ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನ್ನ ಮದುವೆಗೇ ಕುಡಿದು ಟೈಟಾಗಿ ಬಂದ ವರ, ವಧು ಮಾಡಿದ್ದೇನು?

|
Google Oneindia Kannada News

ಬಿಹಾರ, ಮಾರ್ಚ್ 11 : ಮದುವೆ ಎಂದರೆ ವರ ಹಾಗೂ ವಧು ಸಮನಾದ ಕನಸು ಕಂಡಿರುತ್ತಾರೆ. ಮುಂದಿನ ಜೀವನ ಹೇಗೆಲ್ಲಾ ಇರಬೇಕು ಎಂದು ಕನಸು ಕಟ್ಟಿಕೊಂಡಿರುತ್ತಾರೆ.

ಹಾಗಿದ್ದಾಗ ಮದುವೆ ಮಂಟಪಕ್ಕೆ ವರ ಕುಡಿದು ಟೈಟಾಗಿ ಬಂದರೆ ವಧುವಿಗೆ ಏನನ್ನಿಸಿರಬೇಕು. ಹಾಗೆ ಬಂದ ವರನನ್ನು ತಿರಸ್ಕರಿಸಿ ವಧು ಮಂಟಪದಿಂದ ಹೊರನಡೆದ ಘಟನೆ ಬಿಹಾರದ ಛಾಪ್ರಾ ಗ್ರಾಮದಲ್ಲಿ ನಡೆದಿದೆ.

ಕೊಪ್ಪಳದಲ್ಲಿ ವಧುವಿಲ್ಲದೇ ಮದುವೆ ನೋಂದಣಿ ಮಾಡಿಸಿದ ಭೂಪ ಕೊಪ್ಪಳದಲ್ಲಿ ವಧುವಿಲ್ಲದೇ ಮದುವೆ ನೋಂದಣಿ ಮಾಡಿಸಿದ ಭೂಪ

ವಧು ರಿಂಕಿ ಕುಮಾರಿ ಹಾಗೂ ಬಬ್ಲು ಕುಮಾರ್​ಗೆ ಮದುವೆ ನಿಶ್ಚಯವಾಗಿತ್ತು. ಈ ಬಗ್ಗೆ ಮಾತನಾಡಿರುವ ವಧುವಿನ ತಂದೆ ತ್ರಿಭುವನ್​ ಷಾ, ವರ ಬಬ್ಲು ಕುಮಾರ್​ ವಿಪರೀತ ಕುಡಿದು ತನ್ನ ಸುತ್ತ ಏನು ನಡೆಯುತ್ತಿದೆ ಎಂಬುದನ್ನು ತಿಳಿಯದ ಸ್ಥಿತಿಯಲ್ಲಿದ್ದ. ಅಲ್ಲದೆ, ವಿವಾಹ ವೇದಿಕೆಯಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ. ಇದನ್ನು ನೋಡಿದ ನನ್ನ ಮಗಳು ನನಗೆ ಈ ಮದುವೆ ಬೇಡವೆಂದು ತಿರಸ್ಕರಿಸಿ ಮಂಟಪದಿಂದ ಹೊರನಡೆದಳು ಎಂದು ಹೇಳಿದ್ದಾರೆ.

A bride refused to get married after the groom allegedly turned up in an inebriated state for the marriage.

ಇದೇ ವೇಳೆ ವಧುವಿನ ಕಡೆಯವರು ವರದಕ್ಷಿಣೆ ಹಣವನ್ನು ಮರಳಿಸುವವರೆಗೂ ವರನನ್ನು ಮಂಟಪದಿಂದ ಹೊರಹೋಗಲು ಬಿಡಲಿಲ್ಲ. ಹಣ ಮರಳಿಸಿದ ನಂತರ ಆತನನ್ನು ಬಿಡುಗಡೆಗೊಳಿಸಿದರು.

ವರನ ಸಂಬಂಧಿಕರ ಪ್ರಕಾರ ಬಬ್ಲು ಕುಮಾರ್​ ವಿಪರೀತ ಕುಡಿದಿದ್ದರಿಂದ ಆತ ಸರಿಯಾಗಿ ನಿಂತುಕೊಳ್ಳುವ ಸ್ಥಿತಿಯಲ್ಲಿಯೂ ಇರಲಿಲ್ಲ. ಮದುವೆ ಸಂದರ್ಭದಲ್ಲಿ ಜರಗುವ ಆಚರಣೆಗಳನ್ನು ಸರಿಯಾಗಿ ನಿರ್ವಹಿಸುತ್ತಿರಲಿಲ್ಲ. ಇದರಿಂದಾಗಿ ವಧು ಅಲ್ಲಿಂದ ಎದ್ದು ಹೊರನಡೆದಳು ಎಂಬ ಮಾಹಿತಿ ಲಭ್ಯವಾಗಿದೆ.

English summary
A bride refused to get married after the groom allegedly turned up in an inebriated state for the marriage. Bride's father says, "The groom was so drunk that he was unaware of his surroundings. He misbehaved on the stage, so my daughter refused to marry him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X