ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದ ಮುಂದಿನ ಸಿಎಂ ಯಾರು:ಸುಶೀಲ್ ಮೋದಿ ಹೇಳಿದ್ದೇನು?

|
Google Oneindia Kannada News

ಪಾಟ್ನಾ, ನವೆಂಬರ್ 11: ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದರ ಕುರಿತು ಬಿಜೆಪಿ ಸ್ಪಷ್ಟಪಡಿಸಿದೆ.

ಬಿಹಾರದ ಮುಂದಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ಆಗಲಿದ್ದಾರೆ, ಬಲಾಯಿಸುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ನಾಯಕ ಸುಶೀಲ್ ಮೋದಿ ತಿಳಿಸಿದ್ದಾರೆ.

ಬಿಹಾರ ಫಲಿತಾಂಶ: ನಿತೀಶ್ ಕುಮಾರ್‌ಗೆ ಕೈಕೊಟ್ಟ ಮಹಿಳಾ ಮತದಾರರು ಬಿಹಾರ ಫಲಿತಾಂಶ: ನಿತೀಶ್ ಕುಮಾರ್‌ಗೆ ಕೈಕೊಟ್ಟ ಮಹಿಳಾ ಮತದಾರರು

ಬಿಹಾರದಲ್ಲಿ ಎನ್‌ಡಿಎ ಸರ್ಕಾರ ಬಹುಮತ ಸಾಧಿಸಿದೆ, ಎನ್‌ಡಿಎ ಒಳಗೆ ಬಿಜೆಪಿ ದೊಡ್ಡ ಪಕ್ಷವಾಗಿ ಹೊಡಹೊಮ್ಮಿದರೆ ಹೆಚ್ಚಿ ಸ್ಥಾನಗಳನ್ನು ಗೆದ್ದರೆ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವುದಿಲ್ಲ ಎನ್ನುವ ಮಾತುಗಳು ಕೇಳಿಬಂದದಿದ್ದವು.

BJS Says Nitish Kumar Will Be Chief Minister, It Was Our Commitment

ಬಿಹಾರ ಚುನಾವಣೆಯಲ್ಲಿ ಜೆಡಿಯು-ಬಿಜೆಪಿ ನೇತೃತ್ವದ ಎನ್‌ಡಿಎ ಬಹುಮತ ಸಾಧಿಸಿದ್ದು, ಜೆಡಿಯುಗೆ ಹೋಲಿಸಿದರೆ ಇದೇ ಮೊದಲ ಬಾರಿಗೆ ಬಿಜೆಪಿಯೇ ಹೆಚ್ಚು ಸ್ಥಾನಗಳಲ್ಲಿ ಗೆದ್ದಿರುವುದರಿಂದ ಸಹಜವಾಗಿಯೇ ಮುಖ್ಯಮಂತ್ರಿ ಬದಲಾವಣೆ ವಿಚಾರ ಕೇಳಿಬರುತ್ತಿದೆ.

243 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ 74 ರಲ್ಲಿ ಗೆಲುವು ಸಾಧಿಸಿದೆ, ಜೆಡಿಯು 43ಸ್ಥಾನಗಳಲ್ಲಿ ಜಯ ಗಳಿಸಿದೆ.

ಮುಖ್ಯಮಂತ್ರಿ ಬದಲಾವಣೆ ಕುರಿತು ಬಿಜೆಪಿ ನಾಯಕ ಸುಶೀಲ್ ಮೋದಿ ಸ್ಪಷ್ಟನೆ ನೀಡಿದ್ದು, ನಿತೀಶ್ ಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಇದು ನಮ್ಮ ಬದ್ಧತೆಯೂ ಕೂಡ ಹೌದು, ಇದರಲ್ಲಿ ಗೊಂದಲವಿಲ್ಲ ಎಂದು ಹೇಳಿದ್ದಾರೆ.

ಯಾರೇ ಹೆಚ್ಚು ಗೆಲ್ಲಲಿ ಅಥವಾ ಯಾರೇ ಕಡಿಮೆ ಗೆಲ್ಲಲಿ ಅದು ಮುಖ್ಯವಲ್ಲ, ನಾವು ಪಾಲುದಾರರಷ್ಟೇ ಎಂದು ಹೇಳುವ ಮೂಲದ ಮುಖ್ಯಮಂತ್ರಿ ಬದಲಾವಣೆ ಚರ್ಚೆಗೆ ತೆರೆ ಎಳೆದಿದ್ದಾರೆ.

English summary
Bihar Election Results 2020: There is no question of replacing Nitish Kumar as Chief Minister of Bihar, the BJP said today, a day after it one-upped its ally for the first time in elections in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X