ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಪಂಚತಾರಾ ಸಂಸ್ಕೃತಿಯ ಬಟ್ಟೆ ಧರಿಸಿದಂತಲ್ಲ ನೆಲದ ವಾಸ್ತವ ಅರಿಯುವುದು"

|
Google Oneindia Kannada News

ಪಾಟ್ನಾ, ನವೆಂಬರ್.03: ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆ 2ನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಈ ನಡುವೆ ಲೋಕಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ವಿರುದ್ಧ ತೇಜ್ ಪ್ರತಾಪ್ ಯಾದವ್ ಮಾವ ಹಾಗೂ ಜೆಡಿಯು ಅಭ್ಯರ್ಥಿ ಚಂದ್ರಿಕಾ ರೈ ವಾಗ್ದಾಳಿ ನಡೆಸಿದ್ದಾರೆ.

ಪರ್ಸಾ ವಿಧಾನಸಭಾ ಕ್ಷೇತ್ರದ ಜೆಡಿಯು ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಚಂದ್ರಿಕಾ ರೈ ಮಂಗಳವಾರ ಮತದಾನ ಮಾಡಿದರು. ಛಪ್ರಾ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದ ಅವರು, ಪ್ರತಿಪಕ್ಷಗಳ ವಿರುದ್ಧ ಗುಡುಗಿದರು.

ಬಿಹಾರ ಮಹಾಘಟಬಂಧನ್ ಗೆಲುವಿನ ಬಗ್ಗೆ ಪ್ರಜೆಗಳ ವರದಿ: ರಾಬ್ರಿ ದೇವಿಬಿಹಾರ ಮಹಾಘಟಬಂಧನ್ ಗೆಲುವಿನ ಬಗ್ಗೆ ಪ್ರಜೆಗಳ ವರದಿ: ರಾಬ್ರಿ ದೇವಿ

ಚಿರಾಗ್ ಪಾಸ್ವಾನ್ ನವದೆಹಲಿಯಲ್ಲಿದ್ದು, ಬಿಹಾರ ವಾಸ್ತವ ಸ್ಥಿತಿಯ ಬಗ್ಗೆ ಅವರಿಗೆ ಅರಿವಿಲ್ಲ. ಫೈವ್ ಸ್ಟಾರ್ ಸಂಸ್ಕೃತಿಯನ್ನು ಹೋಲುವ ಉತ್ತಮ ಬಟ್ಟೆಗಳನ್ನು ಧರಿಸುತ್ತಾರೆ. ಅಂದ ಮಾತ್ರಕ್ಕೆ ಚಿರಾಗ್ ಪಾಸ್ವಾನ್ ರಾಜ್ಯದ ಕೆಳಮಟ್ಟದಲ್ಲಿನ ಬೆಳವಣಿಗೆಗಳ ಬಗ್ಗೆ ಜ್ಞಾನವನ್ನು ಹೊಂದಿಲ್ಲ ಎಂದು ಕಿಡಿ ಕಾರಿದ್ದಾರೆ.

 Chirag Paswan Wear Clothes Well Like Five-Star Culture But Not Know Ground Reality

ಆರ್ ಜೆಡಿ ವಿರುದ್ಧವೂ ಸಿಡಿಮಿಡಿ:

ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಭರಪೂರ ಆಶ್ವಾಸನೆಗಳನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಆರ್ ಜೆಡಿ ಹೇಳುತ್ತಿದೆ. ಇದು ಹೇಳುವುದಕ್ಕಷ್ಟೇ ಸುಲಭವಾಗಿರುತ್ತದೆ. ಅದನ್ನು ಕಾರ್ಯರೂಪಕ್ಕೆ ತರುವುದು ಅಷ್ಟೊಂದು ಸರಳವಲ್ಲ ಎಂದು ಆರ್ ಜೆಡಿ ವಿರುದ್ಧವೂ ಚಂದ್ರಿಕಾ ರೈ ವಾಗ್ದಾಳಿ ನಡೆಸಿದರು.

ಪ್ರಸ್ತುತ ಬಿಹಾರದಲ್ಲಿ ಎರಡನೇ ಹಂತದಲ್ಲಿ 17 ಜಿಲ್ಲೆಗಳ 94 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. 2.85 ಕೋಟಿ ಜನ ಮತದಾರರು ಈ ಬಾರಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಬಿಹಾರ ಎರಡನೇ ಹಂತದ ಚುನಾವಣೆಯ ಕಣದಲ್ಲಿ 1463 ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಈ ಪೈಕಿ 1316 ಪುರುಷ ಅಭ್ಯರ್ಥಿಗಳಾಗಿದ್ದರೆ, 146 ಮಹಿಳಾ ಅಭ್ಯರ್ಥಿಗಳಾಗಿದ್ದು, ಒಬ್ಬ ತೃತೀಯ ಲಿಂಗಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

English summary
Chirag Paswan Staying In Delhi, Dressed Nice Clothes Well Like Five Star Culture But Not Know Ground Reality. JDU Candidate Chandrika Rai Says.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X