ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಲಸೆ ಕಾರ್ಮಿಕರ ಅಭಿಮತ ತೇಜಸ್ವಿ ಯಾದವ್ ಪರ

|
Google Oneindia Kannada News

ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಸಲಾಗಿದ್ದು, ನವೆಂಬರ್ 7 ರಂದು ಮೂರನೇ ಹಾಗೂ ಅಂತಿಮ ಹಂತದ ಮತದಾನ ಮುಕ್ತಾಯವಾಗಿದೆ. ನವೆಂಬರ್ 10ರಂದು ಅಂತಿಮ ಫಲಿತಾಂಶ ಹೊರಬರಲಿದೆ. ವಲಸೆ ಕಾರ್ಮಿಕರ ಅಭಿಮತ ಯಾರ ಪರ ಇದೆ ಎಂಬುದರ ಬಗ್ಗೆ ಇಂಡಿಯಾ ಟುಡೇ ಹಾಗೂ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ವರದಿ ಇಲ್ಲಿದೆ...

Recommended Video

Bihar Election 2020 : ಚುನಾವಣೋತ್ತರ ಸಮೀಕ್ಷೆ ಏನು ಹೇಳುತ್ತಿದೆ | Oneindia kannada

243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ ಅವಧಿಯು ನವೆಂಬರ್ 29 ರಂದು ಕೊನೆಗೊಳ್ಳಲಿದೆ. ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಸಲಾಯಿತು. ಇಂಡಿಯಾ ಟುಡೇ ಆಕ್ಸಿಸ್ ಮೈ ಇಂಡಿಯಾ ಹಾಗೂ ಮತದಾನ ಪೂರ್ವ ವರದಿಯನ್ನು ಲೋಕನೀತಿ ಸಿಎಸ್ ಡಿಎಸ್ ಜೊತೆ 243 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಲಾಗಿತ್ತು.

ಇಂಡಿಯಾ ಟುಡೇ EXIT poll:ಬಿಹಾರ ಅಭಿವೃದ್ಧಿ, ಉದ್ಯೋಗವೇ ಮುಖ್ಯಇಂಡಿಯಾ ಟುಡೇ EXIT poll:ಬಿಹಾರ ಅಭಿವೃದ್ಧಿ, ಉದ್ಯೋಗವೇ ಮುಖ್ಯ

ಕೊರೊನಾವೈರಸ್ ಸಂಕಷ್ಟದಲ್ಲಿ ಬಳಲಿದ ವಲಸೆ ಕಾರ್ಮಿಕರು ತಮ್ಮ ನೋವನ್ನು ಆಲಿಸುವುದರಲ್ಲಿ ಆಡಳಿತಾರೂಢ ಬಿಜೆಪಿ-ಜೆಡಿಯು ಸರ್ಕಾರ ವಿಫಲವಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ನಿರುದ್ಯೋಗ ಚುನಾವಣಾ ಮುಖ್ಯ ವಿಷ್ಯ ಎಂದು 20% ಮಂದಿ ಹೇಳಿದರೆ, ಎಕ್ಸಿಟ್ ಪೋಲ್ ನಲ್ಲಿ ಈ ಪ್ರಮಾಣ 30%ಕ್ಕೇರಿದೆ. ವಲಸೆ ಕಾರ್ಮಿಕರಲ್ಲಿ ಬಹುತೇಕ 18ರಿಂದ 36 ವರ್ಷ ವಯೋಮಿತಿಯವರಾಗಿದ್ದು, ಅವರ ಆಯ್ಕೆ ಕಾಂಗ್ರೆಸ್ -ಆರ್ ಜೆಡಿಯ ಮಹಾಘಟಬಂಧನ್ ಪರ ಇದೆ.

Bihar Exit Poll Results 2020: India Today-Axis My India migrant workers back Tejashwi

ಬಿಹಾರದ ಸಿಎಂ ಯಾರಾಗಬೇಕು?:
ತೇಜಸ್ವಿ ಯಾದವ್: 44%, 18 -35 ವರ್ಷದವರ ಆಯ್ಕೆ 47%
ನಿತೀಶ್ ಕುಮಾರ್: 35% 18 -35 ವರ್ಷದವರ ಆಯ್ಕೆ 36%
ಚಿರಾಗ್ ಪಾಸ್ವಾನ್: 7%
ಉಪೇಂದ್ರ ಕುಶ್ವಾಹ: 4%

ಬಿಹಾರ ಚುನಾವಣೆ: ಇಂಡಿಯಾ ಟುಡೇ EXIT poll ಅಪ್ಡೇಟ್ಸ್ಬಿಹಾರ ಚುನಾವಣೆ: ಇಂಡಿಯಾ ಟುಡೇ EXIT poll ಅಪ್ಡೇಟ್ಸ್

ಕೇಂದ್ರ ಸರ್ಕಾರದ ನೆರವಿನಿಂದ ಶ್ರಮಿಕ್ ರೈಲುಗಳನ್ನು ಓಡಿಸಲಾಯಿತು. ಆದರೆ, ಲಕ್ಷಾಂತರ ವಲಸೆ ಕಾರ್ಮಿಕರು ಸಾವಿರಾರು ಕಿ.ಮೀ ದೂರ ನಡೆದುಕೊಂಡು ಸಾಗಬೇಕಾದ ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇತರೆ ರಾಜ್ಯಗಳಲ್ಲಿದ್ದ ಬಿಹಾರ ಮೂಲದವರನ್ನು ವಾಪಸ್ ಕರೆಸಿಕೊಳ್ಳುವಲ್ಲಿ ನಿತೀಶ್ ಸರ್ಕಾರ ವಿಳಂಬ ಮಾಡಿತು.

Bihar Exit Poll Results 2020: India Today-Axis My India migrant workers back Tejashwi

ಆಡಳಿತ ವೈಫಲ್ಯ ಎಂದ ಸಮೀಕ್ಷೆ
ಆಡಳಿತ ವೈಫಲ್ಯದ ಕಾರಣ ವಲಸೆ ಕಾರ್ಮಿಕರಿಗೆ ಸೂಕ್ತ ನೆಲೆ, ಬೆಲೆ ಸಿಗಲಿಲ್ಲ. ಮುಖ್ಯವಾಗಿ ಕೆಲಸ ಇಲ್ಲದಂಥ ಪರಿಸ್ಥಿತಿ, ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿಯಲ್ಲಿ ಬದುಕನ್ನು ಇನ್ನಷ್ಟು ದುರ್ಬರಗೊಳಿಸಿತು.

2018ರಲ್ಲಿ ನಿರುದ್ಯೋಗ ಪ್ರಮಾಣ 7.2%ಇದ್ದದ್ದು 2019ರಲ್ಲಿ 10.2%ಕ್ಕೇರಿಕೆಯಾಯಿತು. 30 ಲಕ್ಷ ವಲಸಿಗರ ಸಮಸ್ಯೆ ರಾಜ್ಯ ಸರ್ಕಾರದ ವ್ಯಾಪ್ತಿ ಮೀರಿದ ಸಮಸ್ಯೆಯಾಗಿತ್ತು ಎಂದು ಭಾರತದ ಆರ್ಥಿಕ ಪರಿಶೀಲನಾ ಕೇಂದ್ರ ಸಿಎಂಐಇ ವರದಿ ಮಾಡಿದೆ.

English summary
Bihar Election Exit Poll Results 2020 in Kannada: India Today-Axis My India is out migrant workers backed Tejashwi Yadav than Nitish kumar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X