ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದ ತೈಲ ಸಂಸ್ಕರಣಾಗಾರ ಸ್ಫೋಟ: 15 ಗಾಯ, 8 ಜನರ ಸ್ಥಿತಿ ಗಂಭೀರ

|
Google Oneindia Kannada News

ಪಾಟ್ನಾ, ಸೆಪ್ಟೆಂಬರ್ 16: ಬಿಹಾರದ ಬೇಗುಸರಾಯ್ ಜಿಲ್ಲೆಯ ಬರೌನಿ ತೈಲ ಸಂಸ್ಕರಣಾ ಘಟಕದಲ್ಲಿ ಸಂಭವಿಸಿದ ಸ್ಫೋಟದಿಂದ 15 ಮಂದಿ ಗಾಯಗೊಂಡಿದ್ದು, 8 ಮಂದಿ ಸ್ಥಿರಿ ಗಂಭೀರವಾಗಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟದಲ್ಲಿ ಗಾಯಗೊಂಡವರನ್ನು ಬರೌನಿ ಸಂಸ್ಕರಣಾ ಘಟಕದ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಂಟು ಮಂದಿ ಉದ್ಯೋಗಿಗಳು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

"ಬರೌನಿ ಸಂಸ್ಕರಣಾ ಘಟಕವು ಕಳೆದ ಒಂದು ತಿಂಗಳಿನಿಂದ ಬಂದ್ ಆಗಿತ್ತು. ಮಂಗಳವಾರವಷ್ಟೇ ಘಟಕದಲ್ಲಿ ಕಾರ್ಯಾರಂಭ ಮಾಡಲಾಗಿತ್ತು. ಎರಡು ದಿನಗಳಿಂದ ಸರಳವಾಗಿ ನಡೆದುಕೊಂಡು ಹೋಗುತ್ತಿದ್ದ ಘಟಕದಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಭಾರಿ ಸ್ಫೋಟ ಸಂಭವಿಸಿದೆ," ಎಂದು ತೈಲ ಸಂಸ್ಕರಣಾ ಘಟಕದ ಅಧಿಕಾರಿ ಇ ಡಿ ಶುಕ್ಲಾ ಹೇಳಿದ್ದಾರೆ.

 Bihars Oil Refinery Plant Explosion; 15 Injure, 8 Peoples in Serious Condition

ಸಂಸ್ಕರಣಾ ಘಟಕದಲ್ಲಿ ರಕ್ಷಣಾ ಕಾರ್ಯಾಚರಣೆ:

"ಪ್ರಸ್ತುತ ಸಂದರ್ಭದಲ್ಲಿ ನಾವು ಎಲ್ಲಾ ರೀತಿಯ ಉತ್ಪಾದನೆಯನ್ನು ನಿಲ್ಲಿಸಿದ್ದೇವೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಒಳಗೆ ಯಾರೂ ಸಿಕ್ಕಿಬಿದ್ದಿಲ್ಲ ಎಂದು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಸಂಸ್ಕರಣಾ ಘಟಕದಲ್ಲಿ ಮಾನವ ಚಲನೆಯನ್ನು ಸಂಪೂರ್ಣವನ್ನು ನಿಲ್ಲಿಸಲಾಗಿದೆ. ಸ್ಫೋಟಕ್ಕೆ ಮೂಲ ಕಾರಣವೇನು ಎಂಬುದನ್ನು ಪತ್ತೆ ಮಾಡುವುದಕ್ಕಾಗಿ ಪರಿಣಿತ ಎಂಜಿನಿಯರ್‌ಗಳಿಗೆ ಮಾತ್ರ ಪರೀಕ್ಷೆಗೆ ಅನುಮತಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

English summary
Bihar's Oil Refinery Plant Explosion; 15 Injure, 8 Peoples in Serious Condition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X