ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ತಪ್ಪಿನಿಂದ ಅರಳುತ್ತಾ ಕಮಲ?

|
Google Oneindia Kannada News

ಪಾಟ್ನಾ, ಆಕ್ಟೋಬರ್.07: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ಮೈತ್ರಿಕೂಟವು ಗೆಲುವಿನಮಂತ್ರ ಜಪಿಸುತ್ತಿದೆ. ಇನ್ನೊಂದು ತಿಂಗಳಿನಲ್ಲೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ರಾಜಕೀಯ ಭವಿಷ್ಯದ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ರಾಜಕೀಯ ರಾಜಧಾನಿ ಇದೀಗ ಖಾಲಿ ಖಾಲಿಯಾಗಿದೆ. ಬಿಜೆಪಿ ಈ ಪ್ರದೇಶದ ಮೇಲೆ ಸ್ವಾಭಾವಿಕವಾಗಿ ಹಿಡಿತ ಸಾಧಿಸಿದಂತೆ ತೋರುತ್ತಿದೆ. ಜೆಡಿಯುಗಿಂತ ಬಿಜೆಪಿಗೆ ಹೆಚ್ಚು ಬೆಂಬಲ ವ್ಯಕ್ತವಾಗುವ ನಿರೀಕ್ಷೆಗಳು ಹುಟ್ಟಿಕೊಳ್ಳುತ್ತಿವೆ. ಇದಕ್ಕೆ ಕಾರಣವೇನು ಎಂದು ರಾಜಕೀಯ ವಿಮರ್ಶಕರು ತಿಳಿಸಿದ್ದಾರೆ.

ಎನ್ ಡಿಎ ಮೈತ್ರಿ ಕಡಿದುಕೊಳ್ಳಲು ಕಾರಣ ಬಿಚ್ಚಿಟ್ಟ ಚಿರಾಗ್ ಪಾಸ್ವಾನ್ಎನ್ ಡಿಎ ಮೈತ್ರಿ ಕಡಿದುಕೊಳ್ಳಲು ಕಾರಣ ಬಿಚ್ಚಿಟ್ಟ ಚಿರಾಗ್ ಪಾಸ್ವಾನ್

"ಬಿಹಾರದಲ್ಲಿ ಭಾರತೀಯ ಜನತಾ ಪಕ್ಷವು ನಿರಂತರ ಹೋರಾಟದ ಮೂಲಕ ಬೆಳೆಯುತ್ತಿಲ್ಲ. ಬದಲಿಗೆ ಬಿಜೆಪಿ ವಿರುದ್ಧ ಹೋರಾಟಬಲ್ಲ ಮತ್ತೊಂದು ಸಮರ್ಥವಿಲ್ಲದೇ ಜನರು ಬಿಜೆಪಿಯನ್ನು ಒಪ್ಪಿಕೊಳ್ಳುತ್ತಿದ್ದಾರೆ" ಎಂದು ಪಾಟ್ನಾ ಮೂಲದ ಏಷಿಯನ್ ಅಭಿವೃದ್ಧಿ ಸಂಶೋಧನಾ ಸಂಸ್ಥೆಯ ಪ್ರಾಧ್ಯಾಪಕ ಪ್ರಭಾತ್ ಘೋಷ್ ರೆಡಿಫ್.ಕಾಮ್ ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಲಾಲೂ ಅನುಪಸ್ಥಿತಿಯಲ್ಲಿ ಆರ್ ಜೆಡಿಗೆ ಮೊದಲ ಚುನಾವಣೆ

ಲಾಲೂ ಅನುಪಸ್ಥಿತಿಯಲ್ಲಿ ಆರ್ ಜೆಡಿಗೆ ಮೊದಲ ಚುನಾವಣೆ

ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಅನುಪಸ್ಥಿತಿಯಲ್ಲಿ ರಾಷ್ಟ್ರೀಯ ಜನತಾ ದಳ(ಆರ್ ಜೆಡಿ) ಮೊದಲ ಚುನಾವಣೆ ಎದುರಿಸುತ್ತಿದೆ. ರಾಜ್ಯದಲ್ಲಿ ಮುಸ್ಲಿಮರು, ಯಾದವರು ಇಂದಿಗೂ ಆರ್ ಜೆಡಿ ಪರವಾಗಿ ಒಲವು ಹೊಂದಿದ್ದಾರೆ. ಈ ಹಿಂದೆ ತೀರಾ ಕ್ಲಿಷ್ಟಕರ ಪರಿಸ್ಥಿತಿಗಳಲ್ಲೂ ಆರ್ ಜೆಡಿ ಶೇ.20ರಷ್ಟು ಮತಗಳನ್ನು ಪಡೆದುಕೊಂಡಿತ್ತು. ಒಂದು ವೇಳೆ ಆರ್ ಜೆಡಿ ಗೆಲುವು ಸಾಧಿಸಬೇಕಿದ್ದಲ್ಲಿ ಆರ್ ಜೆಡಿ ಹಿನ್ನೆಲೆ ಉಳ್ಳವರ ಜೊತೆಗೆ ಹಿಂದುಳಿದ ವರ್ಗ, ಹಿಂದುಳಿದ ಜಾತಿಗೆ ಸೇರಿದ ಸಮುದಾಯದ ಜನರು ಕೂಡಾ ಕಾಂಗ್ರೆಸ್ ಜೊತೆಗೆ ಕೈ ಜೋಡಿಸಿರುವ ಆರ್ ಜೆಡಿಎ ಮತದ ಮುದ್ರೆ ಒತ್ತಬೇಕು.

ಆರ್ ಜೆಡಿಗೆ ಮೇಲ್ವರ್ಗದ ಜನರ ಮತವೂ ಅತ್ಯಗತ್ಯ

ಆರ್ ಜೆಡಿಗೆ ಮೇಲ್ವರ್ಗದ ಜನರ ಮತವೂ ಅತ್ಯಗತ್ಯ

ಬಿಹಾರದಲ್ಲಿ ಅಧಿಕಾರದ ಕನಸು ನನಸಾಗಬೇಕಿದ್ದಲ್ಲಿ ಕಾಂಗ್ರೆಸ್ ಜೊತೆಗೆ ಕೈ ಜೋಡಿಸಿರುವ ಆರ್ ಜೆಡಿಗೆ ಮೇಲ್ವರ್ಗದ ಜನರ ಮತವೂ ಅಷ್ಟೇ ಅಗತ್ಯವಾಗಿರುತ್ತದೆ. ಇದನ್ನು ನಿರ್ವಹಿಸಿದ್ದಲ್ಲಿ 20-25ರಷ್ಟಿರುವ ಶೇಕಡಾವಾರು ಮತದ ಪ್ರಮಾಣ ಶೇ.30-35ರಷ್ಟಕ್ಕೆ ಏರಿಕೆಯಾಗಲಿದೆ. ಶೇ.40ರಷ್ಟು ಮತಗಳ ಪ್ರಮಾಣ ಹೆಚ್ಚಿದರೂ ಆರ್ ಜೆಡಿ ಪಾಲಿಗೆ ಅಧಿಕಾರ ದಕ್ಕುವುದು ಅಷ್ಟು ಸುಲಭದ ಮಾತಲ್ಲ ಎನ್ನುವುದು ರಾಜಕೀಯ ವಿಮರ್ಶಕರ ವಾದವಾಗಿದೆ.

ಬಿಹಾರ ಚುನಾವಣೆ; ಪ್ರಚಾರಕ್ಕೆ ಈ ನಿಯಮಗಳು ಕಡ್ಡಾಯ!ಬಿಹಾರ ಚುನಾವಣೆ; ಪ್ರಚಾರಕ್ಕೆ ಈ ನಿಯಮಗಳು ಕಡ್ಡಾಯ!

ಲಾಲೂ ಹಿಂತಿರುಗುವ ಭೀತಿಯಲ್ಲಿ ಜೆಡಿಯುಗೆ ವೋಟ್

ಲಾಲೂ ಹಿಂತಿರುಗುವ ಭೀತಿಯಲ್ಲಿ ಜೆಡಿಯುಗೆ ವೋಟ್

ಬಿಹಾರದಲ್ಲಿ ಆರ್ ಜೆಡಿ ಸೋಲಿಗೆ ಮತ್ತು ಜೆಡಿಯು ಗೆಲುವಿಗೆ ಮುಖ್ಯವಾಗಿ ಕಾರಣ ಎನಿಸಿರುವುದೇ ಲಾಲೂ ಪ್ರಸಾದ್ ಯಾದವ್. ಕಳೆದ 2005ರಿಂದ ನಿತೀಶ್ ಕುಮಾರ್ ಬೆಂಬಲಿಸುವ ಮತದಾರರು ಅವರಿಗೆ ಮತ ನೀಡುತ್ತಲೇ ಬಂದಿದ್ದಾರೆ. ಇಲ್ಲದೇ ಹೋದಲ್ಲಿ ಲಾಲೂ ಪ್ರಸಾದ್ ಯಾದವ್ ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂಬ ಭೀತಿ ಅವರನ್ನು ಕಾಡುತ್ತಿತ್ತು. ಮೇಲ್ವರ್ಗದ ಜನರು ಕೂಡಾ ಜೆಡಿಯುಗೆ ಮತ ಹಾಕುವುದಕ್ಕೆ ಲಾಲೂ ಪ್ರಸಾದ್ ಯಾದವ್ ಅಧಿಕಾರಕ್ಕೆ ಹಿಂತಿರುಗುತ್ತಾರೆ ಎನ್ನುವ ಭೀತಿಯೇ ಮುಖ್ಯ ಕಾರಣವಾಗಿತ್ತು.

ಬಿಹಾರದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿದ್ದಲ್ಲಿ ಸಿಎಂ ಬದಲು?

ಬಿಹಾರದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿದ್ದಲ್ಲಿ ಸಿಎಂ ಬದಲು?

ಕಳೆದ 15 ವರ್ಷಗಳಿಂದ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಆಡಳಿತ ನಡೆಸುತ್ತಿದ್ದಾರೆ. ಆಡಳಿತ ವಿರೋಧಿ ಅಲೆಯ ನಡುವೆ ಬಿಜೆಪಿ ಹೆಚ್ಚು ಸ್ಥಾನವನ್ನು ಪಡೆದುಕೊಂಡಲ್ಲಿ ಸಿಎಂ ಸ್ಥಾನ ಬದಲಾಯಿಸುವ ಮಾತುಗಳು ಕೇಳಿ ಬರುತ್ತಿವೆ. ಅಂದುಕೊಂಡಂತೆ ಆದಲ್ಲಿ ಗಿರಿರಾಜ್ ಸಿಂಗ್ ಮತ್ತು ರವಿಶಂಕರ್ ಪ್ರಸಾದ್ ರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ರಾಜಕೀಯ ವಿಮರ್ಶಕರು ಹೇಳುತ್ತಿದ್ದಾರೆ.

ಮುಂದುವರಿದ ಜನಾಂಗ ಅಧಿಕಾರದಿಂದ ದೂರ

ಮುಂದುವರಿದ ಜನಾಂಗ ಅಧಿಕಾರದಿಂದ ದೂರ

ಬಿಹಾರದಲ್ಲಿ ಮುಂದಿನ 20 ರಿಂದ 25 ವರ್ಷಗಳವರೆಗೂ ಮೇಲ್ವರ್ಗದ ಅಭ್ಯರ್ಥಿಯು ಮುಖ್ಯಮಂತ್ರಿ ಸ್ಥಾನಕ್ಕೆ ಏರುವುದಕ್ಕೆ ಸಾಧ್ಯವಿಲ್ಲ ಎಂದೇ ಹೇಳಲಾಗುತ್ತಿದೆ. ಬ್ರಾಹ್ಮಣರು, ಭೂಮಿಹಾರ್ಗಳು, ಕಾಯಸ್ಥರು ಅಥವಾ ರಜಪೂತರು ಹಿಂದೆ ಉಳಿದಿದ್ದಾರೆ. ಬಿಹಾರ ರಾಜಕಾರಣದಲ್ಲಿ ಲಾಲೂ ಪ್ರಸಾದ್ ಯಾದವ್ ಅವರ ಪ್ರಮುಖ ಕೊಡುಗೆಗಳಲ್ಲಿ ಒಂದು ಮುಂದುವರಿದ ಜಾತಿಗಳನ್ನು ಅಧಿಕಾರದಿಂದ ದೂರ ಇಡುವುದು. ಅದಕ್ಕಾಗಿಯೇ ಜೈಲಿನಲ್ಲಿದ್ದಾಗಲೂ ಕೂಡಾ ಲಾಲೂ ಪ್ರಸಾದ್ ಯಾದವ್ ಜನಪ್ರಿಯ ಎನಿಸುತ್ತಾರೆ. ಲಾಲೂ ಪ್ರಸಾದ್ ಯಾದವ್ ಅವರಿಗೆ ಮತ ಚಲಾಯಿಸದ ಜನರು ಕೂಡಾ ರಾಜಕಾರಣದಲ್ಲಿ ಹಿಂದುಳಿದ ಜನರಿಗೆ ಸಾಕಷ್ಟು ಕೊಡುಗೆಯನ್ನು ನೀಡಿರುವ ಬಗ್ಗೆ ಒಪ್ಪಿಕೊಳ್ಳುತ್ತಾರೆ. ಅದನ್ನೇ ಲಾಲೂ ಪ್ರಸಾದ್ ಯಾದವ್ ಅವರ ಸಾಧನೆ ಎಂತಲೂ ಕರೆಯಲಾಗುತ್ತದೆ. ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಮಾತ್ರ ಇಂಥ ಆಡಳಿತವನ್ನು ನೋಡುವುದಕ್ಕೆ ಸಾಧ್ಯವಾಗುತ್ತದೆ.

ಕೆಳಜಾತಿ ಮತಗಳ ಮೇಲೆ ಅಧಿಕಾರ ನಿರ್ಧಾರ

ಕೆಳಜಾತಿ ಮತಗಳ ಮೇಲೆ ಅಧಿಕಾರ ನಿರ್ಧಾರ

ಮಹಾರಾಷ್ಟ್ರದಂತಾ ರಾಜ್ಯಗಳನ್ನು ಉದಾಹರಣೆಯಾಗಿ ತೆಗೆದುಕೊಂಡಾಗ ಶಿವಸೇನೆ, ಕಾಂಗ್ರೆಸ್, ರಾಷ್ಟ್ರೀಯ ಕಾಂಗ್ರೆಸ್ ಪಕ್ಷಗಳು ಒಂದೇ ಆಗಿರುತ್ತವೆ. ಪಶ್ಚಿಮ ಬಂಗಾಳದಲ್ಲೂ ಅಂಥದ್ದೇ ಪರಿಸ್ಥಿತಿಯಿದೆ. ಆದರೆ ಉತ್ತರ ಪ್ರದೇಶ ಮತ್ತು ಬಿಹಾರದಂತಾ ರಾಜ್ಯಗಳಲ್ಲಿ ಕೆಳಜಾತಿ ಮತಗಳೇ ಪ್ರಮುಖ ಪಾತ್ರ ವಹಿಸಲಿವೆ. ಸಮಾಜವಾದಿ, ಬಹುಜನ ಸಮಾಜವಾಧಿ ರಾಷ್ಟ್ರೀಯ ಜನತಾ ದಳ ಪಕ್ಷಗಳು ಅದೆಲ್ಲಕ್ಕಿಂತಲೂ ಭಿನ್ನವಾಗಿವೆ. ಇಲ್ಲಿ ಹಿಂದುಳಿದ ಜನರು ಬಿಜೆಪಿಗೆ ಮತ ಹಾಕುತ್ತಾರೆಯೇ ವಿನಃ ಯಾವುದೇ ಕಾರಣಕ್ಕೂ ಈ ಪಕ್ಷಗಳಿಗೆ ಮತ ಹಾಕುವುದಕ್ಕೆ ಬಯಸುವುದಿಲ್ಲ.

ಆರ್ ಜೆಡಿಯ ತೇಜಸ್ವಿ ಯಾದವ್ ಮಾಡಿರುವ ತಪ್ಪುಗಳೇನು?

ಆರ್ ಜೆಡಿಯ ತೇಜಸ್ವಿ ಯಾದವ್ ಮಾಡಿರುವ ತಪ್ಪುಗಳೇನು?

ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥನಾಗಿ ತೇಜಸ್ವಿ ಯಾದವ್ ಅತಿಹೆಚ್ಚು ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿಯೇ ಗುರುತಿಸಿಕೊಂಡಿದ್ದಾರೆ. ಒಂದೂವರೆ ವರ್ಷಗಳವರೆಗೂ ಉಪ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ. ಈ ಅವಧಿಯಲ್ಲಿನ ಅನುಭವವಿಲ್ಲದ ಆಡಳಿತ, ಜನಪರ ಕಾಳಜಿಯಿಲ್ಲದ ನಡೆಯು ಅವರ ಲೋಪವೆಂದು ಗುರುತಿಸಲಾಗಿದೆ. ಇದರ ಜೊತೆಗೆ ಜೈಲಿಗೆ ಹೋಗಿರುವವರ ಮಗ ಎನ್ನುವುದು ಸಾಕಷ್ಟು ಹಿನ್ನಡೆಯನ್ನು ಉಂಟು ಮಾಡುವ ಸಾಧ್ಯತೆಗಳಿವೆ.

ಬಿಹಾರದಲ್ಲಿ ಹಿಡಿತ ಸಾಧಿಸುತ್ತದೆಯೇ ಬಿಜೆಪಿ?

ಬಿಹಾರದಲ್ಲಿ ಹಿಡಿತ ಸಾಧಿಸುತ್ತದೆಯೇ ಬಿಜೆಪಿ?

ಮುಖ್ಯಮಂತ್ರಿ ನಿತೀಶ್ ಕುಮಾರ್ ಈಗಾಗಲೇ 70 ವರ್ಷದ ಸನ್ನಿಹಿತದಲ್ಲಿದ್ದಾರೆ. ಬಿಹಾರ ರಾಜಕಾರಣದಲ್ಲಿ ನಿತೀಶ್ ಕುಮಾರ್ ಇಲ್ಲದ ಜೆಡಿಯು ಪಕ್ಷವು ಲೆಕ್ಕಕ್ಕೇ ಇಲ್ಲ. ಮುಂದಿನ ತಿಂಗಳಿನ ಚುನಾವಣೆಯಲ್ಲಿ ನಿತೀಶ್ ಕುಮಾರ್ ಹಿನ್ನಡೆ ಅನುಭವಿಸಿದರೆ ಬಿಜೆಪಿ ತನ್ನ ಹಿಡಿತ ಸಾಧಿಸಲಿದೆ. ಬಿಹಾರದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರ ಗಿಟ್ಟಿಸಿಕೊಳ್ಳುವ ಲೆಕ್ಕಾಚಾರವನ್ನು ಹಾಕಿಕೊಳ್ಳುತ್ತಿದೆ. ಏಕೆಂದರೆ ಯಾವುದೇ ಹೋರಾಟವಿಲ್ಲದೇ ಎದುರಿಗೆ ಸಮರ್ಥ ರಾಜಕೀಯ ಪಕ್ಷವಿಲ್ಲದ ಕಡೆಗಳಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಬೆಳೆಸಿಕೊಳ್ಳುತ್ತಿದೆ.

English summary
Congress-Rjd Alliance Can Get Up To 40 Percent Vote; Nitish Kumars Political Capital Is Depleted. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X