ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದ ಸರಕಾರಿ ಆಸ್ಪತ್ರೆ ಹಾಸಿಗೆ ಮೇಲೆ ಮಲಗ್ತವೆ ನಾಯಿಗಳು, ದೂರಿತ್ತರು ರೋಗಿಗಳು

|
Google Oneindia Kannada News

ಸರಕಾರಿ ಆಸ್ಪತ್ರೆ ಹಾಸಿಗೆಗಳ ಮೇಲೆ ನಾಯಿಗಳು ಮಲಗ್ತವೆ: ಬಿಹಪಾಟ್ನಾ (ಬಿಹಾರ), ಜನವರಿ 17: ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ, ಇಂಥಿಂಥ ವ್ಯವಸ್ಥೆಗಳಿಲ್ಲ, ಅದಿಲ್ಲ-ಇದಿಲ್ಲ ಎಂದು ದೂರು ಹೇಳಿಕೊಳ್ಳುವುದನ್ನು ನೀವು ನೋಡಿರಬಹುದು ಹಾಗೂ ಕೇಳಿರಬಹುದು. ಆದರೆ ಬಿಹಾರದ ನಾವಡದ ಸರಕಾರಿ ಆಸ್ಪತ್ರೆಯೊಂದರಲ್ಲಿ ರೋಗಿಗಳ ದೂರು ವಿಭಿನ್ನವಾಗಿದೆ. ರೋಗಿಗಳಿಗೆ ಅಂತ ಇರುವ ಹಾಸಿಗೆ ಮೇಲೆ ನಾಯಿಗಳು ಬಂದು ಮಲಗುತ್ತವೆ ಎಂದು ಅಲವತ್ತುಕೊಂಡಿದ್ದಾರೆ.

ಆಸ್ಪತ್ರೆಯಲ್ಲಿ ಮಂಚದ ಮೇಲೆ ಪವಡಿಸುವ ನಾಯಿಗಳು, ಬೆಡ್ ಶೀಟ್ ನ ಕೂಡ ಬಳಸುತ್ತವೆ ಎಂಬುದು ಸಾರ್ವಜನಿಕರ ಆಕ್ಷೇಪ. ಆಸ್ಪತ್ರೆಯ ಅಧಿಕಾರಿಗಳು ನಮಗೆ ಬೆಡ್ ಶೀಟ್ ನೀಡುವುದಕ್ಕೆ ನಿರಾಕರಿಸುತ್ತಾರೆ. ಆದರೆ ನಾಯಿಗಳು ಅದೇ ಬೆಡ್ ಶೀಟ್ ಗಳಿಂದ ಬೆಚ್ಚಗೆ ಇರುತ್ತವೆ ಎಂದು ದೂರು ಹೇಳಿಕೊಂಡಿದ್ದಾರೆ ರೋಗಿಗಳು.

Dogs sleep on government hospital beds in Bihar, patients complain

ಇದಕ್ಕೆ ಯಾರು ಕಾರಣರೋ ಅವರನ್ನು ಕಂಡು ಹಿಡಿಯುತ್ತೇವೆ ಎಂದು ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ. ಇದು ಹೇಗೆ ಆಗುತ್ತದೆ ಹಾಗೂ ಯಾರು ಇದಕ್ಕೆ ಕಾರಣರು ಎಂಬುದನ್ನು ಕಂಡು ಹಿಡಿಯುತ್ತೇವೆ ಎಂದು ಈ ಸರಕಾರಿ ಆಸ್ಪತ್ರೆಯ ಉಸ್ತುವಾರಿಗಳ ಪೈಕಿ ಒಬ್ಬರಾದ ಉಮೇಶ್ ಚಂದ್ರ ಹೇಳಿದ್ದಾರೆ.

Dogs sleep on government hospital beds in Bihar, patients complain

ಕಳೆದ್ ವರ್ಷ ಜುಲೈನಲ್ಲಿ ನಳಂದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆಗಿದ್ದ ಅನಾಹುತವನ್ನು ಒಮ್ಮೆ ಸ್ಮರಿಸಬೇಕಿದೆ. ಆ ಆಸ್ಪತ್ರೆಯು ಪಾಟ್ನಾದಲ್ಲಿರುವ ಎರಡನೇ ಅತಿ ದೊಡ್ಡ ಸರಕಾರಿ ಆಸ್ಪತ್ರೆ. ಭಾರೀ ಮಳೆ ಬಂದ ಪರಿಣಾಮ ಆಸ್ಪತ್ರೆ ಒಳಗೆ ನೀರು ನುಗ್ಗಿತ್ತು. ಐಸಿಯು ಒಳಗೆಲ್ಲ ನೀರು ತುಂಬಿಕೊಂಡು, ಮೀನುಗಳು ಈಜಾಡುವುದು ಕಂಡುಬಂದಿತ್ತು.

ಬಿಹಾರದಲ್ಲಿ ಜೆಡಿಯು ಹಾಗೂ ಬಿಜೆಪಿ ನೇತೃತ್ವದ ಮೈತ್ರಿ ಸರಕಾರ ಅಧಿಕಾರದಲ್ಲಿ ಇದ್ದು, ಜೆಡಿಯುನ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿ ಆಗಿದ್ದಾರೆ.

ರದಲ್ಲಿ ಹೀಗೂ ದೂರು

English summary
One of the government hospitals in Bihar's Nawada has dogs lazing around on the beds meant for patients. The patients complain that they do not get hospital beds as dogs occupy them and also use the bedsheets. "The hospital authorities refuse to give us bedsheets. These dogs enjoy the comfort of bedsheets," a patient told news agency ANI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X