ಅಪ್ಪನನ್ನು ಕೂರಿಸಿ 1200 ಕಿ.ಮಿ ಸೈಕಲ್ ತುಳಿದ ಯುವತಿಗೆ ಭರ್ಜರಿ ಆಫರ್
ಪಾಟ್ನಾ, ಮೇ 23: ಕೊರೊನಾ ವೈರಸ್ ಲಾಕ್ಡೌನ್ ನಡುವೆ ಅಪ್ಪನನ್ನು ಕೂರಿಸಿಕೊಂಡು ಸುಮಾರು 1200 ಕಿ.ಮೀ ಸೈಕಲ್ ತುಳಿದಿರುವ ಯುವತಿಗೆ ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಆಫರ್ ನೀಡಿದೆ.
Recommended Video
8ನೇ ತರಗತಿ ಓದುತ್ತಿರುವ 15 ವರ್ಷದ ಬಾಲಕಿ ಲಾಕ್ಡೌನ್ ಕಾರಣದಿಂದ ದೆಹಲಿಯಲ್ಲಿ ಸಿಲುಕಿಕೊಂಡಿದ್ದ ತಂದೆಯ ಜೊತೆ ಬಿಹಾರ್ದ ದರ್ಬಂಗನಲ್ಲಿರುವ ತಮ್ಮ ಸ್ಥಳೀಯ ಸ್ಥಳಕ್ಕೆ ಸೈಕಲ್ನಲ್ಲೆ ಪ್ರಯಾಣ ಮಾಡಿದ್ದಾರೆ. ಸುಮಾರು ಏಳು ದಿನಗಳ ಕಾಲ ಸೈಕಲ್ನಲ್ಲಿ ತಂದೆ-ಮಗಳು ಪ್ರಯಾಣ ಮಾಡಿದ್ದಾರೆ.
Bihar: Jyoti,who cycled around 1200 km carrying her injured father from Gurugram to their native place in Darbhanga,amid #COVID lockdown,has been offered trial by Cycling Federation of India. She says,"I'm very happy that I got offer,will go to Delhi for trial next month".(22.05) pic.twitter.com/qNf41Zsf03
— ANI (@ANI) May 23, 2020
ಯುವತಿಯ ಸಾಹಸ ಗಮನಿಸಿದ ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಟ್ರಯಲ್ಸ್ ಗೆ ಬರುವಂತೆ ಸೂಚನೆ ನೀಡಿದೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ಜ್ಯೋತಿ ''ಇದು ನಿಜಕ್ಕೂ ಖುಷಿ ಕೊಟ್ಟಿದೆ, ಮುಂದಿನ ತಿಂಗಳು ದೆಹಲಿಯಲ್ಲಿ ಟ್ರಯಲ್ಸ್ ಗೆ ಭಾಗಿಯಾಗಲಿದ್ದೇನೆ'' ಎಂದು ಪಿಟಿಐಗೆ ತಿಳಿಸಿದ್ದಾರೆ.
ಕೊರೊನಾದಿಂದ 66 ವರ್ಷದ ಕ್ಯಾನ್ಸರ್ ರೋಗಿ ಚೇತರಿಕೆ, ವೈದ್ಯರು ಸಂತಸ
ಒಂದು ವೇಳೆ ಜ್ಯೋತಿ ಸೈಕ್ಲಿಂಗ್ ಟ್ರಯಲ್ಸ್ ಪಾಸ್ ಮಾಡಿದರೆ, ದೆಹಲಿಯ ಇಂದಿರಾ ಗಾಂಧಿ ಇಂಡೋರ್ ಸ್ಟೇಡಿಯಂನಲ್ಲಿರುವ 'ಸ್ಟೇಟ್ ಆಫ್ ದ ಆರ್ಟ್ ನ್ಯಾಷನಲ್' ಸೈಕ್ಲಿಂಗ್ ಅಕಾಡೆಮಿಯಲ್ಲಿ ಅಭ್ಯಾಸಕ್ಕೆ ಆಯ್ಕೆಯಾಗಲಿದ್ದಾಳೆ ಎಂದು ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಮುಖ್ಯಸ್ಥ ಓಂಕಾರ್ ಸಿಂಗ್ ತಿಳಿಸಿದ್ದಾರೆ.
ಬಿಹಾರ ಮೂಲದ ಜ್ಯೋತಿ, ತಂದೆಯ ಜೊತೆ ದೆಹಲಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದರು. ಲಾಕ್ಡೌನ್ ಆದ ಬಳಿಕ ಜೀವನ ಸಾಗಿಸುವುದು ತೀರಾ ಕಷ್ಟವಾಗಿದೆ. ಜ್ಯೋತಿ ತಂದೆಗೆ ಕಾಲಿಗೆ ಗಾಯವಾಗಿದ್ದು, ನಡೆಯಲು ಕಷ್ಟವಾಗಿತ್ತು. ಹಾಗಾಗಿ, ಸ್ವಗ್ರಾಮಕ್ಕೆ ಹೋಗಲು ನಿರ್ಧರಿಸಿ ಸೈಕಲ್ ಪಡೆದು, ರಾತ್ರಿ-ಹಗಲು ಪ್ರಯಾಣ ಮಾಡಿದ್ದಾರೆ.