ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೋವಿಡ್‌-19 ಮರಣ ಪ್ರಮಾಣಪತ್ರದಲ್ಲೂ ಮೋದಿ ಫೋಟೋ ಹಾಕಿ' : ಎನ್‌ಡಿಎ ಮಿತ್ರಪಕ್ಷ

|
Google Oneindia Kannada News

ಪಾಟ್ನಾ, ಮೇ 25: ಪ್ರಧಾನಿ ನರೇಂದ್ರ ಮೋದಿ ಫೋಟೋವನ್ನು ವ್ಯಾಕ್ಸಿನೇಷನ್ ಪ್ರಮಾಣಪತ್ರಗಳಲ್ಲಿ ಹಾಕುವುದನ್ನು ಪ್ರಶ್ನಿಸಿರುವ ಹಿಂದೂಸ್ತಾನಿ ಅವಂ ಮೋರ್ಚಾ (ಜಾತ್ಯಾತೀತ) ಅಧ್ಯಕ್ಷ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ, ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಹಾಕುವುದಾದರೆ ಕೊರೊನಾದಿಂದ ಮೃತಪಟ್ಟವರ ಮರಣ ಪ್ರಮಾಣಪತ್ರದಲ್ಲೂ ಮೋದಿ ಫೋಟೋ ಹಾಕಬೇಕು ಎಂದು ಹೇಳಿದ್ದಾರೆ.

ಈಗಾಗಲೇ ವಿಪಕ್ಷಗಳು ಲಸಿಕಾ ಪ್ರಮಾಣ ಪತ್ರದಲ್ಲಿ ಮೋದಿ ಫೋಟೋ ಹಾಕುವುದಕ್ಕೆ ವಿರೋಧ ವ್ಯಕ್ತಪಡಿಸಿದೆ. ಚಂಡೀಗಢದಲ್ಲಿ ಪ್ರಧಾನಿ ಮೋದಿ ಬದಲಿಗೆ ಮುಖ್ಯಮಂತ್ರಿ ಫೋಟೋವನ್ನು ಕೂಡಾ ಹಾಕಲಾಗುತ್ತಿದೆ. ಏತನ್ಮಧ್ಯೆ ಬಿಹಾರದಲ್ಲಿ ಎನ್‌ಡಿಎ ಮಿತ್ರಪಕ್ಷವೇ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ .

ಕೋವಿಡ್‌ ಸಾವಿನ ಸಂಖ್ಯೆಯಲ್ಲಿ ವ್ಯತ್ಯಾಸ - ಬಿಹಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪಾಟ್ನಾ ಹೈಕೋರ್ಟ್ ಕೋವಿಡ್‌ ಸಾವಿನ ಸಂಖ್ಯೆಯಲ್ಲಿ ವ್ಯತ್ಯಾಸ - ಬಿಹಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪಾಟ್ನಾ ಹೈಕೋರ್ಟ್

ಬಿಎಪಿ, ಜೆಡಿಯು ಮತ್ತು ವಿಕಾಸ್‌ಶೀಲ್ ಇನ್ಸಾನ್ ಪಕ್ಷವನ್ನು ಒಳಗೊಂಡ ಬಿಹಾರದ ಆಡಳಿತ ಮೈತ್ರಿ ಪಕ್ಷವೇ ಎಚ್‌ಎಎಂ (ಎಸ್). ಎನ್‌ಡಿಎ ಒಕ್ಕೂಟದ ರಾಜ್ಯದ ಆಡಳಿತಾರೂಢ ಎಚ್‌ಎಎಂ(ಎಸ್‌) ನ ನೇತೃತ್ವ ವಹಿಸಿರುವ ಜಿತನ್ ರಾಮ್ ಮಾಂಝಿ, ಲಸಿಕೆ ಪ್ರಮಾಣಪತ್ರಗಳಲ್ಲಿ ಮೋದಿ ಫೋಟೋವನ್ನು ಹಾಕಲು ಸರ್ಕಾರ ತುಂಬಾ ಇಷ್ಟಪಡುವುದಾದರೆ, ಕೊರೊನಾದಿಂದ ಸಾವನ್ನಪ್ಪಿದವರ ಪ್ರಮಾಣಪತ್ರದಲ್ಲೂ ಪೋಟೋ ಇರಬೇಕು. ಇದು ಹೆಚ್ಚು ನ್ಯಾಯಯುತವಾಗಿರುತ್ತದೆ ಎಂದು ಮಾಡಿದ್ದಾರೆ. ಇದನ್ನು ಪಕ್ಷದ ವಕ್ತಾರ ಡ್ಯಾನಿಶ್ ರಿಜ್ವಾನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಡ್ಯಾನಿಶ್ ರಿಜ್ವಾನ್ ಟ್ವೀಟ್‌

ಡ್ಯಾನಿಶ್ ರಿಜ್ವಾನ್ ಟ್ವೀಟ್‌

"ಯಾರಾದರೂ ಕ್ರೆಡಿಟ್ ತೆಗೆದುಕೊಳ್ಳಲು ಬಯಸಿದರೆ, ಸಾವಿಗೆ ಸಂಬಂಧಿಸಿದ ನಿಂದನೆಯನ್ನೂ ಎದುರಿಸಲು ಸಿದ್ಧರಾಗಿರಬೇಕು. ಇತರರು ಯಾಕೆ ನಿಂದನೆಗೆ ಒಳಪಡಬೇಕು? ಎಂದು ಎಚ್‌ಎಎಂ (ಎಸ್) ಪಕ್ಷದ ವಕ್ತಾರ ಡ್ಯಾನಿಶ್ ರಿಜ್ವಾನ್ ಪ್ರಶ್ನಿಸಿದ್ದಾರೆ. ರಿಜ್ವಾನ್ ಎರಡನೇ ಡೋಸ್ ಲಸಿಕೆ ತೆಗೆದುಕೊಂಡಿದ್ದು ಈ ಬಳಿಕೆ ಟ್ವೀಟ್‌ ಮಾಡಿದ್ದಾರೆ. ನನ್ನ ಎರಡನೇ ಡೋಸ್ ಕೋವಾಕ್ಸಿನ್ ನಂತರ ಲಸಿಕೆ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದೇನೆ, ಅದರಲ್ಲಿ ಪ್ರಧಾನಿ ಫೋಟೋ ಇದೆ. ನಮ್ಮ ದೇಶದಲ್ಲಿ, ಸಾಂವಿಧಾನಿಕ ಮುಖ್ಯಸ್ಥರು ರಾಷ್ಟ್ರಪತಿ, ಹಾಗಾಗಿ ಅವರ ಫೋಟೋ ಪ್ರಮಾಣಪತ್ರಗಳಲ್ಲಿರಬೇಕು. ಅಷ್ಟಕ್ಕೂ ಫೋಟೋವನ್ನು ಹಾಕಲೇಬೇಕೆಂದು ಆದರೆ, ರಾಷ್ಟ್ರಪತಿ, ಪ್ರಧಾನಿ, ರಾಜ್ಯದ ಮುಖ್ಯಮಂತ್ರಿಯ ಫೋಟೋಗಳು ಸಹ ಇರಬೇಕು ಎಂದು ಆಗ್ರಹಿಸಿದ್ದಾರೆ.

ಮೋದಿ ಬದಲು ಸಿಎಂ ಫೋಟೋ ಇರುವ ಲಸಿಕೆ ಪ್ರಮಾಣಪತ್ರ ನೀಡಲು ಆರಂಭಿಸಿದ ಛತ್ತೀಸ್‌ಗಢ ಸರ್ಕಾರಮೋದಿ ಬದಲು ಸಿಎಂ ಫೋಟೋ ಇರುವ ಲಸಿಕೆ ಪ್ರಮಾಣಪತ್ರ ನೀಡಲು ಆರಂಭಿಸಿದ ಛತ್ತೀಸ್‌ಗಢ ಸರ್ಕಾರ

ಎನ್‌ಡಿಎ ನಾಯಕರಿಗೆ ಮುಜುಗರ

ಎನ್‌ಡಿಎ ನಾಯಕರಿಗೆ ಮುಜುಗರ

ಇನ್ನು ಈ ಟ್ವೀಟ್‌ ಎನ್‌ಡಿಎ ನಾಯಕರಿಗೆ ಮುಜುಗರವನ್ನುಂಟುಮಾಡಿದೆ. ಬಿಜೆಪಿಯ ರಾಜ್ಯ ವಕ್ತಾರ ಪ್ರೇಮ್ ರಂಜನ್ ಪಟೇಲ್, ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿ ಪ್ರಧಾನ ಮಂತ್ರಿಯ ಫೋಟೋಕ್ಕೆ ಯಾರಾದರೂ ಆಕ್ಷೇಪಣೆ ವ್ಯಕ್ತಪಡಿಸಿದರೆ ಅವರು, ಪಿಎಂ ಮೋದಿ ಮೋದಿಯವರ ನಾಯಕತ್ವದಿಂದಾಗಿ ಕೋವಿಡ್‌ ಲಸಿಕೆಗಳು ಭಾರತದಲ್ಲಿದೆ ಎಂದು ತಿಳಿದು ಕೊಳ್ಳಬೇಕು. ಮೋದಿ ಫೋಟೋ ಆತ್ಮವಿಶ್ವಾಸದ ಪ್ರತೀಕ ಎಂದು ಹೇಳಿದ್ದಾರೆ.

ರಿಜ್ವಾನ್‌ ತಿರುಗೇಟು

ರಿಜ್ವಾನ್‌ ತಿರುಗೇಟು

ಪ್ರೇಮ್ ರಂಜನ್ ಪಟೇಲ್ ಟ್ವೀಟ್‌ಗೆ ತಿರುಗೇಟು ನೀಡಿದ ರಿಜ್ವಾನ್, ಪ್ರಧಾನ ಮಂತ್ರಿಯ ಫೋಟೋ ಆತ್ಮವಿಶ್ವಾಸ ನೀಡುವುದಾದರೆ, ನಮ್ಮ ದೇಶದಲ್ಲಿ ಶೇಕಡಾ ಒಂದು ಭಾಗದಷ್ಟು ದಲಿತರು ಕೂಡ ಡೋಸ್‌ ತೆಗೆದುಕೊಂಡಿಲ್ಲ ಎಂಬುದನ್ನು ತಿಳಿದು ಕೊಳ್ಳಬೇಕು. ನಮ್ಮ ದೇಶದ ರಾಷ್ಟ್ರಪತಿ ದಲಿತರಾಗಿರುವುದರಿಂದ, ಪ್ರಮಾಣಪತ್ರಗಳಲ್ಲಿ ಅವರ ಫೋಟೋವನ್ನೂ ಹಾಕುವುದು ದಲಿತರಿಗೆ ಇನ್ನೂ ಅಧಿಕ ವಿಶ್ವಾಸವನ್ನು ತುಂಬುತ್ತವೆ.

ಕೊರೊನಾ ನಿಯಂತ್ರಣ ವಿಚಾರದಲ್ಲಿ ಕಾಶಿ ಮಾದರಿಯನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿಕೊರೊನಾ ನಿಯಂತ್ರಣ ವಿಚಾರದಲ್ಲಿ ಕಾಶಿ ಮಾದರಿಯನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ವಿಪಕ್ಷಗಳಿಂದ ವಿರೋಧ

ವಿಪಕ್ಷಗಳಿಂದ ವಿರೋಧ

ಈ ಹಿಂದೆ ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಹಾಕುವುದನ್ನು ಪ್ರಶ್ನಿಸಿದ್ದವು. ಹಾಗೆಯೇ ಚಂಡೀಗಢದಲ್ಲಿ ಪ್ರಧಾನಿ ಮೋದಿ ಬದಲಿಗೆ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಫೋಟೋ ಹಾಕಲು ಆರಂಭಿಸಿದ್ದಾರೆ. ದೇಶಾದ್ಯಂತ ಲಸಿಕೆ ಹಾಕಲು ಕೇಂದ್ರದ ಕೋವಿನ್ ಪೋರ್ಟಲ್ ಅನ್ನು ಬಳಸಲಾಗುತ್ತಿದೆ. ಆದರೆ ಛತ್ತೀಸ್ ಗಢ ಸರ್ಕಾರವು 18-44 ವರ್ಷ ವಯಸ್ಸಿನವರಿಗೆ ಲಸಿಕೆ ನೋಂದಣಿಗೆ ಕೋವಿನ್ ಬದಲಿಗೆ ತನ್ನದೇ ಆದ ಲಸಿಕೆ ವೆಬ್ ಸೈಟ್ ಸಿಜಿಟಿಇಇಕೆಎ ಅನ್ನು ಪ್ರಾರಂಭಿಸಿದೆ.ಈ ಪೋರ್ಟಲ್ ಮೂಲಕ ಲಸಿಕೆಗೆ ನೋಂದಣಿ ಮಾಡಿದವರಿಗೆ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಫೋಟೋ ಇರುವ ಪ್ರಮಾಣಪತ್ರ ನೀಡಲಾಗುತ್ತಿದೆ. ಆದರೆ ಇದು ಬಿಜೆಪಿಯ ಅಸಮಾಧಾನಕ್ಕೆ ಕಾರಣವಾಗಿದೆ.

ಏತನ್ಮಧ್ಯೆ, ಬಿಹಾರ ಸರ್ಕಾರ ಮೇ 26 ರಿಂದ ಜೂನ್ 1 ರವರೆಗೆ ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಿಸಿದೆ.

English summary
Bihar NDA ally questions use of PM photographs on vaccination certificates and said his photographs should also put on death certificates of COVID-19 victims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X