• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸ್ಟ್ರೆಚರ್ ಇಲ್ಲ; ಬೈಕ್‌ನಲ್ಲೇ ವಾರ್ಡ್‌ವರೆಗೆ ರೋಗಿ ಕರೆತಂದ ಯುವಕರು

|
Google Oneindia Kannada News

ಪಾಟ್ನಾ, ಏಪ್ರಿಲ್ 27: ದೇಶದಲ್ಲಿ ಕೊರೊನಾ ಎರಡನೇ ಆರ್ಭಟ ಮುಂದುವರೆದಿದ್ದು, ಆಮ್ಲಜನಕಕ್ಕಾಗಿ ಎಷ್ಟೋ ಮಂದಿ ಹಾತೊರೆಯುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳು ಸಿಕ್ಕರೆ ಸಾಕು ಎಂದು ಜೀವ ಕೈಯಲ್ಲಿ ಹಿಡಿದು ಕಾಯುತ್ತಿದ್ದಾರೆ. ಎಷ್ಟೋ ಆಸ್ಪತ್ರೆಗಳಲ್ಲಿ ಔಷಧ, ಲಸಿಕೆಗಳ ಅಭಾವವೂ ಎದುರಾಗಿದೆ. ಆದರೆ ಜಾರ್ಖಂಡ್‌ನ ಈ ಆಸ್ಪತ್ರೆಯಲ್ಲಿ ಸ್ಟ್ರೆಚರ್ ಗೂ ಅಭಾವ ಉಂಟಾಗಿದೆ.

ಸ್ಟ್ರೆಚರ್ ಇಲ್ಲದ ಕಾರಣ ವಾರ್ಡ್‌ವರೆಗೂ ಬೈಕ್‌ನಲ್ಲಿಯೇ ರೋಗಿಯನ್ನು ಕರೆತಂದ ಸಂಗತಿ ನಡೆದಿದೆ. ಜಾರ್ಖಂಡ್‌ನ ಪಲಮು ಮೆದಿನಿರೈ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಇಂಥ ದಾರುಣ ಪರಿಸ್ಥಿತಿ ಕಂಡುಬಂದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಡಿಯೋ: ಮಹಿಳಾ ಪೊಲೀಸ್‌ಗೆ ಮಾಸ್ಕ್ ಸರಿ ಹಾಕುವಂತೆ ಸೂಚಿಸಿದ ವೃದ್ಧೆವಿಡಿಯೋ: ಮಹಿಳಾ ಪೊಲೀಸ್‌ಗೆ ಮಾಸ್ಕ್ ಸರಿ ಹಾಕುವಂತೆ ಸೂಚಿಸಿದ ವೃದ್ಧೆ

ಕಳೆದ ಕೆಲವು ದಿನಗಳಿಂದ ಆಸ್ಪತ್ರೆಗೆ ದಾಖಲಾಗುವ ಕೊರೊನಾ ರೋಗಿಗಳ ಸಂಖ್ಯೆ ಮಿತಿ ಮೀರಿದ್ದು, ವೈದ್ಯಕೀಯ ಸೌಲಭ್ಯಗಳಲ್ಲಿ ಅಭಾವ ಎದುರಾಗಿದೆ.

Covid Patient Biked Out Of Ward Due To Stretcher Shortage In Hospital Viral

ವಿಡಿಯೋದಲ್ಲಿ ವಯಸ್ಸಾದ ರೋಗಿಯೊಬ್ಬರನ್ನು ಮೂರು ಯುವಕರು ಬೈಕ್‌ನಲ್ಲಿ ತಮ್ಮ ಮಧ್ಯೆ ಕೂರಿಸಿಕೊಂಡು ಆಸ್ಪತ್ರೆ ವಾರ್ಡ್‌ಗೆ ಸಾಗಿಸಿದ್ದಾರೆ. ವೈದ್ಯರು ಇವರನ್ನು ಡಿಸ್ಚಾರ್ಜ್ ಮಾಡಿದ್ದರಾ ಅಥವಾ ಬೇರೆ ಆಸ್ಪತ್ರೆಯಿಂದ ಇಲ್ಲಿಗೆ ಕರೆತರಲಾಗಿತ್ತಾ ಎಂಬುದರ ಕುರಿತು ಸ್ಪಷ್ಟತೆ ದೊರೆತಿಲ್ಲ.

ಪಲಮು ಮೆದಿನಿರೈ ವೈದ್ಯಕೀಯ ಆಸ್ಪತ್ರೆ ಈ ಪ್ರದೇಶದ ಪ್ರಮುಖ ಆಸ್ಪತ್ರೆ ಎನಿಸಿದ್ದು, ಇಲ್ಲಿಯೇ ಈ ಅವ್ಯವಸ್ಥೆ ಇರುವುದರ ಕುರಿತು ಪ್ರಶ್ನೆಗಳು ಎದ್ದಿವೆ.

English summary
Covid Patient Biked Out Of Ward due to stretcher shortage in patna hospital,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X