ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: 7 ಪಕ್ಷ, 164 ಶಾಸಕರ ಬೆಂಬಲವಿದೆ ಎಂದ ನಿತೀಶ್ ಕುಮಾರ್

|
Google Oneindia Kannada News

ಪಾಟ್ನಾ, ಆಗಸ್ಟ್ 9: ಬಿಹಾರದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಿತೀಶ್ ಕುಮಾರ್, ತಾವು ಏಳು ಪಕ್ಷಗಳು ಹಾಗೂ 164 ಶಾಸಕರ ಬೆಂಬಲ ಹೊಂದಿರುವುದಾಗಿ ಹೇಳಿದರು.

ಮಂಗಳವಾರ ಸಂಜೆ ರಾಜ್ಯಪಾಲ ಭೇಟಿ ನಂತರದಲ್ಲಿ ನಿತೀಶ್ ಕುಮಾರ್ ಮತ್ತು ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ತಾವು ರಚಿಸಿರುವ ಮಹಾಘಟಬಂಧನ್ ನಲ್ಲಿ 164 ಶಾಸಕರಿದ್ದಾರೆ ಎಂದರು.

"ಹಿಂದಿಯ ಹೃದಯಭಾಗವಾಗಿರುವ ಪ್ರದೇಶಗಳಲ್ಲಿ ಬಿಜೆಪಿ ಯಾವುದೇ ಮೈತ್ರಿಯ ಪಾಲುದಾರರನ್ನು ಹೊಂದಿಲ್ಲ. ಬಿಜೆಪಿಯು ಸ್ವತಃ ತಾನೇ ಮೈತ್ರಿ ಮಾಡಿಕೊಳ್ಳುವ ಪಕ್ಷಗಳನ್ನು ನಾಶಪಡಿಸುತ್ತದೆ ಎಂಬುದನ್ನು ಇತಿಹಾಸವೇ ಹೇಳುತ್ತದೆ. ಇದು ಪಂಜಾಬ್ ಮತ್ತು ಮಹಾರಾಷ್ಟ್ರದಲ್ಲಿ ನಡೆಯುವುದನ್ನು ನೋಡಿದ್ದೇವೆ," ಎಂದು ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಹೇಳಿದ್ದಾರೆ.

Bihar: Nitish Kumar joint press conference with Tejashwi Yadav after meeting Governor

ನಿತೀಶ್ ಕುಮಾರ್ ನಮ್ಮ ನಾಯಕ ಎಂದ ಯಾದವ್: ಬಿಹಾರದಲ್ಲಿ ಭಾರತೀಯ ಜನತಾ ಪಕ್ಷವೊಂದನ್ನು ಹೊರತುಪಡಿಸಿ, ಉಳಿದೆಲ್ಲ ಪಕ್ಷಗಳು ಮತ್ತು ಶಾಸಕರು ನಿತೀಶ್ ಕುಮಾರ್ ಅವರೇ ನಮ್ಮ ನಾಯಕ ಎಂದು ಒಪ್ಪಿಕೊಂಡಿದ್ದಾರೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.

ಪ್ರಾದೇಶಿಕ ಪಕ್ಷಗಳನ್ನು ಕೊನೆಗಾಣಿಸುವುದೇ ಬಿಜೆಪಿ ಧ್ಯೇಯ: ಪ್ರಾದೇಶಿಕ ಪಕ್ಷಗಳನ್ನು ಕೊನೆಗೊಳಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ. ಜನರನ್ನು ಬೆದರಿಸಿ ಖರೀದಿಸುವುದಕ್ಕೆ ಬಿಜೆಪಿಗೆ ಚೆನ್ನಾಗಿ ಗೊತ್ತಿದೆ. ನಮ್ಮ ಬಿಹಾರದಲ್ಲಿ ಬಿಜೆಪಿಯ ಅಜೆಂಡಾ ಜಾರಿಯಾಗಬಾರದು ಎಂದು ನಾವೆಲ್ಲರೂ ಬಯಸಿದ್ದೆವು, ಲಾಲೂಜಿಯವರು ಅಡ್ವಾಣಿಜಿಯವರ ರಥವನ್ನು ನಿಲ್ಲಿಸಿದರು ಎಂದು ನಮಗೆಲ್ಲರಿಗೂ ತಿಳಿದಿದೆ, ನಾವು ಯಾವುದೇ ಬೆಲೆಗೆ ಮಣಿಯುವುದಿಲ್ಲ," ಎಂದು ಯಾದವ್ ಹೇಳಿದರು.

English summary
Bihar: Nitish Kumar joint press conference with Tejashwi Yadav after meeting Governor. Here Read Highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X