ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಪ್ರಚಾರ ಚತುರ ಪ್ರಶಾಂತ್ ಕಿಶೋರ್ ವಿರುದ್ಧ ದೂರು

|
Google Oneindia Kannada News

ಪಟ್ನಾ, ಫೆಬ್ರವರಿ 27: ಚುನಾವಣಾ ರಾಜಕೀಯದ ಚತುರ ಪ್ರಶಾಂತ್ ಕಿಶೋರ್ ವಿರುದ್ಧ ಬಿಹಾರದ ಪಾಟಲಿಪುತ್ರ ಪೊಲೀಸ್ ಠಾಣೆಯಲ್ಲಿ ವಂಚನೆ ಹಾಗೂ ಕೃತಿ ಚೌರ್ಯದ ಪ್ರಕರಣ ದಾಖಲಿಸಲಾಗಿದೆ.

Recommended Video

Lok Sabha Election 2019 : ಉತ್ತರ ಕನ್ನಡ ಕ್ಷೇತ್ರದ ಪರಿಚಯ | Oneindia Kannada

ಪ್ರಶಾಂತ್ ಕಿಶೋರ್ ಅವರು 'ಬಾತ್‌ ಬಿಹಾರ್‌ ಕಿ' ಕಾರ್ಯಕ್ರಮಕ್ಕಾಗಿ ತಮ್ಮ ಆಂದೋಲನದಲ್ಲಿನ ಅಂಶಗಳನ್ನು ಕದ್ದಿದ್ದಾರೆ ಎಂದು ಶಾಶ್ವತ್ ಗೌತಮ್ ಎಂಬ ಯುವಕ ದೂರು ನೀಡಿದ್ದಾರೆ.

ಬಿಹಾರ ಸಿಎಂ ನಿತೀಶ್ ಕುಮಾರ್ ಗಾಂಧೀವಾದಿಯೋ.. ಗೋಡ್ಸೆವಾದಿಯೋ..?ಬಿಹಾರ ಸಿಎಂ ನಿತೀಶ್ ಕುಮಾರ್ ಗಾಂಧೀವಾದಿಯೋ.. ಗೋಡ್ಸೆವಾದಿಯೋ..?

ಪ್ರಶಾಂತ್ ಕಿಶೋರ್ ವಿರುದ್ಧ ಐಪಿಸಿ ಸೆಕ್ಷನ್ 420 (ವಂಚನೆ ಮತ್ತು ಮೋಸ) ಸೆಕ್ಷನ್ 406 (ವಿಶ್ವಾಸ ಉಲ್ಲಂಘನೆಯ ಅಪರಾಧಕ್ಕೆ ಶಿಕ್ಷೆ) ಅಡಿ ಪ್ರಕರಣ ದಾಖಲಿಸಲಾಗಿದೆ. 'ಬಿಹಾರ್‌ ಕಿ ಬಾತ್' ಎಂಬ ತಮ್ಮ ಆಂದೋಲನದಲ್ಲಿದ್ದ ಅಂಶಗಳನ್ನು ಪ್ರಶಾಂತ್ ಕಿಶೋರ್ 'ಬಾತ್ ಬಿಹಾರ್ ಕಿ' ಆಂದೋಲನದಲ್ಲಿ ಕದ್ದು ಬಳಸಿಕೊಂಡಿದ್ದಾರೆ ಎಂದು ಗೌತಮ್ ಆರೋಪಿಸಿದ್ದಾರೆ.

Case Against Prashant Kishor Over Baat Ki Bihar Campaign

ಒಸಾಮ ಎಂಬ ವ್ಯಕ್ತಿಯು ತನ್ನ ಸ್ನೇಹಿತನಾಗಿದ್ದು, ಆತನ ಜತೆಗೂಡಿ ಆಂದೋಲನದ ಅಂಶಗಳನ್ನು ಸಿದ್ಧಪಡಿಸಲಾಗಿತ್ತು. ಕೆಲವು ವರ್ಷಗಳ ಹಿಂದೆ ಒಸಾಮ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ. ಆಗ ನಾನೇ ಆತನಿಗೆ ಈ ಕಾರ್ಯಕ್ರಮದ ರೂಪುರೇಷೆಗಳನ್ನು ನೀಡಿದ್ದೆ. ಬಳಿಕ ಒಸಾಮ ತನ್ನ ಬಳಿಯಿದ್ದ ಈ ಅಂಶಗಳನ್ನು ಪ್ರಶಾಂತ್ ಕಿಶೋರ್ ಅವರಿಗೆ ನಕಲು ಮಾಡಿ ಕೊಟ್ಟಿದ್ದಾನೆ. ಹೀಗಾಗಿ ಆತ ವಿರುದ್ಧ ಕೂಡ ದೂರು ದಾಖಲಿಸಲಾಗಿದೆ ಎಂದು ಗೌತಮ್ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ದೀದಿ ಪರ ಅಖಾಡಕ್ಕಿಳಿದ ಪ್ರಶಾಂತ್ ಕಿಶೋರ್ಪಶ್ಚಿಮ ಬಂಗಾಳದಲ್ಲಿ ದೀದಿ ಪರ ಅಖಾಡಕ್ಕಿಳಿದ ಪ್ರಶಾಂತ್ ಕಿಶೋರ್

ಶಾಸ್ವತ್ ಗೌತಮ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಅಮೆರಿಕದಲ್ಲಿ ಅಧ್ಯಯನ ಮುಗಿಸಿ ಬಿಹಾರಕ್ಕೆ ಮರಳಿದ್ದಾರೆ. 2012ರಲ್ಲಿ ಅಮೆರಿಕದಲ್ಲಿ ನಡೆದ ವಿದ್ಯಾರ್ಥಿಗಳ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಈ ರೀತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಗೌತಮ್ ಅವರು ಪೊಲೀಸ್ ಠಾಣೆಗೆ ಅದರ ಪುರಾವೆಗಳನ್ನು ಒದಗಿಸಿದ್ದಾರೆ.

English summary
A cheating case has been lodged against Prashant Kishor over content of his Baat Ki Bihar campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X