ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದಲ್ಲಿ ಕೋವಿಡ್‌ ಮರಣ ಅಂಕಿಅಂಶ ಪರಿಷ್ಕರಣೆ: 9,000 ಕ್ಕೂ ಅಧಿಕ ಸಾವು ದೃಢ

|
Google Oneindia Kannada News

ಪಾಟ್ನಾ, ಜೂ. 10: ಬಿಹಾರದಲ್ಲಿ ಆರೋಗ್ಯ ಇಲಾಖೆಯು ಕೋವಿಡ್‌ ಸಾವಿನ ಸಂಖ್ಯೆಯನ್ನು ಬುಧವಾರ ಪರಿಷ್ಕರಿಸಿದ್ದು, ರಾಜ್ಯದಲ್ಲಿ ಸಾಂಕ್ರಾಮಿಕ ರೋಗದಿಂದ ಉಂಟಾದ ಒಟ್ಟು ಸಾವುನೋವುಗಳ ಸಂಖ್ಯೆ 9,429 ಕ್ಕೆ ಏರಿಕೆಯಾಗಿದೆ.

ನಿನ್ನೆಯವರೆಗೂ ಸರ್ಕಾರದ ಪ್ರಕಾರ ಕೋವಿಡ್‌ ಸಾವಿನ ಅಂಕಿ ಅಂಶವು 5,500 ಕ್ಕಿಂತ ಕಡಿಮೆಯಾಗಿತ್ತು. ಆದರೆ ಆರೋಗ್ಯ ಇಲಾಖೆಯು ಈ ಸಾವು ಪ್ರಮಾಣವನ್ನು ಪರಿಷ್ಕರಿಸಿದ ಬಳಿಕ ಹೆಚ್ಚಿಗೆ 3,951 ಸಾವು ಸೇರ್ಪಡೆಯಾಗಿದೆ. ಆದರೆ ಎಲ್ಲಾ 38 ಜಿಲ್ಲೆಗಳಿಗೆ ಸೇರಿರುವ ಈ ಸಾವುಗಳು ಯಾವಾಗ ಸಂಭವಿಸಿದೆ ಎಂಬುದನ್ನು ಇಲಾಖೆ ಸ್ಪಷ್ಟಪಡಿಸಿಲ್ಲ.

ಕೋವಿಡ್‌ನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಬಿಹಾರ ಸರ್ಕಾರದಿಂದ 4 ಲಕ್ಷ ರೂ. ಪರಿಹಾರಕೋವಿಡ್‌ನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಬಿಹಾರ ಸರ್ಕಾರದಿಂದ 4 ಲಕ್ಷ ರೂ. ಪರಿಹಾರ

ಹೊಸ ಅಂಕಿ ಅಂಶಗಳ ಪ್ರಕಾರ, ಎರಡನೇ ಅಲೆಯ ಸಂದರ್ಭ 8,000 ದಷ್ಟು ಕೊರೊನಾ ಸೋಂಕಿತರು ಸಾವನಪ್ಪಿದ್ದಾರೆ. ಈ ಅಂಕಿ ಅಂಶದ ಪ್ರಕಾರ ಏಪ್ರಿಲ್‌ನಿಂದ ಸಾವುಗಳ ಪ್ರಮಾಣವು ಆರು ಪಟ್ಟು ಹೆಚ್ಚಾಗಿದೆ.

Bihar Health Department Revises COVID-19 Fatalities, Confirms More Than 9,000 Deaths

ರಾಜ್ಯದ ಪಾಟ್ನಾ ಜಿಲ್ಲೆಯಲ್ಲಿ ಏಕಾಏಕಿ ಕೊರೊನಾ ಸೋಂಕು ಪ್ರಕರಣಗಳು ಅಧಿಕವಾಗಿದ್ದು ಜಿಲ್ಲೆಯಲ್ಲೇ ಒಟ್ಟು 2,303 ಸಾವುಗಳು ಸಂಭವಿಸಿವೆ. ಮುಜಾಫರ್ಪುರ್ 609 ಮಂದಿ ಸಾವನ್ನಪ್ಪಿದ್ದು ಈ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಪರಿಷ್ಕರಣೆಯ ಬಳಿಕ ಪಾಟ್ನಾದಲ್ಲಿ 1,070 "ಹೆಚ್ಚುವರಿ ಸಾವುಗಳು ವರದಿಯಾಗಿದೆ". ಇನ್ನು ಬೆಗುಸರಾಯ್ (316), ಮುಜಾಫರ್ಪುರ್ 314, ಪೂರ್ವ ಚಂಪಾರನ್ 391, ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್‌ರ ಊರಾದ ನಳಂದಾದಲ್ಲಿ 222 ಸಾವು ಪ್ರಕರಣಗಳು ಹೊಸದಾಗಿ ದಾಖಲಾಗಿದೆ.

ರಾಜ್ಯದಲ್ಲಿ ಈವರೆಗೆ ಒಟ್ಟು 7,15,179 ಜನರು ಸೋಂಕಿಗೆ ಒಳಗಾಗಿದ್ದಾರೆ. ಕಳೆದ ಎರಡು ತಿಂಗಳುಗಳಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನರು ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದೆ. ಇನ್ನು ಕೊರೊನಾದಿಂದ ಚೇತರಿಸಕೊಂಡವರ ಸಂಖ್ಯೆಯು ನಿನ್ನೆಯವರೆಗೂ 7,01,234 ಆಗಿದ್ದು ಪರಿಷ್ಕರಣೆಯ ಬಳಿಕ 6,98,397 ಕ್ಕೆ ಕುಸಿದಿದೆ. ಈ ಮೂಲಕ ಶೇ 98.70 ರಷ್ಟಿದ್ದ ಚೇತರಿಕೆ ಪ್ರಮಾಣ ಪರಿಷ್ಕರಣೆಯ ನಂತರ ಶೇ 97.65 ಕ್ಕೆ ಇಳಿದಿದೆ.

ದೇಶದ 50 ಜಿಲ್ಲೆಗಳಲ್ಲಿ ಶೇ.100 ರಷ್ಟು ಕೊರೊನಾ ಉಲ್ಬಣದೇಶದ 50 ಜಿಲ್ಲೆಗಳಲ್ಲಿ ಶೇ.100 ರಷ್ಟು ಕೊರೊನಾ ಉಲ್ಬಣ

ಇನ್ನು ಒಂದು ತಿಂಗಳ ಲಾಕ್‌ಡೌನ್‌ ರಾಜ್ಯದಲ್ಲಿ ಉತ್ತಮವಾಗಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಪ್ರತಿದಿನ ಕೇವಲ 20 ಸಾವುಗಳು ಮತ್ತು 589 ಹೊಸ ಪ್ರಕರಣಗಳು ದಾಖಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಪ್ರಸ್ತುತ ರಾಜ್ಯದಲ್ಲಿ 7,353 ಸಕ್ರಿಯ ಕೊರೊನಾವೈರಸ್ ಪ್ರಕರಣಗಳಿವೆ.

ಕೊರೊನಾ ಲಸಿಕೆ ಅಭಿಯಾನದ ವೇಗವು ಕುಸಿದಿದ್ದು ಇದಕ್ಕೆ ಲಸಿಕೆ ಲಭ್ಯವಾಗದಿರುವುದು ಕಾರಣವಾಗಿತ್ತು. ಆದರೆ ಇನ್ನು ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಲಸಿಕೆ ಸರಬರಾಜು ಆಗುವ ಕಾರಣದಿಂದಾಗಿ ಲಸಿಕೆ ವೇಗ ಹೆಚ್ಚಾಗುವ ಸಾಧ್ಯತೆಯಿದೆ. ರಾಜ್ಯದಲ್ಲಿ ಒಟ್ಟು ಈವರೆಗೆ 1.14 ಕೋಟಿ ಜನರಲ್ಲಿ 1.21 ಲಕ್ಷಕ್ಕೂ ಹೆಚ್ಚು ಜನರು ಲಸಿಕೆ ಪಡೆದಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
According to Bihar Health Department, which had till the previous day stated the number of deaths to be under 5,500, as many as 3,951 deaths have been added to the number of deaths after verification.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X