ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇವಲ 5 ನಿಮಿಷ ಅಂತರದಲ್ಲಿ ಮಹಿಳೆಗೆ 2 ಬೇರೆ ಬೇರೆ ಕೊರೊನಾ ಲಸಿಕೆ

|
Google Oneindia Kannada News

ಪಾಟ್ನಾ, ಜೂನ್ 19: ಮಹಿಳೆಯೊಬ್ಬರಿಗೆ ಕೇವಲ ಐದು ನಿಮಿಷದ ಅಂತರದಲ್ಲಿ ಎರಡು ಬೇರೆ ಬೇರೆ ಕೊರೊನಾ ಲಸಿಕೆ ನೀಡಿರುವ ಘಟನೆ ಬಿಹಾರದಲ್ಲಿ ವರದಿಯಾಗಿದೆ.
ಮಹಿಳೆಗೆ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಯನ್ನು ಒಂದೇ ದಿನ ನೀಡಲಾಗಿದೆ.

ಆರೋಗ್ಯ ಇಲಾಖೆ ಇಬ್ಬರು ನರ್ಸ್ ಗಳಿಗೆ ಶೋಕಾಸ್ ನೋಟಿಸ್ ನೀಡಿದೆ, ಜೂನ್ 16 ರಂದು ಘಟನೆ ನಡೆದಿದೆ, ಸುನೀಲಾ ದೇವಿ ಅವರನ್ನು ಜೂನ್ 19ರ ವರೆಗೆ ಅಬ್ಸರ್ ವೇಶನ್ ನಲ್ಲಿಡಲು ವೈದ್ಯರು ನಿರ್ಧರಿಸಿದ್ದಾರೆ. ಲಸಿಕೆ ಪಡೆದ ನಂತರ ಮಹಿಳೆ ನಿಶ್ಯಕ್ತಗೊಂಡಿದ್ದಾರೆ.

ಕೋವಿಶೀಲ್ಡ್‌ನ ಎರಡು ಡೋಸ್‌ ಅಂತರ ವಿವಾದಕ್ಕೆ ತಜ್ಞರ ಸ್ಪಷ್ಟನೆ ಕೋವಿಶೀಲ್ಡ್‌ನ ಎರಡು ಡೋಸ್‌ ಅಂತರ ವಿವಾದಕ್ಕೆ ತಜ್ಞರ ಸ್ಪಷ್ಟನೆ

ಬಿಹಾರದ ಗ್ರಾಮವೊಂದರ ರೈತನ ಪತ್ನಿ ಸುನೀಲಾ ದೇವಿ ಅನಕ್ಷರಸ್ಥೆ, ಮನೆಗೆ ಹೋಗಿ ವಿಷಯ ತಿಳಿಸಿದ ನಂತರ ಆಕೆಯ ಸಂಬಂಧಿಕರು ವಾಪಸ್ ಲಸಿಕಾ ಕೇಂದ್ರಕ್ಕೆ ಬಂದು ಗಲಾಟೆ ಮಾಡಿದ್ದಾರೆ. ಆದರೆ ಅಧಿಕಾರಿಗಳು ಈ ಸಂಬಂಧ ಯಾವುದೇ ಮಾಹಿತಿ ನೀಡಿಲ್ಲ.

Bihar Woman Given Both Covishield And Covaxin In 5 Minutes

ಲಸಿಕೆ ಪಡೆದ ನಂತರ ಮನೆಗೆ ಹೋಗಿ ತಮ್ಮ ಮಕ್ಕಳಿಗೆ ವಿಷಯ ತಿಳಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ, ನಂತರ ಲಸಿಕಾ ಕೇಂದ್ರಕ್ಕೆ ಬಂದಲ ಆಕೆಯ ಸಂಬಂಧಿಕರು ಮತ್ತು ಸ್ನೇಹಿತರು ಗಲಾಟೆ ಮಾಡಿದ್ದಾರೆ. ಆದರೆ ಘಟನೆ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಈ ಪ್ರಮಾದದ ಬಗ್ಗೆ ಆರೋಗ್ಯ ಇಲಾಖೆಯಿಂದ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ, ಘಟನೆಗೆ ಚಂಚಲ ಕುಮಾರಿ ಮತ್ತು ಸುನೀತಾ ಕುಮಾರ್ ಎಂಬ ಇಬ್ಬರು ನರ್ಸ್ ಗಳು ಕಾರಣ ಎಂದು ಗುರುತಿಸಲಾಗಿದೆ.

ಬೆಲಾರ್‌ಚಕ್ ಮಿಡಲ್ ಸ್ಕೂಲ್ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಮೊದಲ ಲಸಿಕೆ ತೆಗೆದುಕೊಂಡ ನಂತರ, ಆಕೆಯನ್ನು ಕೋಣೆಯಲ್ಲಿ ಕಾಯುವಂತೆ ಕೇಳಲಾಯಿತು. ಆದರೆ ಏನು ಮಾಡಬೇಕೆಂದು ತೋಚದ ರೈತ ರವೀಂದ್ರ ಮಹತೋ ಅವರ ಪತ್ನಿ ಸ್ವಲ್ಪ ಸಮಯ ಕಾದು.

ಕೋವ್ಯಾಕ್ಸಿಲ್ ಲಸಿಕೆ ಪಡೆಯಲು ಕಾಯುತ್ತಿದ್ದ ಮತ್ತೊಂದು ಸರತಿಯಲ್ಲಿ ಸೇರಿಕೊಂಡಿದ್ದಾರೆ. ಅವರು ಎಲ್ಲಿಗೆ ಹೋಗುತ್ತಿದ್ದಾರೆ ಎಂಬುದು ತಿಳಿಯಲಿಲ್ಲ, ಒಬ್ಬರು ಬಂದು ನನ್ನನ್ನು ಕರೆದೊಯ್ದರು, ಆ ವೇಳೆ ನಾನು ಲಸಿಕೆ ತೆಗೆದುಕೊಂಡಿರುವುದಾಗಿ ನರ್ಸ್‌ಗೆ ತಿಳಿಸಿದೆ, ಆದರೆ ಅವರು ನನ್ನ ಮಾತು ಕೇಳಿಸಿಕೊಳ್ಳಲಿಲ್ಲ, ಕರೆದುಕೊಂಡು ಹೋಗಿ ಅದೇ ತೋಳಿಗೆ ಮತ್ತೆ ಲಸಿಕೆ ನೀಡಿದರು ಎಂದು ಸುಮಿಲಾ ದೇವಿ ತಿಳಿಸಿದ್ದಾರೆ.

English summary
A Bihar woman, Sunila Devi, was administered shots of both the Covishield and Covaxin vaccines at an interval of five minutes on June 16. She is under the observation of a medical team and is said to be well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X