• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರದಲ್ಲಿ ಗಮನ ಸೆಳೆದ ಟಾಪ್-5 ವಿಧಾನಸಭಾ ಕ್ಷೇತ್ರಗಳು!

|

ಪಾಟ್ನಾ, ಅಕ್ಟೋಬರ್.29: ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಪೈಕಿ ಬುಧವಾರ ಮೊದಲ ಹಂತದಲ್ಲಿ 71 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಸಲಾಗಿದೆ. ಮೊದಲ ಹಂತದ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಸುಮಾರು 2.14 ಕೋಟಿ ಮತದಾರರಿದ್ದಾರೆ. ಈ ಪೈಕಿ 1.01 ಕೋಟಿ ಮಹಿಳೆಯರಾಗಿದ್ದು, 599 ತೃತೀಯ ಲಿಂಗದವರು ಸೇರಿದ್ದಾರೆ ಎಂದು ಚುನಾವಣಾ ಆಯೋಗವು ತಿಳಿಸಿದೆ.

71 ವಿಧಾನಸಭಾ ಕ್ಷೇತ್ರಗಳಲ್ಲಿ 952 ಪುರುಷ ಮತ್ತು 114 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸುಮಾರು 2 ಕೋಟಿಗೂ ಅಧಿಕ ಮತದಾರರು ಒಟ್ಟು 1066 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. 71 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಯು 35 ಅಭ್ಯರ್ಥಿಗಳನ್ನು ಹಾಗೂ ಮಿತ್ರಪಕ್ಷ ಬಿಜೆಪಿಯು 29 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಬಿಜೆಪಿ ಚಿಹ್ನೆಯುಳ್ಳ ಮಾಸ್ಕ್ ತೊಟ್ಟ ಸಚಿವರ ವಿರುದ್ಧ ಕೇಸ್!

ಆರ್ ಜೆಡಿಯ 42 ಅಭ್ಯರ್ಥಿಗಳು ಕಣದಲ್ಲಿದ್ದರೆ ಕಾಂಗ್ರೆಸ್ 20 ಕಡೆಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಅದೃಷ್ಟ ಪರೀಕ್ಷೆಗೆ ಇಳಿಸಿದೆ. ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷವು ಜೆಡಿಯು ಅಭ್ಯರ್ಥಿಗಳು ಸ್ಪರ್ಧಿಸಿರುವ 35 ಕ್ಷೇತ್ರಗಳೂ ಸೇರಿದಂತೆ ಒಟ್ಟು 41 ಕಡೆಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ಬಾರಿ ಬಿಹಾರ ವಿಧಾನಸಭಾ ಚುನಾವಣೆಯ 71 ಕ್ಷೇತ್ರಗಳಲ್ಲೇ ಅತ್ಯಂತ ಗಮನ ಸೆಳೆದ ಮತ್ತು ಸಾಕಷ್ಟು ಸುದ್ದಿ ಆಗಿರುವ ಟಾಪ್-5 ಕ್ಷೇತ್ರಗಳು ಮತ್ತು ಅದರ ವಿಶೇಷತೆ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಗಯಾ ಕ್ಷೇತ್ರ

ಗಯಾ ಕ್ಷೇತ್ರ

ಕಳೆದ 30 ವರ್ಷಗಳಿಂದ ಬಿಜೆಪಿಯ ಭದ್ರಕೋಟೆ ಎನಿಸಿರುವ ಗಯಾ ವಿಧಾನಸಭಾ ಕ್ಷೇತ್ರವನ್ನು ಈವರೆಗೂ ಯಾರೊಬ್ಬರೂ ಬೇಧಿಸುವುದಕ್ಕೆ ಆಗಿಲ್ಲ. ಬಿಜೆಪಿ ಶಾಸಕ ಪ್ರೇಮ್ ಕುಮಾರ್ ಈ ಕ್ಷೇತ್ರದಲ್ಲಿ ನಿರಂತರವಾಗಿ ಆರು ಬಾರಿ ಗೆದ್ದು ಶಾಸಕರಾಗಿದ್ದಾರೆ. ಪ್ರತಿಬಾರಿ ಎನ್ ಡಿಎ ಸರ್ಕಾರವು ಅಧಿಕಾರಕ್ಕೆ ಬಂದ ವೇಳೆಯಲ್ಲಿ ಪ್ರೇಮಕುಮಾರ್ ಸಂಪುಟ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಿಜೆಪಿಯ ಈ ಭದ್ರಕೋಟೆಯನ್ನು ಗೆದ್ದುಕೊಳ್ಳಲು ಪ್ರತಿಪಕ್ಷಗಳು ರಣತಂತ್ರವನ್ನು ಹೆಣೆದಿವೆ. ಇದರ ನಡುವೆ ಬುಧವಾರ ಕೂಡಾ ಸೈಕಲ್ ಸವಾರಿ ಮೂಲಕ ವಿಭಿನ್ನ ರೀತಿಯಲ್ಲಿ ಮತಗಟ್ಟೆಗೆ ತೆರಳಿದ ಶಾಸಕ ಪ್ರೇಮಕುಮಾರ್ ತಮ್ಮ ಹಕ್ಕು ಚಲಾಯಿಸಿದ್ದರು. ಆದರೆ ಈ ವೇಳೆ ಬಿಜೆಪಿ ಚಿಹ್ನೆಯುಳ್ಳ ಮಾಸ್ಕ್ ಧರಿಸಿದ ಹಿನ್ನೆಲೆ ಅವರ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಪ್ರಕರಣವನ್ನು ದಾಖಸಿಸಿಕೊಳ್ಳಲಾಗಿತ್ತು.

ದಿನಾರ್ ಕ್ಷೇತ್ರ

ದಿನಾರ್ ಕ್ಷೇತ್ರ

ಬಿಹಾರದ ದಿನಾರ್ ವಿಧಾನಸಭಾ ಕ್ಷೇತ್ರವು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಜೈಕುಮಾರ್ ಸಿಂಗ್ ಅವರ ಸ್ವಕ್ಷೇತ್ರವಾಗಿದೆ. ಎರಡು ಬಾರಿ ಇದೇ ಕ್ಷೇತ್ರದಲ್ಲಿ ಜೆಡಿಯು ಅಭ್ಯರ್ಥಿಯಾಗಿ ಸ್ಪರ್ಧಿಸಿ ದಿಗ್ವಿಜಯ ಸಾಧಿಸಿರುವ ಅವರು ಹ್ಯಾಟ್ರಿಕ್ ಗೆಲುವು ದಾಖಲಿಸುವ ನಿರೀಕ್ಷೆಯಲ್ಲಿದ್ದಾರೆ. ಬಿಜೆಪಿಯ ಬಂಡಾಯ ಅಭ್ಯರ್ಥಿ ಆಗಿರುವ ರಾಜೇಂದ್ರ ಸಿಂಗ್ ಈ ಬಾರಿ ಲೋಕಜನಶಕ್ತಿ ಪಕ್ಷದಿಂದ ಪ್ರಬಲ ಎದುರಾಳಿಯಾಗಿ ಕಣದಲ್ಲಿದ್ದಾರೆ. ಕಳೆದ ಬಾರಿ ಇದೇ ರಾಜೇಂದ್ರ ಸಿಂಗ್ ಅವರು ದಿನಾರ್ ಕ್ಷೇತ್ರದಲ್ಲಿಯೇ ಸ್ಪರ್ಧಿಸಿದ್ದು, ಕೇವಲ 2600 ಮತಗಳಿಂದ ಸೋಲು ಕಂಡಿದ್ದರು.

ಕಹಾಲ್ ಗೋನ್ ಕ್ಷೇತ್ರ

ಕಹಾಲ್ ಗೋನ್ ಕ್ಷೇತ್ರ

ಕಾಂಗ್ರೆಸ್ ಭದ್ರಕೋಟೆ ಎನಿಸಿರುವ ಕಹಾಲ್ ಗೋನ್ ವಿಧಾನಸಭಾ ಕ್ಷೇತ್ರದಲ್ಲಿ 12 ಬಾರಿ ಕಾಂಗ್ರೆಸ್ ಶಾಸಕರು ಜಯಭೇರಿ ಬಾರಿಸಿದ್ದಾರೆ. ಬಿಹಾರಿ ಕಾಂಗ್ರೆಸ್ ಘಟಕದ ಮುಖ್ಯಸ್ಥ ಸದಾನಂದ ಸಿಂಗ್ ಅವರು 1967 ರಿಂದ 2015ರವರೆಗೂ ನಿರಂತರವಾಗಿ 9 ಬಾರಿ ಶಾಸಕರಾಗಿ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. 2015ರಲ್ಲಿ ತಮ್ಮ ಪ್ರತಿಸ್ಪರ್ಧಿ ಆಗಿದ್ದ ಲೋಕಜನಶಕ್ತಿ ಪಕ್ಷದ ಅಭ್ಯರ್ಥಿ ನೀರಜ್ ಕುಮಾರ್ ಅವರ ವಿರುದ್ಧ ಕೇವಲ 20000 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು. ಕಳೆದ 1977ರಿಂದಲೂ ಕಾಂಗ್ರೆಸ್ಸಿನ ಸದಾನಂದ ಸಿಂಗ್ ಈ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದಾರೆ.

ಮೋಕಾಮ್ ಕ್ಷೇತ್ರ

ಮೋಕಾಮ್ ಕ್ಷೇತ್ರ

ಈ ಮೋಕಾಮ್ ಕ್ಷೇತ್ರದಲ್ಲಿ ಸ್ಥಳೀಯ ಶಕ್ತಿಯುತ ಮತ್ತು ಪ್ರಬಲ ನಾಯಕರೇ ಶಾಸಕರಾಗಿ ಆಯ್ಕೆ ಆಗುತ್ತಿದ್ದಾರೆ. ಕಳದ 2005 ಮತ್ತು 2010ರಲ್ಲಿ ಜೆಡಿಯು ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಶಾಸಕ ಅನಂತ್ ಸಿಂಗ್ ಈ ಬಾರಿ ಆರ್ ಜೆಡಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 2015ರಲ್ಲಿ ಜೆಡಿಯು ಪಕ್ಷವು ಟಿಕೆಟ್ ನೀಡುವುದಕ್ಕೆ ನಿರಾಕರಿಸಿದ ಹಿನ್ನೆಲೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಭೂಮಿಹಾರ್ ಮತ್ತು ಯಾದವ್ ಸಮುದಾಯವೇ ಹೆಚ್ಚಾಗಿರುವ ಕ್ಷೇತ್ರದಲ್ಲಿ ಸ್ಥಳೀಯವಾಗಿ ಪ್ರಬಲವಾಗಿರುವ ವ್ಯಕ್ತಿಗಳೇ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಳೆೆದ 90ರ ದಶಕದಲ್ಲಿ ಇದೇ ಶಾಸಕ ಅನಂತ್ ಸಿಂಗ್ ಅವರ ಸಹೋದರ ದಿಲೀಪ್ ಅವರು ಜೆಡಿಯು ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಲಖಿಸರಾಯಿ ಕ್ಷೇತ್ರ

ಲಖಿಸರಾಯಿ ಕ್ಷೇತ್ರ

ಲಖಿಸರಾಯಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಎರಡು ಬಾರಿ ಇದೇ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿರುವ ಕಾರ್ಮಿಕ ಸಂಪನ್ಮೂಲ ಸಚಿವ ವಿಜಯ್ ಕುಮಾರ್ ಸಿನ್ಹಾ ಇಲ್ಲಿಯ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

English summary
Bihar Assembly Election 2020: Bihar First Phase Voting For Total 71 Constituency. Here Top 5 Constituency And History.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X