• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈತ್ರಿ ಬಿಡಲು ಸಿದ್ಧರಾಗಿದ್ದರೇ ನಿತೀಶ್?: ಲಾಲು ಹೇಳಿದ ಸ್ಫೋಟಕ ಮಾಹಿತಿ

|

ಪಟ್ನಾ, ಏಪ್ರಿಲ್ 5: ಬಿಹಾರ ವಿಧಾನಸಭೆ ಚುನಾವಣೆಯ ಬಳಿಕ ಮಹಾಮೈತ್ರಿಕುಟಕ್ಕೆ ಕೈಕೊಟ್ಟು ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಿರುವ ಜೆಡಿಯು ನಾಯಕ, ಮುಖ್ಯಮಂತ್ರಿ ನಿತೀಶ್ ಕುಮಾರ್, ಪುನಃ ತಮ್ಮ ಬಳಿಗೆ ಬರಲು ಮುಂದಾಗಿದ್ದರು. ಆದರೆ, ತಾವೇ ಅವರಿಗೆ ಸಾಧ್ಯವಿಲ್ಲ ಎಂದು ಮರಳಿ ಕಳುಹಿಸಿದ್ದಾಗಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಲಾಲು ಅವರು ಬರೆದಿರುವ ಇನ್ನೂ ಬಿಡುಗಡೆಯಾಗಬೇಕಿರುವ 'ಗೋಪಾಲ್‌ಗಂಜ್ ಟು ರೈಸಿನಾ: ಮೈ ಪೊಲಿಟಿಕಲ್ ಜರ್ನಿ' ಪುಸ್ತಕದಲ್ಲಿ ನಿತೀಶ್ ಕುಮಾರ್ ಮತ್ತು ಜೆಡಿಯು ಉಪಾಧ್ಯಕ್ಷರಾಗಿರುವ ಪ್ರಶಾಂತ್ ಕಿಶೋರ್ ಅವರ ಕುರಿತು ಬರೆದಿದ್ದಾರೆ. ಈ ಕೃತಿಗೆ ನಳಿನ್ ವರ್ಮಾ ಸಹ ಲೇಖಕರಾಗಿದ್ದಾರೆ.

ಲಾಲೂ ಪ್ರಸಾದ್ ಜೈಲು ಕೋಣೆಯಲ್ಲಿ ಫೋನ್‌ಗಾಗಿ ಹುಡುಕಾಟ

ಬಿಜೆಪಿಯೊಂದಿಗೆ ಸೇರಿಕೊಂಡು ಸರ್ಕಾರ ರಚಿಸಿದ ಆರು ತಿಂಗಳ ಒಳಗೇ ಮಹಾಘಟಬಂಧನಕ್ಕೆ ಮರಳಲು ನಿತೀಶ್ ಬಯಸಿದ್ದರು. ಪ್ರಶಾಂತ್ ಕಿಶೋರ್ ಅವರನ್ನು ನಿತೀಶ್ ಐದು ವಿಭಿನ್ನ ಸಂದರ್ಭಗಳಲ್ಲಿ ತಮ್ಮ ಬಳಿಗೆ ಕಳುಹಿಸಿದ್ದರು. ವಿವಿಧ ರಾಜಕೀಯ ಪಕ್ಷಗಳು ಸೇರಿಕೊಂಡು ರಚಿಸಿರುವ ಜಾತ್ಯತೀತ ಒಕ್ಕೂಟದೊಳಗೆ ಮತ್ತೆ ಸೇರ್ಪಡೆಗೊಳ್ಳುವ ಸಲುವಾಗಿ ಮನವೊಲಿಸಲು ಕಿಶೋರ್ ಬಂದಿದ್ದರು. ಆದರೆ, ನಿತೀಶ್ ಕುಮಾರ್ ಅವರ ಮೇಲಿನ ನಂಬಿಕೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದರಿಂದ ಅದಕ್ಕೆ 'ಇಲ್ಲ' ಎಂದಿದ್ದಾಗಿ ಅವರು ಹೇಳಿದ್ದಾರೆ.

'ನನ್ನ ಪಕ್ಷವು ಜೆಡಿಯುಗೆ ಬೆಂಬಲ ನೀಡುವುದಾಗಿ ಬರೆದುಕೊಟ್ಟರೆ ಬಿಜೆಪಿ ಮೈತ್ರಿಯಿಂದ ಹೊರಬಂದು ಮಹಾಘಟಬಂಧನಕ್ಕೆ ಸೇರಿಕೊಳ್ಳುವುದನ್ನು ಹೇಳಲು ಕಿಶೋರ್ ಬಯಸಿದ್ದರು. ನನಗೆ ನಿತೀಶ್ ವಿರುದ್ಧ ಯಾವುದೇ ವೈಮನಸ್ಸು ಇಲ್ಲದಿದ್ದರೂ ಅವರ ಮೇಲಿನ ನಂಬಿಕೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೆ. ಒಂದು ವೇಳೆ ಕಿಶೋರ್ ಅವರ ಆಹ್ವಾನವನ್ನು ಒಪ್ಪಿಕೊಂಡರೆ 2015ರಲ್ಲಿ ಮಹಾಘಟಬಂಧನದ ಪರವಾಗಿ ಮತ ಹಾಕಿದ ಜನರು ಮತ್ತು ದೇಶದ ಇತರೆಡೆ ಬಿಜೆಪಿ ವಿರುದ್ಧ ಒಂದಾಗಿರುವ ಇತರೆ ಪಕ್ಷಗಳು ಹೇಗೆ ಪ್ರತಿಕ್ರಿಯೆ ನೀಡುತ್ತವೆ ಎಂಬುದರ ಬಗ್ಗೆ ನನಗೆ ಖಚಿತತೆ ಇರಲಿಲ್ಲ' ಎಂದು ಬರೆದಿದ್ದಾರೆ.

ಆರ್ ಜೆಡಿ ಅಭ್ಯರ್ಥಿ ಕೋಟ್ಯಧಿಪತಿ ಶರದ್ ಯಾದವ್ ಆಸ್ತಿ ವಿವರ

ಆದರೆ, ಈ ಹೇಳಿಕೆಯನ್ನು ಜೆಡಿಯು ತಳ್ಳಿಹಾಕಿದೆ. ಲಾಲು ಸುಳ್ಳು ಹೇಳಿಕೆ ಕೊಟ್ಟಿದ್ದಾರೆ ಎಂದು ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ಹೇಳಿದ್ದಾರೆ.

ಬಿಹಾರದಲ್ಲಿ ಲಾಲೂ ಆರ್‌ಜೆಡಿ ಛಿದ್ರ? ದಾಯಾದಿ ಕಲಹಕ್ಕೆ ಕಾಂಗ್ರೆಸ್ ಬೇಸ್ತು

2017ರಲ್ಲಿ ಮಹಾಘಟಬಂಧನದಿಂದ ಹೊರ ಬಂದ ಬಳಿಕ ನಿತೀಶ್ ಕುಮಾರ್ ಅವರು ಆರ್‌ಜೆಡಿ ಬಳಿ ಹೋಗಲು ಎಂದಿಗೂ ಇಚ್ಛಿಸಿರಲಿಲ್ಲ. ಹಾಗೊಮ್ಮೆ ಆಸಕ್ತಿ ತೋರಿದ್ದರೆ ಅದು ಪಕ್ಷದ ಆಂತರಿಕ ಸಭೆಯಲ್ಲಿ ಚರ್ಚೆಯಾಗುತ್ತಿತ್ತು. ಆರ್‌ಜೆಡಿಯನ್ನು ಜೆಡಿಯು ಶಾಶ್ವತವಾಗಿ ತಿರಸ್ಕರಿಸಿದೆ. ಭ್ರಷ್ಟಾಚಾರದೊಂದಿಗೆ ರಾಜಿ ಮಾಡಿಕೊಂಡಿದ್ದ ಕೊನೆಯ ವ್ಯಕ್ತಿಯೆಂದರೆ ನಿತೀಶ್ ಕುಮಾರ್ ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಕೆಸಿ ತ್ಯಾಗಿ ಹೇಳಿದ್ದಾರೆ.

English summary
RJD chief Lalu Prasad said in his book 'Gopalganj to Raisina: My Political Journey', Bihar Chief Minister Nitish Kumar wanted to return to Mahaghatbandhan within the 6 months of alliance with BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X