• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮನಿ ಲಾಂಡ್ರಿಂಗ್ ಕೇಸ್ : ಲಾಲೂ ಪುತ್ರಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

|

ಪಾಟ್ನಾ, ಜುಲೈ 10: ಬಹುಕೋಟಿ ಮೇವು ಹಗರಣದ ಆರೋಪಿ, ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಅವರ ಪುತ್ರಿ ಮೀಸಾ ಭಾರತಿಗೆ ಮತ್ತೆ ಮನಿ ಲಾಂಡ್ರಿಂಗ್ ಕೇಸ್ ಕಾಡತೊಡಗಿದೆ.

ಬಹುಕೋಟಿ ವಂಚನೆ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಮೀಸಾ ಅವರ ವಿರುದ್ಧ ಬುಧವಾರ(ಜುಲೈ 10) ದಂದು ದೆಹಲಿ ಕೋರ್ಟಿಗೆ ಜಾರಿ ನಿರ್ದೇಶನಾಲಯವು ಚಾರ್ಜ್ ಶೀಟ್ ಸಲ್ಲಿಸಿದೆ.

ಬೇನಾಮಿ ಕಾಯ್ದೆಯಡಿ ಲಾಲೂ ಹೆಂಡತಿ ಮಕ್ಕಳ ಮೇಲೆ ಕೇಸ್

ದೋಷರೋಪಣ ಪಟ್ಟಿಯಲ್ಲಿ 35 ಮಂದಿ ಹೊಸ ಆರೋಪಿಗಳನ್ನು ಹೆಸರಿಸಲಾಗಿದೆ, ಇದರಲ್ಲಿ 20 ಸಂಸ್ಥೆಗಳ ಹೆಸರಿವೆ. 8 ಮಂದಿ ಚಾರ್ಟೆಡ್ ಅಕೌಂಟಟ್ ಭಾಗಿಯಾಗಿರುವ ಈ ಅವ್ಯವಹಾರದ ಷೇರುಗಳ ಮೊತ್ತ 8,000 ಕೋಟಿ ರು ಗೂ ಅಧಿಕ ಎಂದು ಹೇಳಲಾಗಿದೆ.

ದೆಹಲಿ ಕೋರ್ಟಿನ ವಿಶೇಷ ನ್ಯಾ. ಅರುಣ್ ಭಾರದ್ವಾಜ್ ಅವರಿಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ತ್ರಿಪಾಠಿ ಅವರು ಈ ವಿವರಗಳನ್ನು ಒದಗಿಸಿದ್ದಾರೆ. ಮಿಸಾ ಭಾರತಿ ಅವರ ಕಚೇರಿ ಮತ್ತು ಮನೆಗಳ ಮೇಲೆ ಈಗಾಗಳೇ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ, 1000 ಕೋಟಿ ರೂ.ಗೂ ಅಧಿಕ ಮೌಲ್ಯದ ಬೇನಾಮಿ ಆಸ್ತಿ ಹೊಂದಿರುವ ಬಗ್ಗೆ ತನಿಖೆ ನಡೆಸುತ್ತಿದೆ.

2017ರ ಜುಲೈನಲ್ಲಿ ಸುರೇಂದ್ರ ಕುಮಾರ್ ಜೈನ್ ಹಾಗೂ ವೀರೇಂದ್ರ ಜೈನ್ ಎಂಬುವರ ಕಚೇರಿ ಮೇಲೆ ಐಟಿ ದಾಳಿ ನಡೆಸಲಾಗಿತ್ತು. ಜೈನ್ ಸೋದರರಿಗೆ 90 ಲಕ್ಷ ರು ಒದಗಿಸಿದ್ದ ಸಿಎ ರಾಜೇಶ್ ಅಗರವಾಲ್ ನನ್ನು ಬಂಧಿಸಲಾಗಿತ್ತು. ಜೈನ್ ಸೋದರರು ಮಿಸಾ ಭಾರತಿ ಒಡೆತನದ ಮಿಶೈಲ್ ಪ್ಯಾಕರ್ಸ್ ಅಂಡ್ ಪ್ರಿಂಟರ್ಸ್ ಪ್ರೈ ಲಿಮಿಟೆಡ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.

ಬೇನಾಮಿ ಆಸ್ತಿ: ರಾಬ್ಡಿ ದೇವಿಯವರ ಬಳಿ 18 ಫ್ಲಾಟ್ ಗಳು, 18 ಪಾರ್ಕಿಂಗ್ ಜಾಗಗಳು ಇವೆ ಎಂದು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಅವರು ಆರೋಪಿಸಿದ್ದಾರೆ. ರಾಬ್ಡಿ ದೇವಿ ಅವರ ಸಹೋದರಿಯರಾದ ರಾಗಿಣಿ ಮತ್ತು ಚಂದಾ ಯಾದವ್ ಅವರಿಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಮಿಸಾ ಭಾರತಿ ಮತ್ತು ಶೈಲೇಂದ್ರ ಕುಮಾರ್ ಅವರಿಗೆ ಸೇರಿದ ಜಲಪುರದಲ್ಲಿರುವ 12 ನಿವೇಶನ, ದೆಹಲಿಯಲ್ಲಿನ ಒಂದು ಫಾರ್ಮ್ ಹೌಸ್, ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿರುವ ಒಂದು ಬಂಗ್ಲೆಗೆ ಸಂಬಂಧಿಸಿದ ಕಾಗದಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

English summary
The Enforcement Directorate today filed a supplementary chargesheet in a Delhi, in an alleged money laundering case against jailed RJD Chief Lalu Prasad Yadav daughter Misa Bharti and others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X