ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ಬಿಹಾರದ ರೈತರಿಗೆ ಭತ್ತದ ಲೆಕ್ಕ ಹೇಳಿಕೊಟ್ಟ ರಾಹುಲ್ ಗಾಂಧಿ

|
Google Oneindia Kannada News

ಪಾಟ್ನಾ, ನವೆಂಬರ್.03: ಬಿಹಾರದ ರೈತರು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಮತವನ್ನು ನೀಡಿಯೇ ದೊಡ್ಡ ತಪ್ಪು ಮಾಡಿದರೇ ಎಂದು ಸಂಸದ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಟಿಹಾರ್ ನಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭರ್ಜರಿ ಪ್ರಚಾರ ನಡೆಸಿದರು. ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ಬಿಹಾರ ಸರ್ಕಾರದ ವಿರುದ್ಧ ಕಿಡಿ ಕಾರಿದರು.

"ನಿಮ್ಮದೇ ಪಕ್ಕದಲ್ಲಿರುವ ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಸರ್ಕಾರವು ರೈತರು ಬೆಳೆದ ಭತ್ತಕ್ಕೆ ಒಂದು ಕ್ವಿಂಟಾಲ್ ಗೆ 2500 ರೂಪಾಯಿ ನೀಡುತ್ತಿದೆ. ಆದರೆ ಬಿಹಾರದಲ್ಲಿ ಮಾತ್ರ ಏಕೆ ಅಷ್ಟೊಂದು ಹಣವು ರೈತರಿಗೆ ಸಿಗುತ್ತಿಲ್ಲ" ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

Chhattisgarh Farmers Get Rs 2,500 Per Quintal For Paddy, Here Why You Get Rs 700 Only

ಪ್ರಧಾನಿ ಮೋದಿ, ನಿತೀಶ್ ರಿಗೆ ಮತ ನೀಡಿದ್ದೇ ತಪ್ಪು:

ಛತ್ತೀಸ್ ಗಢದಲ್ಲಿ ಒಂದು ಕ್ವಿಂಟಾಲ್ ಭತ್ತಕ್ಕೆ 2500 ರೂಪಾಯಿ ಸಿಗುತ್ತಿದೆ. ಮತ್ತೆ ಇಲ್ಲಿ ಏಕೆ ಹಾಗೆ ಆಗುತ್ತಿಲ್ಲ. ನಿಮ್ಮ ಬಳಿಯೂ ಭೂಮಿಯಿದೆ. ನೀರು ಇದೆ. ನೀವೂ ಕೂಡಾ ಅದೇ ಭತ್ತ ಬೆಳೆದಿದ್ದೀರಿ. ಹಾಗಿದ್ದಲ್ಲಿ ನಿಮಗೆ ಏಕೆ ಆ ಬೆಲೆಯು ಸಿಗುತ್ತಿಲ್ಲ. ಛತ್ತೀಸ್ ಗಢದಲ್ಲಿ ಕಾಂಗ್ರೆಸ್ 2500 ರೂಪಾಯಿ ಕೊಟ್ಟು ಖರೀದಿಸುತ್ತಿರುವ ಭತ್ತವನ್ನು ಬಿಹಾರದಲ್ಲಿ ಮಾತ್ರ ಏಕೆ ಕೇವಲ 700 ರೂಪಾಯಿಗೆ ಖರೀದಿಸಲಾಗುತ್ತಿದೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

ಪಾಟ್ನಾ: ಮತದಾನಕ್ಕಾಗಿ ಅಜ್ಜಿಯನ್ನು ಸೈಕಲ್ ನಲ್ಲಿ ಕರೆತಂದ ಮೊಮ್ಮಗಳು ಪಾಟ್ನಾ: ಮತದಾನಕ್ಕಾಗಿ ಅಜ್ಜಿಯನ್ನು ಸೈಕಲ್ ನಲ್ಲಿ ಕರೆತಂದ ಮೊಮ್ಮಗಳು

ಅಲ್ಲದೇ ಬಿಹಾರದ ರೈತರು ಮಾಡಿರುವ ತಪ್ಪಾದರೂ ಏನು ಎಂದು ರಾಹುಲ್ ಗಾಂಧಿ ಕೇಳಿದರು. ನಂತರ ತಮ್ಮ ಪ್ರಶ್ನೆಗೆ ತಾವೇ ಉತ್ತರಿಸಿದರು. ಅರೇ, ನೀವು ಮಾಡಿರುವ ತಪ್ಪು ಬೇರೇನೂ ಅಲ್ಲ. ಬಿಹಾರದ ರೈತರು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಸಿಎಂ ನಿತೀಶ್ ಕುಮಾರ್ ಅವರಿಗೆ ಮತವನ್ನು ನೀಡಿದ್ದೀರಿ. ಈ ಬಾರಿ ಅಂಥ ತಪ್ಪನ್ನು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ರಾಹುಲ್ ಗಾಂಧಿ ಕರೆ ನೀಡಿದರು.

English summary
Chhattisgarh Farmers Get Rs 2,500 Per Quintal For Paddy, Here Why You Get Rs 700 Only: Rahul Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X