ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ: 5 ವರ್ಷಗಳಲ್ಲೇ ಮಾಜಿ ಸಿಎಂ ಆಸ್ತಿಯಲ್ಲಿ 16 ಲಕ್ಷ ಇಳಿಕೆ!

|
Google Oneindia Kannada News

ಪಾಟ್ನಾ, ಅಕ್ಟೋಬರ್.17: ಬಿಹಾರ ವಿಧಾನಸಭಾ ಚುನಾವಣೆ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಅವರು ತಮ್ಮ ಆದಾಯ ಮತ್ತು ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅವರ ಆಸ್ತಿ ಪ್ರಮಾಣದಲ್ಲಿ ಶೇ.26ರಷ್ಟು ಇಳಿಕೆಯಾಗಿದೆ.

ಇಮಾಮ್ ಗಂಜ್ ವಿಧಾನಸಭಾ ಕ್ಷೇತ್ರದಿಂದ ಹಿಂದೂಸ್ತಾನ್ ಅವಂ ಮೋರ್ಚಾ ಅಭ್ಯರ್ಥಿಯಾಗಿ ಜಿತನ್ ರಾಮ್ ಮಾಂಜಿ ಅವರು ಸ್ಪರ್ಧಿಸಿದ್ದಾರೆ. ಎನ್ ಡಿಎ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಹಿಂದೂಸ್ತಾನ್ ಅವಂ ಮೋರ್ಚಾಗೆ ಜೆಡಿಯು ಏಳು ಕ್ಷೇತ್ರಗಳನ್ನು ಬಿಟ್ಟು ಕೊಟ್ಟಿದೆ.

'ನಾನು ಮೋದಿಯ ಹನುಮಂತ, ಬೇಕಿದ್ದರೆ ಎದೆ ಸೀಳಿ ತೋರಿಸುತ್ತೇನೆ''ನಾನು ಮೋದಿಯ ಹನುಮಂತ, ಬೇಕಿದ್ದರೆ ಎದೆ ಸೀಳಿ ತೋರಿಸುತ್ತೇನೆ'

ಕಳೆದ 2015ರಲ್ಲಿ ಜಿತನ್ ರಾಮ್ ಮಾಂಜಿ ಅವರು ಹೊಂದಿದ್ದ ಆಸ್ತಿ ಪ್ರಮಾಣ ಮತ್ತು 2020ರ ವೇಳೆಗೆ ಅವರು ಹೊಂದಿರುವ ಸ್ಥಿರಾಸ್ತಿ ಮತ್ತು ಚರಾಸ್ತಿ ಮೌಲ್ಯದ ಬಗ್ಗೆ ಘೋಷಿಸಿಕೊಂಡಿದ್ದಾರೆ. ಒಟ್ಟು ಆಸ್ತಿ ಮೌಲ್ಯ 44.38 ಲಕ್ಷ ಎಂದು ಹೇಳಿಕೊಂಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಮಾಜಿ ಮುಖ್ಯಮಂತ್ರಿಯ ಆಸ್ತಿ ಮೌಲ್ಯದಲ್ಲಿನ ವ್ಯತ್ಯಾಸವನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಜಿತನ್ ರಾಮ್ ಮಾಂಜಿ ಚರಾಸ್ತಿ ಎಷ್ಟಿದೆ?

ಜಿತನ್ ರಾಮ್ ಮಾಂಜಿ ಚರಾಸ್ತಿ ಎಷ್ಟಿದೆ?

ಚರಾಸ್ತಿ - 2015 - 2020

ಕೈಯಲ್ಲಿರುವ ನಗದು - 85000 - 88500

ಬ್ಯಾಂಕ್ ಬ್ಯಾಲೆನ್ಸ್ - 3352537 - 1834799

ಷೇರು ಮತ್ತು ಬಾಂಡ್ - ಇಲ್ಲ - ಇಲ್ಲ

ಇತರೆ ಹೂಡಿಕೆ - ಇಲ್ಲ - ಇಲ್ಲ

ಆಭರಣ - 350000 - 460000

ವಾಹನ - 720000 - 660000

ಇತರೆ - 300000 - 195000

ಒಟ್ಟು ಚರಾಸ್ತಿ - 4807537 - 3238899

ಜಿತನ್ ರಾಮ್ ಮಾಂಜಿ ಸ್ಥಿರಾಸ್ತಿ ಮೌಲ್ಯ

ಜಿತನ್ ರಾಮ್ ಮಾಂಜಿ ಸ್ಥಿರಾಸ್ತಿ ಮೌಲ್ಯ

ಸ್ಥಿರಾಸ್ತಿ - 2015 - 2020

ಕೃಷಿ ಭೂಮಿ - ಇಲ್ಲ - ಇಲ್ಲ

ಕೃಷಿಯೇತರ ಭೂಮಿ - ಇಲ್ಲ - ಇಲ್ಲ

ವಾಣಿಜ್ಯ ಭೂಮಿ - ಇಲ್ಲ - ಇಲ್ಲ

ನಿವಾಸ - 1200000 - 1200000

ಇತರೆ - ಇಲ್ಲ - ಇಲ್ಲ

ಒಟ್ಟು ಸ್ಥಿರಾಸ್ತಿ - 1200000 - 1200000

ಮಾಜಿ ಮುಖ್ಯಮಂತ್ರಿ ವಿರುದ್ಧ 6 ಕೇಸ್

ಮಾಜಿ ಮುಖ್ಯಮಂತ್ರಿ ವಿರುದ್ಧ 6 ಕೇಸ್

ಬಿಹಾರದ 23ನೇ ಮುಖ್ಯಮಂತ್ರಿಯಾಗಿ 2014ರ ಮೇ.20 ರಿಂದ 2015ರ ಫೆಬ್ರವರಿ.20ವರೆಗೂ ಆಡಳಿತ ನಡೆಸಿದ ಜಿತನ್ ರಾಮ್ ಮಾಂಜಿ ವಿರುದ್ಧವೂ ಆರು ಕ್ರಿಮಿನಲ್ ಕೇಸ್ ಗಳು ಬಾಕಿ ಉಳಿದಿವೆ. ಈ ಪೈಕಿ ಮೂರು ಪ್ರಕರಣಗಳು 2014ರಲ್ಲಿ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ್ದಾಗಿವೆ ಎಂದು ಸ್ವತಃ ಜಿತನ್ ರಾಮ್ ಮಾಂಜಿ ಅವರು ಘೋಷಿಸಿಕೊಂಡಿದ್ದಾರೆ.

Recommended Video

ಲಸಿಕೆ ಸಿಗತ್ತೋ ಇಲ್ವೋ ಗೊತ್ತಿಲ್ಲಾ ! ಆದ್ರೆ ಇದು ಮಾತ್ರ Ready ಇರ್ಬೇಕು | Oneindia Kannada
ಬಿಹಾರದಲ್ಲಿ ಮೂರು ಹಂತಗಳಲ್ಲಿ ಮತದಾನ

ಬಿಹಾರದಲ್ಲಿ ಮೂರು ಹಂತಗಳಲ್ಲಿ ಮತದಾನ

ಕಳೆದ 2015ರ ಬಿಹಾರ ವಿಧಾನಸಭ ಚುನಾವಣೆಯಲ್ಲಿ 243 ಕ್ಷೇತ್ರಗಳ ಪೈಕಿ ರಾಷ್ಟ್ರೀಯ ಜನತಾ ಪಕ್ಷವೊಂದೇ 80 ಸ್ಥಾನಗಳನ್ನು ಪಡೆದುಕೊಂಡಿದ್ದು, ಅತಿದೊಡ್ಡ ಪಕ್ಷ ಎನಿಸಿತ್ತು. ಜೆಡಿಯು 71 ಹಾಗೂ ಕಾಂಗ್ರೆಸ್ 27 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಕಳೆದ ಸಪ್ಟೆಂಬರ್.25ರಂದು ಕೇಂದ್ರ ಚುನಾವಣಾ ಆಯೋಗವು ಬಿಹಾರದಲ್ಲಿ ಮೂರು ಹಂತಗಳಲ್ಲಿ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಿಸಿತು. ಅಕ್ಟೋಬರ್.28 ಮೊದಲ ಹಂತದ ಚುನಾವಣೆ, ನವೆಂಬರ್.03 ಎರಡನೇ ಹಂತದ ಚುನಾವಣೆ ಮತ್ತು ನವೆಂಬರ್.07ರಂದು ಮೂರನೇ ಹಂತದ ಚುನಾವಣೆ ನಡೆಯಲಿದೆ.

English summary
Bihar Ex CM Jitan Ram Manjhi Asset Declaration. 26 Percent Assets Decreased In Five Years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X