ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌ ಸಾವಿನ ಸಂಖ್ಯೆಯಲ್ಲಿ ವ್ಯತ್ಯಾಸ - ಬಿಹಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪಾಟ್ನಾ ಹೈಕೋರ್ಟ್

|
Google Oneindia Kannada News

ಪಾಟ್ನಾ, ಮೇ 20: ಬಿಹಾರದ ಬಕ್ಸಾರ್ ಜಿಲ್ಲೆಯಲ್ಲಿ ಗಂಗಾ ತೀರದಲ್ಲಿ ಶವಗಳ ತೇಲಿ ಬಂದ ಬೆನ್ನಲ್ಲೇ ಸರ್ಕಾರದ ಸಂಸ್ಥೆಗಳು ಪ್ರಕಟಿಸಿದ ಕೊರೊನಾ ಸಂಖ್ಯೆಯಲ್ಲಿನ ವ್ಯತ್ಯಾಸವಿದೆ ಎಂದು ಬಿಹಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಪಾಟ್ನಾ ಹೈಕೋರ್ಟ್, ಎರಡು ದಿನಗಳಲ್ಲಿ ಹೊಸ ವರದಿ ಸಲ್ಲಿಸಲು ನ್ಯಾಯಾಧೀಶರು ಪ್ರಧಾನ ಆರೋಗ್ಯ ಕಾರ್ಯದರ್ಶಿಗೆ ಆದೇಶ ನೀಡಿದೆ.

ಕಳೆದ ವಾರ ಬಕ್ಸಾರ್​ನಲ್ಲಿ 70ಕ್ಕಿಂತಲೂ ಹೆಚ್ಚು ಮೃತದೇಹಗಳು ನದಿಯಲ್ಲಿ ತೇಲಿ ಬಂದಿತ್ತು. ಇದರ ಬೆನ್ನಲ್ಲೇ ಹೈಕೋರ್ಟ್ ಈ ಆದೇಶ ನೀಡಿದೆ.

ಬಿಹಾರ ಕೊರೊನಾ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿರುವ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನು ಒಳಗೊಂಡ ನ್ಯಾಯಪೀಠವು, ನಾವು ಅಫಿಡವಿಟ್ ಸಲ್ಲಿಸುವ ವಿಧಾನದ ಬಗ್ಗೆ ಆತಂಕಕ್ಕೆ ಒಳಗಾಗಿದ್ದೇವೆ ಎಂದು ಹೇಳಿದೆ.

Coronavirus - Patna High Court Slams Bihar government on Glaring Discrepancy In Covid Death Numbers

ರಾಜ್ಯದ ಮುಖ್ಯ ಕಾರ್ಯದರ್ಶಿ ತ್ರಿಪುರಾರಿ ಶರಣ್ ಮತ್ತು ಪಾಟ್ನಾ ವಿಭಾಗೀಯ ಆಯುಕ್ತರು ಕೊವಿಡ್ ಸಾವುಗಳ ಬಗ್ಗೆ ಸಲ್ಲಿಸಿದ್ದ ಅಫಿಡವಿಟ್​ನಲ್ಲಿ ಮಾರ್ಚ್ 1 ರಿಂದ ಬಕ್ಸಾರ್‌ನಲ್ಲಿ ಕೇವಲ ಎಂಟು ಸಾವುಗಳು ಸಂಭವಿಸಿವೆ. ಆದರೆ ವಿಭಾಗೀಯ ಆಯುಕ್ತರ ಅಧಿಕೃತ ಹೇಳಿಕೆಯ ಪ್ರಕಾರ ಮೇ 5 ಮತ್ತು ಮೇ 14 ರ ನಡುವೆ ಬಕ್ಸಾರ್‌ನ ಚಾರ್ಧಾಮ್ ಘಾಟ್‌ನಲ್ಲಿ 789 ಶವಸಂಸ್ಕಾರ ನಡೆದಿದೆ. ಏತನ್ಮಧ್ಯೆ ಕಳೆದ ವಾರ ಬಕ್ಸಾರ್​ನಲ್ಲಿ 70ಕ್ಕಿಂತಲೂ ಹೆಚ್ಚು ಮೃತದೇಹಗಳು ನದಿಯಲ್ಲಿ ತೇಲಿ ಬಂದಿದೆ.

ಕೊರೊನಾ ಸಾವಿನ ಬಗ್ಗೆ ಸರ್ಕಾರ ಸರಿಯಾದ ದಾಖಲೆ ನೀಡಬೇಕು. ಸರ್ಕಾರ ಎಷ್ಟು ಸಾವುಗಳು ಸಂಭವಿಸಿವೆ ಎಂದು ದಾಖಲೆಗಳ ಮೂಲಕ ಸ್ಪಷ್ಟಪಡಿಸಿಲ್ಲ. ಕೋವಿಡ್‌ ಸಾವಿನ ಸಂಖ್ಯೆಯಲ್ಲಿ ವ್ಯತ್ಯಾಸದ ಹಿನ್ನೆಲೆ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಇನ್ನು ಬಕ್ಸಾರ್‌ನಲ್ಲಿ ಸುಮಾರು 17 ಲಕ್ಷ ಜನಸಂಖ್ಯೆಯಿದ್ದು 10 ದಿನಗಳಲ್ಲಿ ಒಂದು ಶವಾಗಾರದಲ್ಲೇ 789 ಮೃತದೇಹಗಳ ಅಂತ್ಯಸಂಸ್ಕಾರ ನಡೆದಿದೆ. ಹೀಗಿರುವಾಗ ಇಡೀ ಜಿಲ್ಲೆಯ ಪರಿಸ್ಥಿತಿ ಏನು ಎಂದು ಹೈಕೋರ್ಟ್ ಸರ್ಕಾರವನ್ನು ಪ್ರಶ್ನಿಸಿದೆ.

English summary
Patna High Court Slams Bihar government on Glaring Discrepancies In Covid Death Numbers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X