• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರ ಚುನಾವಣೆ; ಸಮಾಜವಾದಿ ಪಕ್ಷದಿಂದ ಮಹತ್ವದ ಘೋಷಣೆ

|

ಪಾಟ್ನಾ, ಸೆಪ್ಟೆಂಬರ್ 22 : ಬಿಹಾರ ವಿಧಾನಸಭೆ ಚುನಾವಣೆ ಲೆಕ್ಕಾಚಾರಗಳು ಜೋರಾಗಿವೆ. ಸಮಾಜವಾದಿ ಪಕ್ಷ ಚುನಾವಣೆ ಕುರಿತು ಮಹತ್ವದ ಘೋಷಣೆಯನ್ನು ಮಾಡಿದೆ. ಅಕ್ಟೋಬರ್‌ನಲ್ಲಿ ಬಿಹಾರ ವಿಧಾನಸಭೆಯ 243 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗುವ ನಿರೀಕ್ಷೆ ಇದೆ.

ಮಂಗಳವಾರ ಸಮಾಜವಾದಿ ಪಕ್ಷ ಬಿಹಾರ ವಿಧಾನಸಭಾ ಚುನಾವಣೆ ಕಣಕ್ಕಿಳಿಯುವುದಿಲ್ಲ ಎಂದು ಘೋಷಣೆ ಮಾಡಿದೆ. ಆದರೆ, ಪಕ್ಷ ಆರ್‌ಜೆಡಿ ಪಕ್ಷಕ್ಕೆ ಚುನಾವಣೆಯಲ್ಲಿ ಬೆಂಬಲವನ್ನು ನೀಡಲಿದೆ. ಈ ಘೋಷಣೆ ಚುನಾವಣೆ ಮೇಲೆ ಯಾವ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ.

ಜೆಡಿಯು-ಎಲ್‌ಜೆಪಿ ಕಿತ್ತಾಟ ಬಿಹಾರ ರಾಜಕೀಯವನ್ನು ಬದಲಿಸುತ್ತದೆಯೇ?

"ಪಕ್ಷದಲ್ಲಿ ಚರ್ಚೆ ನಡೆಸಿ ಚುನಾವಣಾ ಕಣಕ್ಕಿಳಿಯದಿರಲು ತೀರ್ಮಾನಿಸಲಾಗಿದೆ" ಎಂದು ಸಮಾಜವಾದಿ ಪಕ್ಷದ ನಾಯಕ ಉದಯವೀರ್ ಸಿಂಗ್ ಹೇಳಿದ್ದಾರೆ. ಬಿಹಾರದಲ್ಲಿ ಪಕ್ಷ ಬಲಿಷ್ಠ ನೆಲೆಯನ್ನು ಹೊಂದಿಲ್ಲ.

ಬಿಹಾರ ಮುಖ್ಯಮಂತ್ರಿ ಎದೆಯಲ್ಲಿ ಢವಢವ ಹೆಚ್ಚಿಸಿದ ಜಾಹೀರಾತು!

2015ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಮಾಜವಾದಿ ಪಕ್ಷ ಸೀಟು ಹಂಚಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಆರ್‌ಜೆಡಿ, ಜೆಡಿಯು ಹಾಗೂ ಕಾಂಗ್ರೆಸ್ ಮಾಡಿಕೊಂಡಿದ್ದ ಮಹಾ ಮೈತ್ರಿಕೂಟದಿಂದ ಹೊರಗುಳಿದಿತ್ತು ಮತ್ತು ಎನ್‌ಸಿಪಿಯೊಂದಿಗೆ ಸೇರಿ ಕಣಕ್ಕಿಳಿದಿತ್ತು.

ಬಿಹಾರ ಚುನಾವಣೆ: ಎನ್‌ಡಿಎ ಮೈತ್ರಿಕೂಟ ಸೇರಲು ಮುಂದಾದ ಜಿತನ್ ರಾಮ್ ಮಾಂಝಿ

ಚುನಾವಣೆಗೆ ಏಕೆ ಸ್ಫರ್ಧೆ ಇಲ್ಲ

ಚುನಾವಣೆಗೆ ಏಕೆ ಸ್ಫರ್ಧೆ ಇಲ್ಲ

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಎರಡು ಕಾರಣವನ್ನು ನೀಡಿದೆ. ಸಮಾನ ಮಾನಸ್ಕ ಪಕ್ಷಗಳನ್ನು ದುರ್ಬಲಗೊಳಿಸಲು ಪಕ್ಷ ಬಯಸುವುದಿಲ್ಲ. ಬಿಹಾರದಲ್ಲಿ ಪಕ್ಷ ಬಲಿಷ್ಠ ನೆಲೆ ಹೊಂದಿಲ್ಲ. ಪಕ್ಷ ತನ್ನ ಶಕ್ತಿ ಹಾಗೂ ಸಂಪನ್ಮೂಲಗಳನ್ನು ವ್ಯರ್ಥ ಮಾಡಲು ಬಯಸಲ್ಲ ಎಂದು ಹೇಳಿದೆ.

ಆರ್‌ಜೆಡಿಗೆ ಚುನಾವಣೆಯಲ್ಲಿ ಬೆಂಬಲ

ಆರ್‌ಜೆಡಿಗೆ ಚುನಾವಣೆಯಲ್ಲಿ ಬೆಂಬಲ

ಬಿಹಾರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಕಣಕ್ಕಿಳಿಯುವುದಿಲ್ಲ. ಆದರೆ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ)ಗೆ ಬೆಂಬಲ ನೀಡಲಾಗುತ್ತದೆ. ಬಿಜೆಪಿ ಸೋಲಿಸಲು ರಚನೆ ಮಾಡಿಕೊಂಡಿರುವ ಮೈತ್ರಿಕೂಟ ಬೆಂಬಲಿಸಿದ್ದೇವೆ ಎಂದು ಸಮಾಜವಾದಿ ಪಕ್ಷದ ನಾಯಕರು ಹೇಳಿದ್ದಾರೆ.

2010ರ ಚುನಾವಣೆ ಫಲಿತಾಂಶ

2010ರ ಚುನಾವಣೆ ಫಲಿತಾಂಶ

2010ರ ಬಿಹಾರ ಚುನಾವಣೆಯಲ್ಲಿ ರಾಜ್ಯದಲ್ಲಿ 146 ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ ಕಣಕ್ಕಿಳಿದಿತ್ತು. ಆದರೆ, ಯಾವುದೇ ಸೀಟುಗಳಲ್ಲಿ ಗೆಲುವು ಸಾಧಿಸಿರಲಿಲ್ಲ. ಈ ಬಾರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದು ಪಕ್ಷ ಘೋಷಣೆ ಮಾಡಿದೆ.

ಅಕ್ಟೋಬರ್‌ನಲ್ಲಿ ಘೋಷಣೆ

ಅಕ್ಟೋಬರ್‌ನಲ್ಲಿ ಘೋಷಣೆ

ಬಿಹಾರ ವಿಧಾನಸಭೆಯ 243 ಸ್ಥಾನಗಳಿಗೆ ಅಕ್ಟೋಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಚುನಾವಣಾ ಆಯೋಗ ಅಕ್ಟೋಬರ್ 17ರ ಬಳಿಕ ಚುನಾವಣಾ ವೇಳಾಪಟ್ಟಿಯನ್ನು ಘೋಷಣೆ ಮಾಡಲಿದೆ.

English summary
Samajwadi Party announced that it will not contest the Bihar assembly elections 2020. Party will support the Rashtriya Janata Dal (RJD) in the elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X