ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ: ವರ್ಚುಯಲ್ ಪ್ರಚಾರಕ್ಕೆ ಸೋನಿಯಾ, ಎಂಎಂ ಸಿಂಗ್ ಸೀಮಿತ!

|
Google Oneindia Kannada News

ಪಾಟ್ನಾ, ಅ. 11: ಬಿಹಾರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಕಾಂಗ್ರೆಸ್ ಬಿಡುಗಡೆಗೊಳಿಸಿದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ 30 ಮಂದಿ ನಾಯಕರಿಗೆ ಸ್ಥಾನ ನೀಡಲಾಗಿದೆ. ಆದರೆ, ಈ ಪಟ್ಟಿಯಲ್ಲಿ ಹೆಸರಿಸಲಾಗಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಚುನಾವಣಾ ಪ್ರಚಾರದಿಂದ ದೂರ ಉಳಿಯಲಿದ್ದಾರೆ ಎಂಬ ಸುದ್ದಿ ಭಾನುವಾರ ಬಂದಿದೆ.

ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ, ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಆರೋಗ್ಯದ ಹಿತದೃಷ್ಟಿಯಿಂದ ಇಬ್ಬರು ವರ್ಚ್ಯುಯಲ್ ಸಮಾವೇಶದಲ್ಲಿ ಮಾತ್ರ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ. ಈ ನಡುವೆ ವರ್ಚುಯಲ್ ಸಮಾವೇಶಗಳು ಬಿಹಾರದಲ್ಲಿ ವಿಫಲವಾಗಿದ್ದನ್ನು ಇಲ್ಲಿ ಗಮನಿಸಬಹುದು.

ನಿತೀಶ್, ಚಿರಾಗ್, ತೇಜಸ್ವಿ ಅಲ್ಲದೆ ಮತ್ತೊಬ್ಬ ಸಿಎಂ ಅಭ್ಯರ್ಥಿ ಸಜ್ಜುನಿತೀಶ್, ಚಿರಾಗ್, ತೇಜಸ್ವಿ ಅಲ್ಲದೆ ಮತ್ತೊಬ್ಬ ಸಿಎಂ ಅಭ್ಯರ್ಥಿ ಸಜ್ಜು

ಸ್ಟಾರ್ ಪ್ರಚಾರಕರ ಸಂಖ್ಯೆಯನ್ನು ಕೇಂದ್ರ ಚುನಾವಣಾ ಆಯೋಗವು 40 ರಿಂದ 30ಕ್ಕೆ ಇಳಿಕೆ ಮಾಡಿದ ಬೆನ್ನಲ್ಲೇ ಸಂಸದ ರಾಹುಲ್ ಗಾಂಧಿ, ಅಶೋಕ್ ಗೆಹ್ಲೋಟ್, ಭೂಪೇಶ್ ಬಗೇಲ್, ಅಮರೀಂದರ್ ಸಿಂಗ್, ರಣದೀಪ್ ಸುರ್ಜೇವಾಲ, ಕೀರ್ತಿ ಅಜಾದ್, ಸಚಿನ್ ಪೈಲಟ್, ಶತ್ರುಘ್ನ ಸಿನ್ಹಾ, ಶಕೀಲ್ ಅಹ್ಮದ್ ಮೀರಾ ಕುಮಾರ್, ಗುಲಾಮ್ ನಬಿ ಆಜಾದ್, ಪ್ರಿಯಾಂಕಾ ಗಾಂಧಿ ವಾದ್ರಾ, ತಾರೀಕ್ ಅನ್ವರ್ ಸೇರಿದಂತೆ ಒಟ್ಟು 30 ಮಂದಿ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿ, ಆಯೋಗಕ್ಕೆ ಕಳಿಸಿದೆ.

Bihar Elections 2020: Sonia, Manmohan unlikely to campaign

ಕೊರೊನಾವೈರಸ್ ಹಿನ್ನಲೆಯಲ್ಲಿ ಆಯೋಗದ ನಿರ್ದೇಶನದಂತೆ ಚುನಾವಣಾ ಪ್ರಚಾರ ಆಯೋಜಿಸಲು ಬಿಹಾರ ಕಾಂಗ್ರೆಸ್ ಉಸ್ತುವಾರಿ ಶಕ್ತಿಸಿಂಗ್ ಗೋಯೆಲ್ , ಬಿಹಾರ ಕಾಂಗ್ರೆಸ್ ಅಧ್ಯಕ್ಷ ಮದನ್ ಮೋಹನ್ ಝಾ, ಶಾಸಕಾಂಗ ಪಕ್ಷದ ನಾಯಕ ಸದಾನಂದ್ ಸಿಂಗ್ ಅವರು ಸಜ್ಜಾಗಿದ್ದಾರೆ.

ಬಿಹಾರ ಚುನಾವಣೆ: ಬಿಜೆಪಿ ರೆಬೆಲ್‌ಗಳ ಆಶ್ರಯತಾಣವಾದ ಎಲ್‌ಜೆಪಿಬಿಹಾರ ಚುನಾವಣೆ: ಬಿಜೆಪಿ ರೆಬೆಲ್‌ಗಳ ಆಶ್ರಯತಾಣವಾದ ಎಲ್‌ಜೆಪಿ

243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ ಅವಧಿಯು ನವೆಂಬರ್ 29 ರಂದು ಕೊನೆಗೊಳ್ಳಲಿದೆ. ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಅಕ್ಟೋಬರ್ 28ರಂದು 16 ಜಿಲ್ಲೆಗಳ 71 ಕ್ಷೇತ್ರಗಳಿಗೆ 31,000 ಮತಗಟ್ಟೆಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 03ರಂದು ಎರಡನೆಯ ಹಂತದಲ್ಲಿ 17 ಜಿಲ್ಲೆಗಳಲ್ಲಿ 94 ಕ್ಷೇತ್ರಗಳಿಗೆ 42,000 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ.

ಬಿಹಾರ ಚುನಾವಣೆಗೆ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಬಿಹಾರ ಚುನಾವಣೆಗೆ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿ

ನವೆಂಬರ್ 07ರಂದು ಮೂರನೇ ಹಂತದಲ್ಲಿ 78 ಕ್ಷೇತ್ರಗಳಿಗೆ 15 ಜಿಲ್ಲೆಗಳಲ್ಲಿ ಅಂದಾಜು 33,500 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಅಂತಿಮವಾಗಿ ನವೆಂಬರ್10ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶವು ಹೊರ ಬೀಳಲಿದೆ.

ಬಿಹಾರದಲ್ಲಿ ಎನ್‌ಸಿಪಿ ಪರ 40 ಸ್ಟಾರ್ ಪ್ರಚಾರಕರು ಕಣಕ್ಕೆಬಿಹಾರದಲ್ಲಿ ಎನ್‌ಸಿಪಿ ಪರ 40 ಸ್ಟಾರ್ ಪ್ರಚಾರಕರು ಕಣಕ್ಕೆ

2015ರಲ್ಲಿ ರಾಷ್ಟ್ರೀಯ ಜನತಾ ದಳ 80 ಸ್ಥಾನ, ಜನತಾ ದಳ ಯುನೈಟೆಡ್ 71, ಕಾಂಗ್ರೆಸ್ 27 ಗಳಿಸಿದ್ದವು. ಬಿಜೆಪಿ 53 ಸ್ಥಾನ, ಎಲ್ ಜೆಪಿ 2 ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ ಸೆಕ್ಯುಲರ್ 1, ಇತರೆ 10 ಸ್ಥಾನ. ಬಿಜೆಪಿ ಶೇ 24ರಷ್ಟು ಮತಗಳಿಕೆ, ಅರ್ ಜೆ ಡಿ ಶೇ 18 ಹಾಗೂ ಜೆಡಿಯು ಶೇ 17ರಷ್ಟು, ಕಾಂಗ್ರೆಸ್ ಶೇ 7, ಎಲ್ ಜೆಪಿ ಶೇ 4.8ರಷ್ಟು ಮತ ಗಳಿಸಿದ್ದವು.

English summary
The Congress on Saturday released a list of 30 star campaigners for the first phase of Bihar assembly polls on October 28, with party president Sonia Gandhi, Rahul Gandhi and former prime minister Manmohan Singh leading them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X