ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ನಿಗೂಢ ಜ್ವರ ಮೃತ ಮಕ್ಕಳ ಸಂಖ್ಯೆ 244ಕ್ಕೆ ಏರಿಕೆ

|
Google Oneindia Kannada News

ಮುಜಾಫರ್‌ಪುರ್, ಜೂನ್ 25: ಬಿಹಾರದ ಜನತೆ ಬಳಲುತ್ತಿರುವ ನಿಗೂಢ ಮೆದುಳು ಜ್ವರಕ್ಕೆ ಇದುವರೆಗೆ 244 ಮಕ್ಕಳು ಮೃತಪಟ್ಟಿದ್ದಾರೆ.

ಅಕ್ಯೂಟ್ ಎನ್ಸೆಪಾಲಿಟೀಸ್ ಸಿಂಡ್ರೋಮ್‌ಗೆ ಈ ರೋಗವು ಅತಿ ಹೆಚ್ಚು ಬಿಸಿಲಿನಿಂದ ಕೂಡ ಬರುವಂಥದ್ದಾಗಿದೆ. ಬಿಹಾರದಲ್ಲಿ ಬಿಸಿ ಗಾಳಿಗೆ ಸತ್ತವರ ಸಂಖ್ಯೆ 61ಕ್ಕೇರಿದೆ. ಬಿಸಿಲು ಕೂಡ ಅನೇಕ ರೋಗಗಳನ್ನು ಹೊತ್ತು ತರುತ್ತಿದೆ. ಇದಕ್ಕೆ ಬಿಹಾರಿಗಳು 'ಚಮ್ಕಿ' ಎಂದು ಕರೆಯುತ್ತಾರೆ.

ಬಿಹಾರದಲ್ಲಿ ನಿಗೂಢ ಕಾಯಿಲೆಗೆ ಮೃತರಾದವರ ಸಂಖ್ಯೆ 165 ಕ್ಕೆ ಏರಿಕೆ ಬಿಹಾರದಲ್ಲಿ ನಿಗೂಢ ಕಾಯಿಲೆಗೆ ಮೃತರಾದವರ ಸಂಖ್ಯೆ 165 ಕ್ಕೆ ಏರಿಕೆ

1-10 ವರ್ಷದೊಳಗಿನ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಮಳೆಗಾಲ ಆರಂಭವಾಗುವವರೆಗೂ ಈ ರೋಗ ಕಡಿಮೆಯಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ನಾಲ್ಕು ಲಕ್ಷ ರೂ ಸಹಾಯಧನ ನೀಡುವುದಾಗಿ ಸಚಿವರು ತಿಳಿಸಿದ್ದಾರೆ.

Due to AES children death toll rieses to 244

ಮುಜಾಫರ್‌ಪುರದಲ್ಲಿ 131 ಮಂದಿ, ಎಸ್‌ಕೆಎಂಸಿಎಚ್‌ನಲ್ಲಿ 111, ಕೇಜ್ರಿವಾಲ್ ಆಸ್ಪತ್ರೆಯಲ್ಲಿ 20 ಮಕ್ಕಳು ಮೃತಪಟ್ಟಿದ್ದಾರೆ. ಹೆಚ್ಚಿನ ತಾಪಮಾನವೇ ಈ ರೋಗಕ್ಕೆ ಕಾರಣವಾಗಿದೆ. ಹಾಗಾಗಿ ಮುಂಗಾರು ಪ್ರವೇಶವಾಗುವವರೆಗೂ ಮಕ್ಕಳನ್ನು ಮನೆಯಿಂದ ಹೊರಗಡೆ ಕಳುಹಿಸದಿದ್ದರೆ ಒಳಿತು. ಇದೀಗ ಈ ರೋಗ ಛತ್ತೀಸ್‌ಗಢಕ್ಕೂ ಕಾಲಿಟ್ಟಿದೆ. ಶುಕ್ರವಾರ ಛತ್ತೀಸ್‌ಗಢದಲ್ಲಿ ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಒಂದು ಮಗುವಿನ ಸ್ಥಿತಿ ಗಂಭೀರವಾಗಿದೆ.

ನಿಗೂಢ ಜ್ವರದಿಂದ ಬೆಂಗಳೂರಲ್ಲಿ 3.5 ಲಕ್ಷ ಜನ ಬಳಲುತ್ತಿದ್ದಾರೆ, ಏನದು? ನಿಗೂಢ ಜ್ವರದಿಂದ ಬೆಂಗಳೂರಲ್ಲಿ 3.5 ಲಕ್ಷ ಜನ ಬಳಲುತ್ತಿದ್ದಾರೆ, ಏನದು?

ಛತ್ತೀಸ್‌ಗಢದ ಜಗ್ದಲ್‌ಪುರ ಜಿಲ್ಲೆಯಲ್ಲಿ ಮೆದುಳು ಜ್ವರ ಕಾಣಿಸಿಕೊಂಡಿದೆ. ನಾಲ್ಕು ಮತ್ತು ಏಳು ವರ್ಷದ ಮೂರು ಮಕ್ಕಳು ಮೆದುಳು ಜ್ವರದಿಂದ ಬಳಲುತ್ತಿದ್ದಾರೆ.

English summary
The death toll due to Acute Encephalitis Syndrome (AES) rises to 131 in Muzaffarpur. 111 deaths in SKMCH and 20 in Kejriwal Hospital in Bihar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X