ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಚುನಾವಣೆ; 71 ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರೆ

|
Google Oneindia Kannada News

ಪಾಟ್ನಾ, ಅಕ್ಟೋಬರ್ 26: ಮೊದಲ ಹಂತದ ಬಿಹಾರ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ತೆರೆ ಬಿದ್ದಿದೆ. ಅಕ್ಟೋಬರ್ 28ರಂದು 71 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ.

ಸೋಮವಾರ 71 ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರಕ್ಕೆ ತೆರೆ ಬಿದ್ದಿದೆ. ಒಟ್ಟು ಮೂರು ಹಂತದಲ್ಲಿ ಮತದಾನ ನಡೆಯುತ್ತಿದ್ದು, ಮೊದಲ ಹಂತದ ಮತದಾನ ಅಕ್ಟೋಬರ್ 28ರಂದು ನಡೆಯಲಿದೆ. ನವೆಂಬರ್ 3 ಮತ್ತು 7ರಂದು ಉಳಿದ ಎರಡು ಹಂತದ ಮತದಾನ ನಡೆಯಲಿದೆ.

ಬಿಹಾರ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ಹತ್ಯೆ, ಇಬ್ಬರ ಬಂಧನ ಬಿಹಾರ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ಹತ್ಯೆ, ಇಬ್ಬರ ಬಂಧನ

ಬಿಹಾರ ವಿಧಾನಸಭೆ ಚುನಾವಣೆಯನ್ನು ದೇಶವೇ ಕುತೂಹಲದಿಂದ ಎದುರು ನೋಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಾಜ್ಯದಲ್ಲಿ 3 ಸಮಾವೇಶ ಉದ್ದೇಶಿಸಿ ಮಾತನಾಡಿ ಪ್ರಚಾರ ನಡೆಸಿದ್ದರು.

ಬಿಹಾರ ಚುನಾವಣೆ ಪ್ರಣಾಳಿಕೆ: 10 ಲಕ್ಷ ಉದ್ಯೋಗದ ಭರವಸೆ ನೀಡಿದ ಆರ್‌ಜೆಡಿಬಿಹಾರ ಚುನಾವಣೆ ಪ್ರಣಾಳಿಕೆ: 10 ಲಕ್ಷ ಉದ್ಯೋಗದ ಭರವಸೆ ನೀಡಿದ ಆರ್‌ಜೆಡಿ

Bihar First Phase Of Polling Election As Campaign Ends

ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ ಏಕಾಂಗಿಯಾಗಿ ಚುನಾವಣೆ ಎದುರಿಸುವುದಾಗಿ ಘೋಷಣೆ ಮಾಡಿದ್ದು ಬಿರುಸಿನಿಂದ ಪ್ರಚಾರ ಮಾಡಿದೆ. ಬಿಜೆಪಿ ಜೊತೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವ ಆಯ್ಕೆಯನ್ನು ಪಕ್ಷ ತೆರೆದಿಟ್ಟಿದೆ.

ಬಿಹಾರ ಚುನಾವಣಾ ಪ್ರಚಾರ; ಹೈಕೋರ್ಟ್‌ಗೆ ಹೋದ ಹಾರ್ದಿಕ್ ಪಟೇಲ್ ಬಿಹಾರ ಚುನಾವಣಾ ಪ್ರಚಾರ; ಹೈಕೋರ್ಟ್‌ಗೆ ಹೋದ ಹಾರ್ದಿಕ್ ಪಟೇಲ್

ಲಾಲೂ ಪ್ರಸಾದ್ ನೇತೃತ್ವದ ಆರ್‌ಜೆಡಿ ಮಹಾಘಟಬಂಧನ್ ಮಾಡಿಕೊಂಡಿದೆ. ಕಾಂಗ್ರೆಸ್ ಮತ್ತು ಎಡಪಕ್ಷಗಳು ಇದರಲ್ಲಿ ಸೇರಿಕೊಂಡಿದ್ದು, ಸೀಟು ಹಂಚಿಕೆ ಮಾಡಿಕೊಂಡಿವೆ. ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಜೆಡಿಯು ಎನ್‌ಡಿಎ ಮೈತ್ರಿಕೂಟದಲ್ಲಿದೆ. ಬಿಜೆಪಿ ಮತ್ತು ಜೆಡಿಯು ಸೀಟು ಹಂಚಿಕೆ ಮಾಡಿಕೊಂಡು ಕಣಕ್ಕಿಳಿದಿವೆ.

ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ ಏಕಾಂಗಿಯಾಗಿ ಚುನಾವಣೆ ಎದುರಿಸುವುದಾಗಿ ಘೋಷಣೆ ಮಾಡಿದ್ದು ಬಿರುಸಿನಿಂದ ಪ್ರಚಾರ ಮಾಡಿದೆ. ಬಿಜೆಪಿ ಜೊತೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವ ಆಯ್ಕೆಯನ್ನು ಪಕ್ಷ ತೆರೆದಿಟ್ಟಿದೆ.

ಲಾಲೂ ಪ್ರಸಾದ್ ನೇತೃತ್ವದ ಆರ್‌ಜೆಡಿ ಮಹಾಘಟಬಂಧನ್ ಮಾಡಿಕೊಂಡಿದೆ. ಕಾಂಗ್ರೆಸ್ ಮತ್ತು ಎಡಪಕ್ಷಗಳು ಇದರಲ್ಲಿ ಸೇರಿಕೊಂಡಿದ್ದು, ಸೀಟು ಹಂಚಿಕೆ ಮಾಡಿಕೊಂಡಿವೆ. ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಜೆಡಿಯು ಎನ್‌ಡಿಎ ಮೈತ್ರಿಕೂಟದಲ್ಲಿದೆ. ಬಿಜೆಪಿ ಮತ್ತು ಜೆಡಿಯು ಸೀಟು ಹಂಚಿಕೆ ಮಾಡಿಕೊಂಡು ಕಣಕ್ಕಿಳಿದಿವೆ.

ಅಕ್ಟೋಬರ್ 28ರ ಬುಧವಾರ 71 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. 1066 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ 114 ಮಹಿಳೆಯರು. ನಿತೀಶ್ ಕುಮಾರ್ ಸರ್ಕಾರದಲ್ಲಿನ 6 ಸಚಿವರ ಭವಿಷ್ಯ ಮೊದಲ ಹಂತದಲ್ಲಿ ನಿರ್ಧಾರವಾಗಲಿದೆ.

6 ಜಿಲ್ಲೆಗಳ 71 ಸೀಟುಗಳಿಗೆ ಬುಧವಾರ ಚುನಾವಣೆ ನಡೆದರೂ ಫಲಿತಾಂಶಕ್ಕಾಗಿ ನವೆಂಬರ್ 10ರ ತನಕ ಕಾಯಬೇಕು. ಆರ್‌ಜೆಡಿ 71 ಕ್ಷೇತ್ರಗಳ ಪೈಕಿ 42ರಲ್ಲಿ ಕಣದಲ್ಲಿದೆ. ಜೆಡಿಯು 41, ಬಿಜೆಪಿ 29, ಕಾಂಗ್ರೆಸ್ 21, ಎಲ್‌ಜೆಪಿ 41 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

English summary
Election campaign for 71 assembly segments of Bihar end on October 26, 2020. Election will be held October 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X