ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10ನೇ ತರಗತಿ ಪರೀಕ್ಷೆ ವೇಳೆ ಮಗುವಿಗೆ ಜನ್ಮ ನೀಡಿದ ಮಹಿಳೆ

|
Google Oneindia Kannada News

ಪಾಟ್ನಾ,ಫೆಬ್ರವರಿ 22:ಹತ್ತನೇ ತರಗತಿ ಪರೀಕ್ಷೆ ಬರೆಯುತ್ತಿದ್ದ ವೇಳೆ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.

10 ನೇ ತರಗತಿಯ ಪರೀಕ್ಷೆಗೆ ಹಾಜರಾಗಿದ್ದ 21 ವರ್ಷದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

 ಕೇರಳದಲ್ಲಿ ಆರಂಭವಾಗುತ್ತಿದೆ ಎದೆ ಹಾಲಿನ ಬ್ಯಾಂಕ್ ಕೇರಳದಲ್ಲಿ ಆರಂಭವಾಗುತ್ತಿದೆ ಎದೆ ಹಾಲಿನ ಬ್ಯಾಂಕ್

ಹೆರಿಗೆಗೆ ಕೆಲವೇ ದಿನಗಳಷ್ಟೇ ಇದ್ದಿದ್ದರಿಂದ ಪರೀಕ್ಷೆಗೆ ಹಾಜರಾಗದಂತೆ ಕುಟುಂಬ ಸದಸ್ಯರು ಸಲಹೆ ನೀಡಿದ್ದರು. ಶಾಂತಿ ಕುಮಾರಿಗೆ ಓದಿನಲ್ಲಿ ಆಸಕ್ತಿ ಇದ್ದಿದ್ದರಿಂದ ಆಕೆ ಪರೀಕ್ಷೆಗೆ ಗೈರಾಗಲು ಒಪ್ಪಿರಲಿಲ್ಲ ಎಂದು ಪತಿ ಬ್ರಿಜು ಸಾಹ್ನಿ ಹೇಳಿದ್ದಾರೆ.

Bihar Woman Names Baby Imtihaan After Going Into Labour During Class X Board Exams

ಪರೀಕ್ಷೆಯ ವೇಳೆಯಲ್ಲಿ ಜನಿಸಿದ್ದರಿಂದ ಮಗುವಿಗೆ ಪರೀಕ್ಷೆ ಎಂಬ ಅರ್ಥವನ್ನೇ ನೀಡುವ 'ಇಮ್ತಿಹಾನ್' ಹೆಸರನ್ನು ನಾಮಕರಣ ಮಾಡಲಾಗಿದೆ.

ಪರೀಕ್ಷೆ ನಡೆಯುತ್ತಿರುವಾಗಲೇ ಆಕೆಗೆ ಪ್ರಸವ ವೇದನೆ ಎದುರಾಗಿತ್ತು. ಬಿಹಾರದ ಮುಜಾಫರ್ ಜಿಲ್ಲೆಯ ಮಹಾಂತ್ ದರ್ಶನ್ ದಾಸ್ ಮಹಿಳಾ (ಎಂಡಿದಿಎಂ) ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ವರದಿಯಾಗಿದೆ.

ಕುಧನಿ ಬ್ಲಾಕ್ ನಲ್ಲಿರುವ ಕಾಫೆನ್ ಗ್ರಾಮದ ನಿವಾಸಿಯಾಗಿರುವ ಶಾಂತಿ ಕುಮಾರಿ 10 ನೇ ತರಗತಿಯ ಪರೀಕ್ಷೆಗಳನ್ನು ಬರೆಯುತ್ತಿದ್ದ ಮಹಿಳೆಯಾಗಿದ್ದು, ಪರೀಕ್ಷೆ ಬರೆಯುವುದಕ್ಕಾಗಿ ಒಂದು ಗಂಟೆಗೂ ಹೆಚ್ಚಿನ ಕಾಲ ಪ್ರಸವ ವೇದನೆಯನ್ನು ಸಹಿಸಿಕೊಂಡಿದ್ದಾರೆ.

ಗರ್ಭಿಣಿ ಮಹಿಳೆ ಪರೀಕ್ಷಾ ಕೇಂದ್ರದ ಅಧೀಕ್ಷಕರಾದ ಮಧುಮಿತ ಅವರ ಸಹಾಯ ಕೇಳಿದ ಬೆನ್ನಲ್ಲೇ ಆಕೆಯನ್ನು ಸಾದರ್ ಆಸ್ಪತ್ರೆಗೆ, ಆಕೆಯ ಪತಿ ಬ್ರಿಜು ಸಾಹ್ನಿ ಜೊತೆಗೆ ಆಂಬುಲೆನ್ಸ್ ನಲ್ಲಿ ಕರೆದೊಯ್ಯಲಾಯಿತು.

English summary
In an unusual incident, a 21-year-old pregnant woman, who had gone to give her class 10th state board exam, went into labour mid-exam and gave birth to a baby boy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X