಯಬೇಕಿತ್ತು. ಈ ವೇಳೆ ಮನೆಯಿಂದ ಇದ್ದಕ್ಕಿದ್ದಂತೆ ದೊಡ್ಡ ಶಬ್ದವಾಯಿತು ಮತ್ತು ಇಡೀ ಮನೆ ಕುಸಿದು ಬಿದ್ದಿರುವುದನ್ನು ಸ್ಥಳೀಯರು ಕಂಡಿದ್ದಾರೆ.

ಗಾಯಗೊಂಡವರು ಹತ್ತಿರ ಆಸ್ಪತ್ರೆಯಲ್ಲಿ ಸ್ಥಲಾಂತರಿಸಲಾಗಿದೆ. ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಕ್ಕಪಕ್ಕದ ಮನೆಗಳು ಹಾನಿಗೊಳಗೊಳಗಾಗಿದ್ದು ಜನ ಆತಂಕಗೊಂಡಿದ್ದಾರೆ. ಅಷ್ಟಕ್ಕು ಸ್ಪೋಟಗೊಂಡ ಮನೆಯಲ್ಲಿ ಪಟಾಕಿ ತಯಾರಿಸಲಾಗುತ್ತಿತ್ತು ಎಂಬ ಮಾಹಿತಿ ಸ್ಥಳೀಯರಿಗೆ ಇರಲಿಲ್ಲ ಎಂದು ಹೇಳಿದ್ದಾರೆ. ಮನೆಯಲ್ಲಿ ಪಟಾಕಿ ತಯಾರಿಸಲು ಯಾರೂ ಕೂಡ ಅನುಮತಿಸುವುದಿಲ್ಲ. ಹೀಗಾಗಿ ಪಟಾಕಿ ತಯಾರಿ ವಿಚಾರ ಮನೆಯವರು ಗುಪ್ತವಾಗಿ ಇಟ್ಟಿದ್ದರು ಎನ್ನಲಾಗುತ್ತಿದೆ. ಈ ಬಗ್ಗೆ ತಿಳಿದರೆ ಸ್ಥಳೀಯ ಜನರು ಕೂಡ ಇದಕ್ಕೆ ಅವಕಾಶವನ್ನು ನೀಡುತ್ತಿರಲಿಲ್ಲ ಎಂದು ಸ್ಪೋಟದ ಬಳಿಕ ಸ್ಥಳೀಯರು ಹೇಳಿಕೊಂಡಿದ್ದಾರೆ.

English summary
Painful news has come out from Bhagalpur district of Bihar. Here a house exploded while making firecrackers. The house where this explosion took place was completely grounded. So at the same time, 7 people including a child died in this accident and many people were injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X