ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಸಚಿವಾಲಯದಲ್ಲಿ ಜೀನ್ಸ್, ಟೀ ಶರ್ಟ್ ಧರಿಸುವುದು ನಿಷೇಧ!

|
Google Oneindia Kannada News

ಪಾಟ್ನಾ, ಆಗಸ್ಟ್ 30: ಬಿಹಾರದ ಸಚಿವಾಲಯದ ಸಿಬ್ಬಂದಿಗಳು ಇನ್ಮುಂದೆ ಜೀನ್ಸ್​ ಮತ್ತು ಟೀ ಶರ್ಟ್​ ಧರಿಸಿ ಕಚೇರಿ ಬರುವಂತಿಲ್ಲ. ಹೀಗೊಂದು ನಿಷೇಧ ಹೇರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದ ಆದೇಶ ಹೊರಡಿಸಿದೆ.

ಜೀನ್ಸ್ ಹಾಗೂ ಟೀ ಶರ್ಟ್ ಸಭ್ಯ, ಸರಳ ಉಡುಪುಗಳ ಪಟ್ಟಿಯಲ್ಲಿಲ್ಲ ಹೀಗಾಗಿ, ಸಭ್ಯ ಬಟ್ಟೆಗಳನ್ನು ಮಾತ್ರ ಧರಿಸಿ ಬರುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಕಚೇರಿ ಸಿಬ್ಬಂದಿ ಅಸಭ್ಯ ವಸ್ತ್ರ ಧರಿಸಿ ಬರುವುದರಿಂದ ಸಾರ್ವಜನಿಕರು ಸಿಬ್ಬಂದಿಯನ್ನು ಅಗೌರವದಿಂದ ಕಾಣುವಂತಾಗಿದೆ. ಹೀಗಾಗಿ, ಇಂಥ ಆದೇಶ ಹೊರಡಿಸುವುದು ಅನಿವಾರ್ಯವಾಗಿದೆ ಎಂದು ಸರ್ಕಾರದ ಕಾರ್ಯದರ್ಶಿ ಆದೇಶವನ್ನು ಸಮರ್ಥಿಸಿಕೊಂಡಿದ್ದಾರೆ.

Recommended Video

ನರ್ಸರಿ ಮಕ್ಕಳಿಗೆ ಬಂತು ಹೊಸ ಪದ್ಯ..! | Oneindia kannada
Bihar Govt bans wearing jeans and t-shirt in secretariat

ವಸ್ತ್ರ ಸಂಹಿತೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಹಾರ ರಾಜ್ಯ ಹೆಚ್ಚುವರಿ ಕಾರ್ಯದರ್ಶಿ ಮಹದೇವ್ ಪ್ರಸಾದ್, "ಕಚೇರಿ ಸಿಬ್ಬಂದಿ ಸಂಸ್ಕೃತಿ-ಸಂಪ್ರದಾಯಕ್ಕೆ ಧಕ್ಕೆ ಬರುವಂಥ ಉಡುಪುಗಳನ್ನು ಧರಿಸಿಕೊಂಡು ಬರುವುದು ಗಮನಕ್ಕೆ ಬಂದಿದೆ. ಹೀಗಾಗಿ, ಕಚೇರಿಯಲ್ಲಿ ಸಭ್ಯ ವಾತಾವರಣ ಉಳಿಸಿಕೊಳ್ಳಲು ಜೀನ್ಸ್​, ಟೀಶರ್ಟ್​ ಧರಿಸಿ ಬರುವುದನ್ನು ನಿಷೇಧಿಸಿ, ಸಭ್ಯ ಹಾಗೂ ಸರಳವಾದ ಉಡುಪು ಧರಿಸಿ ಬರುವುದನ್ನು ಕಡ್ಡಾಯಗೊಳಿಸಗಿದೆ ಎಂದಿದ್ದಾರೆ.

English summary
The Bihar Government has banned wearing jeans and t-shirts in the secretariat for all employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X