ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಲ್ಮೆಟ್ ಧರಿಸಿ ಕಡಿಮೆ ಬೆಲೆಗೆ ಈರುಳ್ಳಿ ಮಾರಿದ ಸೊಸೈಟಿ ಸಿಬ್ಬಂದಿ

|
Google Oneindia Kannada News

ಪಾಟ್ನಾ, ನವೆಂಬರ್ 30: ಈರುಳ್ಳಿ ಬೆಲೆ ಏರಿಕೆ ಸಾಮಾನ್ಯ ಜನರಿಗೆ ಕಣ್ಣೀರು ತರಿಸುವ ಜೊತೆಗೆ ಚಿತ್ರ-ವಿಚಿತ್ರ ಘಟನೆಗಳಿಗೂ ಕಾರಣವಾಗುತ್ತಿದೆ.

ಕೋಲ್ಕತ್ತದಲ್ಲಿ ಸಂಘವೊಂದು ಉಚಿತ ಈರುಳ್ಳಿ ವಿತರಿಸಿ ಸುದ್ದಿಯಾದರೆ. ಇಲ್ಲೇ ಕರ್ನಾಟಕದ ಗದಗದಲ್ಲಿ ಹಣ ಬಿಟ್ಟು ಈರುಳ್ಳಿ ಕದ್ದೊಯ್ದ ಘಟನೆಯೂ ಸುದ್ದಿಯಾಗಿತ್ತು. ಈಗ ಬಿಹಾರ ರಾಜ್ಯದಲ್ಲಿ ಈರುಳ್ಳಿಗೆ ಸಂಬಂಧಿಸಿದಂತೆಯೇ ವಿಚಿತ್ರ ಸುದ್ದಿಯೊಂದು ವರದಿ ಆಗಿದೆ.

ನೂರಾರು ಕೆ.ಜಿ ಈರುಳ್ಳಿಯನ್ನು ದಾನ ಮಾಡಿದ ಕಲಿಯುಗ ಕರ್ಣನೂರಾರು ಕೆ.ಜಿ ಈರುಳ್ಳಿಯನ್ನು ದಾನ ಮಾಡಿದ ಕಲಿಯುಗ ಕರ್ಣ

ಈರುಳ್ಳಿ ಬೆಲೆ ನೂರರ ಗಡಿ ದಾಟಿರುವ ಕಾರಣ ಬಿಹಾರದಲ್ಲಿ ಸಹಕಾರ ಸಂಘದ ಮೂಲಕ ಕಡಿಮೆ ಬೆಲೆಗೆ ಈರುಳ್ಳಿ ಮಾರಾಟ ಮಾಡಲಾಗುತ್ತಿದ್ದು, ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ಜನರು ಈರುಳ್ಳಿ ಖರೀದಿಸುತ್ತಿದ್ದಾರೆ.

Bihar State Co Operative Society Employee Sell Onion By Wearing Helmet

ವಿಚಿತ್ರವೆಂದರೆ ಕಡಿಮೆ ಬೆಲೆಗೆ ಈರುಳ್ಳಿ ಮಾರಾಟ ಮಾಡುತ್ತಿರುವ ಸಹಕಾರ ಸಂಘದ ಸಿಬ್ಬಂದಿ ಪೊಲೀಸ್ ಬಂದೋಬಸ್ತ್ ಕೇಳಿದ್ದಾರೆ. ಆದರೆ ಪೊಲೀಸ್ ನವರು ಭದ್ರತೆ ನೀಡಲು ನಿರಾಕರಿಸುವ ಕಾರಣ ಹೆಲ್ಮೆಟ್ ಧರಿಸಿ ಈರುಳ್ಳಿ ಮಾರಾಟ ಮಾಡುತ್ತಿದ್ದಾರೆ.

ಕಡಿಮೆ ಬೆಲೆಗೆ ಈರುಳ್ಳಿ ಮಾರಾಟ ಮಾಡುತ್ತಿರುವ ಕಾರಣ ಈರುಳ್ಳಿ ಕೊಳ್ಳಲು ನೂಕುನುಗ್ಗಲು ಸಂಭವಿಸುತ್ತದೆ. ಕೆಲವೆಡೆ ಗಲಾಟೆಗಳಾಗಿ ಕಲ್ಲು ತೂರಾಟಗಳೂ ಆಗಿವೆ. ಹಾಗಾಗಿ ನಾವು ಹೆಲ್ಮೆಟ್ ಧರಿಸಿದ್ದೇವೆ ಎಂದು ಸಿಬ್ಬಂದಿ ಹೇಳಿದ್ದಾರೆ.

ಈರುಳ್ಳಿ ಬೆಲೆ ಏರಿಕೆಯಾಗುತ್ತಿರುವುದಕ್ಕೆ ಕಾರಣವೇನು?ಈರುಳ್ಳಿ ಬೆಲೆ ಏರಿಕೆಯಾಗುತ್ತಿರುವುದಕ್ಕೆ ಕಾರಣವೇನು?

ಬಿಹಾರ ರಾಜ್ಯ ಸಹಕಾರ ಮಾರುಕಟ್ಟೆ ಸಂಸ್ಥೆ 'ಬಿಸ್ಕಾಮೌನ್' ಕಡಿಮೆ ಬೆಲೆಗೆ ಈರುಳ್ಳಿ ಮಾರಾಟ ಮಾಡುತ್ತಿದ್ದು 120 ಕ್ಕೂ ಹೆಚ್ಚಿರುವ ಕೆ.ಜಿ.ಈರುಳ್ಳಿಯನ್ನು ಪ್ರತಿ ಕೆ.ಜಿ.ಗೆ ಕೇವಲ 30 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

ಬಿಹಾರ ಸರ್ಕಾರವು ರಾಜಸ್ಥಾನದಿಂದ 60 ರೂಪಾಯಿಗೆ ಕೆ.ಜಿ ಯಂತೆ ಈರುಳ್ಳಿ ಖರೀದಿಸಿ ಅದನ್ನು 35 ರೂಪಾಯಿಗೆ ಪ್ರತಿ ಕೆ.ಜಿಯಂತೆ ಜನರಿಗೆ ಮಾರಾಟ ಮಾಡುತ್ತಿದ್ದಾರೆ. ಕಡಿಮೆ ಬೆಲೆಯ ಈರುಳ್ಳಿಯನ್ನು ಕೊಳ್ಳಲು ತಾಸು ಗಟ್ಟಲೆ ಸಾಲಿನಲ್ಲಿ ನಿಂತು ಜನರು ಕಾಯುತ್ತಿದ್ದಾರೆ.

English summary
Bihar state co-operative society employee sell onion by wearing helmet. They sell onions in very less price than market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X